ಜಬ್ ತಕ್ ಹೈ ಜಾನ್‌ ಚಿತ್ರದಲ್ಲಿ ಶಾರೂಕ್ ರಾಯಲ್ ಸವಾರಿ!

Written By:

ಬುಲೆಟ್ ರಾಜ ಎಂದೇ ಖ್ಯಾತಿ ಪಡೆದಿರುವ ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ದಿನದಿಂದಲೇ ದಿನಕ್ಕೆ ಹೆಚ್ಚೆಚ್ಚು ಪ್ರಚಾರ ಗಿಟ್ಟಿಸುತ್ತಲೇ ಇವೆ. ಹೌದು, ಜಗತ್ತಿನೆಲ್ಲೆಡೆಯ ರಾಯನ್ ಎನ್‌ಫೀಲ್ಡ್ ಅಭಿಮಾನಿಗಳ ಖುಷಿ ಕೊಡುವಂತಹ ಸುದ್ದಿಯಿದ್ದು, ಬಾಲಿವುಡ್ ಕಿಂಗ್ ಖಾನ್ ಶಾರೂಕ್ ಖಾನ್ ಕೂಡಾ ಇದೇ ಬುಲೆಟ್‌ನಲ್ಲಿ ಸವಾರಿ ಮಾಡಲು ಇಷ್ಟಪಡುತ್ತಾರೆ.

ಯಶ್ ಚೋಪ್ರಾ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಬಾಲಿವುಡ್‌ನ ನೂತನ ಸೆನ್ಸಷನಲ್ 'ಜಬ್ ತಕ್ ಹೈ ಜಾನ್' ಚಿತ್ರದಲ್ಲಿ ಶಾರೂಕ್, ಸೇನಾ ಅಧಿಕಾರಿಯೊಬ್ಬರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಚಿತ್ರದಲ್ಲಿ ಶಾರೂಕ್ ಡೆಸರ್ಟ್ ಸ್ಟ್ರೋಮ್‌ ಓಡಿಸುತ್ತಿರುವ ದೃಶ್ಯ ಗಮನ ಸಳೆಯುತ್ತಿದೆ.

ಆಕರ್ಷಕ ಲುಕ್ ಹಾಗೂ ಗರಿಷ್ಠ ಎಂಜಿನ್ ಕ್ಷಮತೆ ಹೊಂದಿರುವ ರಾಯನ್ ಎನ್‌ಫೀಲ್ಡ್ ಬಗ್ಗೆ ದೂಸ್ರಾ ಮಾತೇ ಇಲ್ಲ. ಶಾರೂಕ್ ಸೇರಿದಂತೆ ನಟಿ ಅನುಷ್ಕಾ ಶರ್ಮಾ ಕೂಡಾ ಬುಲೆಟ್ ಮಾಜಾ ಉಡಾಯಿಸಿದ್ದಾರೆ.

ಜಬ್ ತಕ್ ಹೈ ಜಾನ್‌; ಶಾರೂಕ್ ರಾಯಲ್ ಸವಾರಿ

ಜಬ್ ತಕ್ ಹೈ ಜಾನ್ ಚಿತ್ರದಲ್ಲಿ ಶಾರೂಕ್ ಖಾನ್ ರಾಯಲ್ ಎನ್‌ಫೀಲ್ಡ್ ಓಡಿಸುತ್ತಿರುವುದು ಪ್ರಮುಖ ಆಕರ್ಷಣೆಗೆ ಕಾರಣವಾಗಿದ್ದು, ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ಜಬ್ ತಕ್ ಹೈ ಜಾನ್‌; ಶಾರೂಕ್ ರಾಯಲ್ ಸವಾರಿ!

ಪ್ರಮುಖವಾಗಿಯೂ ಯುವ ಜನಾಂಗವನ್ನು ಗುರಿಯಿರಿಸಿಕೊಂಡು ಬುಲೆಟ್ ಬೈಕ್‌ಗಳನ್ನು ರಾಯನ್ ಎನ್‌ಫೀಲ್ಡ್ ತಯಾರಿಸುತ್ತಿದೆ. ಅಲ್ಲದೆ ಹದಿಹರೆಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಜಬ್ ತಕ್ ಹೈ ಜಾನ್‌; ಶಾರೂಕ್ ರಾಯಲ್ ಸವಾರಿ!

ಲೇಹ್‌ ಮಂಜುಗಡ್ಡೆಯಿಂದ ಆವೃತ್ತವಾದ ಪರ್ವತ ಶಿಖರದಲ್ಲೂ ಶಾರೂಕ್ ಎನ್‌ಫೀಲ್ಡ್ ಸವಾರಿ ಅದ್ಭುತ. ಈ ಹಿಂದೆ 'ಜಿಂದಾಗಿ ನಾ ಮಿಲೇಗಿ' ಚಿತ್ರದಲ್ಲಿ ನಟಿ ಕತ್ರಿನಾ ಕೈಫ್ ಎನ್‌ಫೀಲ್ಡ್ ಬೈಕ್‌ನಲ್ಲಿ ಕಾಣಿಸಿಕೊಂಡಿದ್ದರು.

ಜಬ್ ತಕ್ ಹೈ ಜಾನ್‌; ಶಾರೂಕ್ ರಾಯಲ್ ಸವಾರಿ!

ಜಬ್ ತಕ್ ಹೈ ಜಾನ್ ಚಿತ್ರದಲ್ಲಿ ಕೇವಲ ಶಾರೂಕ್ ಮಾತ್ರವಲ್ಲದೆ ನಟಿ ಅನುಷ್ಕಾ ಶರ್ಮಾ ಕೂಡಾ ನೀಲಿ ಬಣ್ಣದ ಎನ್‌ಫೀಲ್ಡ್‌ ಬೈಕ್‌ನಲ್ಲಿ ಮಜಾ ಉಡಾಯಿಸಿದ್ದಾರೆ.

ಜಬ್ ತಕ್ ಹೈ ಜಾನ್‌; ಶಾರೂಕ್ ರಾಯಲ್ ಸವಾರಿ!

ರಾಯಲ್ ಎನ್‌ಫೀಲ್ಡ್ ಬೈಕ್ ಜತೆಗೆ ನಾಯಕ ಶಾರೂಕ್ ಪೋಸ್ಟರ್ ಭಾರಿ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಸೇನಾ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಶಾರೂಕ್ ರೈಡಿಂಗ್ ಬಗ್ಗೆ ದೂಸ್ರಾ ಮಾತಿಲ್ಲ.

ಜಬ್ ತಕ್ ಹೈ ಜಾನ್‌; ಶಾರೂಕ್ ರಾಯಲ್ ಸವಾರಿ!

ಜಬ್ ತಕ್ ಹೈ ಜಾನ್ ಚಿತ್ರದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಕಂಪನಿಯ ಒಟ್ಟು ಮೂರು ಬೈಕ್‌ಗಳನ್ನು ಬಳಸಿಕೊಳ್ಳಲಾಗಿದೆ. ಇದರಲ್ಲಿ ಡೆಸಾರ್ಟ್ ಸ್ಟ್ರೋಮ್, ಥಂಡರ್‌ಬರ್ಡ್ ಹಾಗೂ ಕ್ಲಾಸಿಕ್ 350 ಸೇರಿವೆ.

ಜಬ್ ತಕ್ ಹೈ ಜಾನ್‌; ಶಾರೂಕ್ ರಾಯಲ್ ಸವಾರಿ!

ಇತ್ತೀಚೆಗಷ್ಟೇ ಬಿಡುಗಡೆಗೊಂಡ ರಾಯನ್ ಎನ್‌ಫೀಲ್ಡ್‌ನ ಥಂಡರ್‌ಬರ್ಡ್ ಆವೃತ್ತಿಗೂ ಉತ್ತಮ ಬೇಡಿಕೆ ಕಂಡುಬಂದಿದೆ.

ಜಬ್ ತಕ್ ಹೈ ಜಾನ್‌; ಶಾರೂಕ್ ರಾಯಲ್ ಸವಾರಿ!

ಬಾಲಿವುಡ್ ಬಾದ್‌ಷಾ ಆಗಿರುವ ಶಾರೂಕ್ ಖಾನ್ ಕೂಡಾ ಪ್ರಸ್ತುತ ಬುಲೆಟ್ ರಾಜಾ ರಾಯನ್‌ ಎನ್‌ಫೀಲ್ಡ್ ಅಭಿಮಾನಿ ಎನಿಸಿಕೊಂಡಿದ್ದಾರೆ.

ಜಬ್ ತಕ್ ಹೈ ಜಾನ್‌; ಶಾರೂಕ್ ರಾಯಲ್ ಸವಾರಿ!

ಜಬ್ ತಕ್ ಹೈ ಜಾನ್ ಚಿತ್ರದಲ್ಲಿ ಶಾರೂಕ್ ರಾಯಲ್ ಸವಾರಿ

English summary
India's major two wheeler maker Royal Enfield's bike Desert Storm and Classic Battle Green is getting high popularity. Shahrukh Khan has ride Royal Enfield in his upcoming movie Jab Tak Hai Jaan.
Story first published: Thursday, November 15, 2012, 10:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark