ದೇಶದ ರಸ್ತೆಗೆ ಶೀಘ್ರದಲ್ಲಿ ಆಗಸ್ಟಾ ಸೂಪರ್ ಬೈಕ್

Agusta Joins Super Bike Race In India
ದೇಶದ ರಸ್ತೆಗೆ ಇನ್ನೊಂದು ಸೂಪರ್ ಬೈಕ್ ಬರಲಿದೆ. ಆಟೋಕಾರ್ ಮ್ಯಾಗಜಿನ್ ವರದಿಯ ಪ್ರಕಾರ ಮುಂದಿನ ವರ್ಷ ದೇಶಕ್ಕೆ ಇಟಲಿಯ ಸೂಪರ್ ಬೈಕ್ ತಯಾರಿಕಾ ಕಂಪನಿ ಆಗಸ್ಟಾ ಬೈಕೊಂದನ್ನು ಪರಿಚಯಿಸಲಿದೆಯಂತೆ. ಈ ಬೈಕ್ ದೆಹಲಿ ಆಟೋ ಶೋನಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ.

ಈಗಾಗಲೇ ದೇಶದ ರಸ್ತೆಯಲ್ಲಿ ಡುಕಾಟಿ, ಹ್ಯೊಸಂಗ್ ಮತ್ತು ಹರ್ಲಿ ಡೇವಿಡ್ ಸನ್ ಮುಂತಾದ ಸೂಪರ್ ಬೈಕುಗಳಿವೆ. ಅಗಸ್ಟಾ ಎಂವಿ ಸೂಪರ್ ಬೈಕ್ ಕೂಡ ಈ ಸೆಗ್ಮೆಂಟಿಗೆ ಬರಲಿದೆ. ಆಗಸ್ಟಾ ಕಂಪನಿಯ ಎಫ್4, ಎಫ್3 ಮತ್ತು ಬ್ರುಟೆಲ್ಸ್ ಮಾದರಿಗಳು ಶೀಘ್ರದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಈ ಮೂರು ಆವೃತ್ತಿಗಳು ಭಾರತದ ರಸ್ತೆಗಿಳಿಯುವ ನಿರೀಕ್ಷೆಯಿದೆ.

ಆಗಸ್ಟಾ ಸೂಪರ್ ಬೈಕ್ ಭಾರತಕ್ಕೆ ಆಗಮಿಸುವ ಕುರಿತು ಕಂಪನಿಯ ಸಿಇಒ ಗಿಯೊವಾನಿ ಖಚಿತಪಡಿಸಿದ್ದಾರೆ. ಆಗಸ್ಟಾ ಕಂಪನಿಯು ಸಿಬಿಯು ಮೂಲಕ ದೇಶಕ್ಕೆ ಬೈಕುಗಳನ್ನು ಆಮದುಮಾಡಿಕೊಳ್ಳಲಿದೆ. ಸಿಬಿಯು ಅಂದರೆ ಸಂಪೂರ್ಣವಾಗಿ ವಿದೇಶದಲ್ಲಿ ಉತ್ಪಾದಿಸಿ ದೇಶಕ್ಕೆ ರಫ್ತು ಮಾಡುವುದು ಅಥವಾ ಕಂಪ್ಲಿಟಿಲಿ ಬುಲ್ಡ್ ಯುನಿಟ್.

ಆಗಸ್ಟಾ ಕಂಪನಿಯ ಪ್ರಮುಖ ಮಾಡೆಲ್ ಎಂದರೆ ಎಫ್4. ಇದು ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. 2012 ಆಗಸ್ಟಾ ಎಫ್4 ಆವೃತ್ತಿ ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ದೊರಕುತ್ತಿದೆ. ಇದು 4 ಸಿಲಿಂಡರ್ ಎಂಜಿನ್ ಹೊಂದಿದ್ದು 201 ಹಾರ್ಸ್ ಪವರ್ ನೀಡುತ್ತದೆ. ಆಗಸ್ಟಾ ಕಂಪನಿಯ ಅಗ್ಗದ ಬೈಕೆಂದರೆ ಬ್ರುಟೆಲ್. ಈ ಬೈಕ್ 1078 ಸಿಸಿ ಎಂಜಿನ್ ಹೊಂದಿದ್ದು 144 ಹಾರ್ಸ್ ಪವರ್ ನೀಡುತ್ತದೆ.

ಭಾರತದಲ್ಲಿ ಆಗಸ್ಟಾ ಬೈಕುಗಳ ದರ ಎಷ್ಟಿರಲಿದೆ ಎಂಬ ಮಾಹಿತಿ ದೊರಕಿಲ್ಲ.

Most Read Articles

Kannada
English summary
The race for Super bikes in India is hotting up. Autocar, the Indian auto magazine has reported that Agusta, the Italian super bike manufacturer is planning to launch itself in India in 2012. It has also been reported that Agusta will be making an entry in the forthcoming 2012 Delhi Auto Expo before launching its products in the first quarter of the year.
Story first published: Tuesday, December 6, 2011, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X