ರಾಯಲ್ ಎನ್‌ಫೀಲ್ಡ್ ಡೀಸೆಲ್ ಬುಲೆಟ್ ಬರುತ್ತಾ?

Posted By:
To Follow DriveSpark On Facebook, Click The Like Button
ರಾಯಲ್ ಎನ್‌ಫೀಲ್ಡ್ ಡೀಸೆಲ್ ಬುಲೆಟ್ ನಿರೀಕ್ಷಿಸುತ್ತಿದ್ದವರಿಗಿದು ಕಹಿಸುದ್ದಿ. ಸದ್ಯ ಕಂಪನಿಗೆ ಡೀಸೆಲ್ ಎಂಜಿನಿನ ಬುಲೆಟ್ ನಿರ್ಮಿಸುವ ಕುರಿತು ಯಾವುದೇ ಯೋಜನೆಯಿಲ್ಲವಂತೆ. ಕಂಪನಿಯು ತನ್ನ ಬುಲೆಟ್ ಬೈಕುಗಳಿಗೆ ಡೀಸೆಲ್ ಎಂಜಿನ್ ಫಿಟ್ ಮಾಡಲಿದೆ ಎನ್ನುವ ವದಂತಿ ಈ ಹಿಂದೆ ಇತ್ತು.

ಆದರೆ ಸದ್ಯ ಅಂತಹ ಯಾವುದೇ ಯೋಜನೆಗಳಿಲ್ಲ. ಭವಿಷ್ಯದಲ್ಲಿ ಬೇಕಾದ್ರೆ ಈ ಕುರಿತು ಆಲೋಚಿಸಬಹುದು ಎಂದು ಕಂಪನಿಯ ಪ್ರಮುಖ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಹಿಂದೊಮ್ಮೆ ಡೀಸೆಲ್ ಎಂಜಿನ್ ಚಾಲೀತ ಬುಲೆಟ್ ಅಭಿವೃದ್ಧಿಪಡಿಸಿತ್ತು. ಆದರೆ ಪರಿಸರಕ್ಕೆ ಸೂಸುವ ಇಂಗಾಲ ಇತ್ಯಾದಿಗಳ ಪ್ರಮಾಣ ಹೆಚ್ಚಿದ್ದರಿಂದ ಡೀಸೆಲ್ ಬುಲೆಟ್ ಉತ್ಪಾದನೆ ಸ್ಥಗಿತಗೊಂಡಿತ್ತು.

ಡೀಸೆಲ್ ಬುಲೆಟ್ ಬೈಕುಗಳು ಕಡಿಮೆ ದರಕ್ಕೆ ದೊರಕಬಹುದು. ಆದರೆ ಅವುಗಳ ಕಾರ್ಯಕ್ಷಮತೆ ಪೆಟ್ರೋಲ್ ಬುಲೆಟ್‌ಗಳ ಮುಂದೆ ಸಪ್ಪೆ ಎನಿಸುತ್ತದೆ. ಡೀಸೆಲ್ ಬುಲೆಟ್ ಬೈಕ್ ಸವಾರಿ ಕೂಡ ಕೊಂಚ ಡಿಫರೆಂಟ್. ಅದರ ಡೀಸೆಲ್ ಪಂಪ್ ಇಡೀ ಬುಲೆಟ್ ಬೈಕನ್ನೇ ಗಡಗಡ ವೈಬ್ರೆಷನ್ ಮಾಡುತ್ತದೆ.

ಈಗ ಕಂಪನಿಯು ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500 ಬುಲೆಟ್ ಬೈಕುಗಳನ್ನು ಮಾರಾಟ ಮಾಡುತ್ತಿದೆ. ಇದರೊಂದಿಗೆ ಎಲೆಕ್ಟ್ರಾ ಮತ್ತು ಥಂಡರ್‌ಬರ್ಡ್ ಮಾಡೆಲ್‌ಗಳನ್ನೂ ಮಾರಾಟ ಮಾಡುತ್ತಿದೆ. ದೇಶದಿಂದ ರಾಯಲ್ ‌ಎನ್‌ಫೀಲ್ಡ್ ಬುಲೆಟ್‌ಗಳು ವಿದೇಶಿ ಮಾರುಕಟ್ಟೆಗೂ ರಫ್ತಾಗುತ್ತಿವೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Here is a sad news for those who put their trust in Royal Enfield, the bike maker reportedly wont be making diesel engined Bullets in the near future. Earlier, it was reported that the prestigious brand was planning to produce diesel engines for its motorcycles and thereby enter a new motorcycle segment.
Story first published: Tuesday, April 3, 2012, 9:55 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark