ಸ್ಲಿಂಗ್‌ಶಾಟ್‌ನಂತೆ ಕಾಣುವ ಸುಜುಕಿ ಹಯಾಟೆ ರಸ್ತೆಗೆ

Posted By:
ಸುಜುಕಿ ಮೋಟರ್ ಸೈಕಲ್ ಕಂಪನಿಯು 112.8 ಸಿಸಿಯ ನೂತನ ಹಯಾಟೆ ಬೈಕನ್ನು ಇಂದು(ಮೇ 10)ರಂದು ರಸ್ತೆಗಿಳಿಸಿದೆ. ನೋಡಲು ಹಳೆಯ ಸ್ಲಿಂಗ್ ಶಾಟ್ ಬೈಕಿನಂತೆ ಹೊಸ ಹಯಾಟೆ ಕಾಣುತ್ತಿದೆ. ಆಕರ್ಷಕ ಗ್ರಾಫಿಕ್ಸ್ ವಿನ್ಯಾಸದೊಂದಿಗೆ ಆಗಮಿಸಿರುವ ಹಯಾಟೆ 8 ಲೀಟರಿನ ಇಂಧನ ಟ್ಯಾಂಕ್ ಹೊಂದಿದೆ.

ಹಯಾಟೆ ಬೈಕನ್ನು ಬಟನ್ ಮೂಲಕ ಸ್ಟಾರ್ಟ್ ಮಾಡಬಹುದಾಗಿದೆ. ಇದು ನಾಲ್ಕು ಸ್ಟ್ರೋಕಿನ 112.8 ಸಿಸಿಯ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ನಾಲ್ಕು ಸ್ಪೀಡಿನ ಗೇರ್ ಹೊಂದಿದೆ. ಎಲ್ಲಾ ಗೇರುಗಳನ್ನೂ ಕೆಳಮುಖವಾಗಿ ಶಿಫ್ಟ್ ಮಾಡಬೇಕು.

ಇದು 17 ಇಂಚಿನ ಅಲಾಯ್ ವೀಲ್ ರಿಮ್ ಹೊಂದಿದೆ. ಈ ಬೈಕಿನ ಕರ್ಬ್ ತೂಕ 112 ಕೆಜಿ. ಹೈಡ್ರೊಲಿಕ್ ಷಾಕಅಬ್ಸರ್ಬರ್ ಇರುವುದರಿಂದ ಆರಾಮವಾಗಿ ಸವಾರಿ ಮಾಡಬಹುದಾಗಿದೆ. ಕಂಪನಿಯು ನೂತನ ಹಯಾಟೆ ಬದುಕನ್ನು ಪ್ರಸಕ್ತ ರಸ್ತೆ ಮತ್ತು ಟ್ರೆಂಡಿಗೆ ಸೂಕ್ತವಾಗುವಂತೆ ವಿನ್ಯಾಸ ಮಾಡಿದೆ.

ಸುಜುಕಿ ಹಯಾಟೆ ಸದ್ಯ ಬೆಂಗಳೂರು ಮಾರುಕಟ್ಟೆಗೆ ಆಗಮಿಸಿಲ್ಲ. ಇಂದು ಈ ಬೈಕನ್ನು ಪುಣೆಯಲ್ಲಿ ಬಿಡುಗಡೆ ಮಾಡಿದೆ. ಇದರ ಪುಣೆ ಎಕ್ಸ್ ಶೋರೂಂ ದರ 40 ಸಾವಿರ ರು.ನಿಂದ 42 ಸಾವಿರ ರು. ಆಸುಪಾಸಿನಲ್ಲಿದೆ. ಇದು ಬಿಳಿ, ಹಸಿರು, ಗ್ರೇ, ಕೆಂಪು ಮತ್ತು ಕಪ್ಪು ಬಣ್ಣಗಳ ಆಯ್ಕೆಗಳಲ್ಲಿ ದೊರಕುತ್ತಿದೆ.

ಹಯಾಟೆ ಎಂದರೆ ಫ್ರೆಷ್ ಬ್ರೀಝ್ ಅಥವಾ ತಾಜಾ ತಂಗಾಳಿ ಎಂದರ್ಥ. ದೇಶದ ರಸ್ತೆಗೆ ಇದು ತಾಜಾ ಹೆಸರು. ಇದು ಸುಜುಕಿ ಸ್ಲಿಂಗ್ ಶಾಟ್ ಬೈಕಿಗಿಂತ ಸಣ್ಣ ಬೈಕಾಗಿದೆ. ಇದು ಅತ್ಯುತ್ತಮ ಮೈಲೇಜಿನ ಬೈಕ್ ಆಗಿದ್ದು, ನಿತ್ಯ ಸವಾರಿಗೆ ಸೂಕ್ತ.

ಸುಜುಕಿ ಹಯಾಟೆ ಬೈಕ್ ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 60 ಕಿ.ಮೀ. ಮೈಲೇಜ್ ನೀಡುತ್ತದೆ.

English summary
Japanese Two wheeler maker Suzuki has launched the Hayate commuter bike in India today(May 10). The new hayate equipped with a 112.8cc engine. The Hayate is priced at an affordable Rs 40,162(ex-showroom, Pune).
Story first published: Thursday, May 10, 2012, 13:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark