ಬಜಾಜ್ ದೇಶಿಯ ಮಾರಾಟ ಕುಸಿತ, ರಫ್ತು ಏರಿಕೆ

Written By:

ದೇಶದ ಮುಂಚೂಣಿಯ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಆಟೋ ಆಗಸ್ಟ್ ತಿಂಗಳ ಮಾರಾಟದಲ್ಲಿ ಶೇಕಡಾ 8.46ರಷ್ಟು ಕುಸಿತ ಅನುಭವಿಸಿದೆ.

ಈ ಪೈಕಿ ಬಜಾಜ್ ಮೋಟಾರ್ ಸೈಕಲ್ 2,78,583 ಯುನಿಟ್‌ಗಳಿಗೆ ಇಳಿಕೆ ಕಂಡಿದೆ ಎಂದು ಬಜಾಜ್ ಆಟೋ ಲಿಮಿಟೆಡ್ (ಬಿಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,04,352 ಯುನಿಟ್ ಮಾರಾಟ ದಾಖಲಿಸಿತ್ತು.

To Follow DriveSpark On Facebook, Click The Like Button

ಈ ನಡುವೆ ರಫ್ತು ವಹಿವಾಟಿನಲ್ಲಿ ಪ್ರಗತಿ ಸಾಧಿಸುವಲ್ಲಿ ಬಜಾಜ್ ಯಶಸ್ವಿಯಾಗಿದೆ. ಬಜಾಜ್ ರಫ್ತು ಅಂಕಿಯು 1,31,562 ಯುನಿಟ್‌ಗಳಿಂದ 1,44,160 ಯುನಿಟ್‌ಗಳಿಗೆ ಏರಿಕೆ ಕಂಡಿದೆ.

ಆದರೆ ವಾಣಿಜ್ಯ ವಿಭಾಗದಲ್ಲಿ ಬಜಾಜ್ ಮಗದೊಮ್ಮೆ ಶೇಕಡಾ 17ರಷ್ಟು ಹಿನ್ನಡೆ ಅನುಭವಿಸಿದೆ. ಆಗಸ್ಟ್ ತಿಂಗಳಲ್ಲಿ 33,605 ಯುನಿಟ್‌ಗಳಷ್ಟು ಮಾತ್ರ ದಾಖಲಿಸುವಲ್ಲಿ ಯಶಸ್ಸನ್ನು ಕಂಡಿದೆ.

English summary
Bajaj Auto Limited reported 8.46 per cent decline in motorcycle sales at 2,78,583 units in August, 2013.
Story first published: Wednesday, September 4, 2013, 11:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark