ರಸ್ತೆಗಿಳಿಯುವ ಮುನ್ನವೇ ಯಮಹಾ ರೇ ಸ್ಕೂಟರ್ ದಾಖಲೆ ಬುಕ್ಕಿಂಗ್

Posted By:
To Follow DriveSpark On Facebook, Click The Like Button
ಯಮಹಾ ಕಂಪನಿಯು ದೇಶಕ್ಕೆ ಪರಿಚಯಿಸಲಿರುವ ನೂತನ ರೇ ಸ್ಕೂಟರಿಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಮಹಾ ಡೀಲರುಗಳು ಈಗಾಗಲೇ ಸ್ಕೂಟರ್ ಬುಕ್ಕಿಂಗ್ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಆಶ್ಚರ್ಯವೆಂದರೆ ಕಂಪನಿಯ ನಿರೀಕ್ಷೆಯನ್ನು ಮೀರಿ ಈಗಾಗಲೇ ಒಂದೆರಡು ವಾರದಲ್ಲಿಯೇ ಸುಮಾರು 5 ಸಾವಿರ ಗ್ರಾಹಕರು ರೇ ಬುಕ್ಕಿಂಗ್ ಮಾಡಿಕೊಂಡಿದ್ದಾರೆ.

ಯಮಹಾ ರೇ ಸ್ಕೂಟರನ್ನು ಕಂಪನಿಯ ಅಧಿಕೃತ ಡೀಲರುಗಳಲ್ಲಿ 5 ಸಾವಿರ ರು.ನಿಂದ 10 ಸಾವಿರ ರು. ಶುಲ್ಕ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. 2012ರ ಯಮಹಾ ರೇ ಸ್ಕೂಟರಿನ ಮಾದರಿಯನ್ನು ಕಂಪನಿಯು ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು.

ಇದರ ದರ ಸುಮಾರು 45 ಸಾವಿರ ರು.ನಿಂದ 50 ಸಾವಿರ ರು. ನಡುವೆ ಇರುವ ನಿರೀಕ್ಷೆಯಿದೆ. ನೂತನ ಯಮಹಾ ರೇ ಸ್ಕೂಟರ್  ಸೆಪ್ಟೆಂಬರ್ 14ರಂದು ದೇಶದ ರಸ್ತೆಗೆ ಆಗಮಿಸಲಿದೆ. ಹಬ್ಬದ ಅವಧಿಗೆ ಸ್ಕೂಟರ್ ಖರೀದಿಸುವರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಸ್ಕೂಟರನ್ನು ಪರಿಚಯಿಸಲಿದೆ.

ಹೋಂಡಾ ಡಿಯೊ ಸ್ಕೂಟರಿಗೆ ನೇರವಾಗಿ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡಬಲ್ಲ ರೇ ಸ್ಕೂಟರಿನ ಕುರಿತು ಕಂಪನಿಯು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಗ್ರಾಹಕರು ಯಮಹಾ ಬೈಕುಗಳ ಮೇಲಿಟ್ಟಿದ್ದ ವಿಶ್ವಾಸದಿಂದಾಗಿ ಯಮಹಾ ಸ್ಕೂಟರನ್ನು ಕಣ್ಣುಮುಚ್ಚಿ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ.

ಇದು 110ರಿಂದ 125 ಸಿಸಿ ನಡುವೆ ನಾಲ್ಕು ಸ್ಟ್ರೋಕ್ ಎಂಜಿನ್ ಆಯ್ಕೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಇದರ ಪವರ್ ಸುಮಾರು 8ರಿಂದ 9 ಅಶ್ವಶಕ್ತಿ ಇರುವ ನಿರೀಕ್ಷೆಯಿದೆ. ಈ ಸ್ಕೂಟರ್ ಹಗುರವಾಗಿರುವ ನಿರೀಕ್ಷೆಯಿದ್ದು, ದೇಶದ ತರುಣ ತರುಣಿಯರ ಗಮನ ಸೆಳೆಯುವ ನಿರೀಕ್ಷೆಯಿದೆ.

ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಸ್ಕೂಟರುಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಪ್ರತಿತಿಂಗಳು ಸುಮಾರು 20 ಸಾವಿರ ರೇ ಸ್ಕೂಟರುಗಳನ್ನು ಮಾರಾಟ ಮಾಡುವ ಗುರಿಯನ್ನು ಯಮಹಾ ಹೊಂದಿದೆ.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನೂತನ ಯಮಹಾ ರೇ ಸ್ಕೂಟರಿನ ಬ್ರಾಂಡ್ ರಾಯಭಾರಿಯಾಗಲಿದ್ದಾರೆ

English summary
Yamaha first scooter Ray received more then 5,000 pre bookings in India. Yamaha Ray booking amount Rs 5,000 to Rs 10,000. Read more about Yamaha Ray.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark