ಸದ್ಯದಲ್ಲೇ ಕವಾಸಕಿಯಿಂದ ನೂತನ ಮಾಡೆಲ್ ಎಂಟ್ರಿ

ಕವಾಸಕಿ ಇತ್ತೀಚೆಗಷ್ಟೇ ಝಡ್‌ಎಕ್ಸ್-10ಆರ್ ಹಾಗೂ ಝಡ್‌ಎಕ್ಸ್-14ಆರ್‌ಗಳೆಂಬ ಎರಡು ಸೂಪರ್ ಬೈಕ್‌ಗಳನ್ನು ಲಾಂಚ್ ಮಾಡಿತ್ತು. ಇವೆರಡು ಅನುಕ್ರಮವಾಗಿವಾಗಿ 15.70 ಲಕ್ಷ ರು. ಹಾಗೂ 16.90 ಲಕ್ಷ ರು.ಗಳಲ್ಲಿ ಆಗಮನವಾಗಿದ್ದವು.

ಪ್ರಸ್ತುತ ಜಪಾನ್ ಮೂಲಕ ಈ ದ್ವಿಚಕ್ರ ತಯಾರಕ ಕಂಪನಿಯು ಕಡಿಮೆ ಎಂಜಿನ್ ಸಾಮರ್ಥ್ಯದ ನಿಂಜಾ 250ಆರ್ ಬೈಕ್ ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.


ಕವಾಸಕಿ ನೂತನ ಬೇಬಿ ಬೈಕ್ 2.70 ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಇದು ಮಾರುಕಟ್ಟೆಯಲ್ಲಿ ಸ್ಮರ್ಧಾತ್ಮಕ ದರಗಳಲ್ಲಿ ಎಂಟ್ರಿ ಕೊಡುವುದರ ಜತೆಗೆ ಎದುರಾಳಿಗಳ ಜತೆ ನಿಕಟ ಪೈಪೋಟಿ ನೀಡುವಲ್ಲಿ ನೆರವಾಗಲಿದೆ.

ಹಾಗೆಯೇ ನಿಂಜಾ ಬೈಕ್‌ಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಮಹತ್ತರ ಯೋಜನೆಯನ್ನು ಕವಾಸಕಿ ಹೊಂದಿದೆ. ಪ್ರಸ್ತುತ 1,500ರಷ್ಟು ಯುನಿಟ್‌ಗಳನ್ನು ಸ್ಥಳೀಯವಾಗಿ ತಯಾರಿಸುತ್ತಿದೆ. ಈ ಸಂಖ್ಯೆಯನ್ನು ವರ್ಷಕ್ಕೆ 5,000 ತನಕ ಏರಿಸುವುದು ಕವಾಸಕಿ ಗುರಿಯಾಗಿದೆ. ಈ ನಡುವೆ ಕವಾಸಕಿ ಟೂರಿಂಗ್ ಬೈಕ್ ಸಹ ಭಾರತ ಪ್ರವೇಶ ಪಡೆಯುವ ಸಾಧ್ಯತೆಯನ್ನು ಕಂಪನಿ ಅಲ್ಲಗಳೆಯುತ್ತಿಲ್ಲ.

Most Read Articles

Kannada
English summary
The company is now planning to reintroduce the baby Ninja as an affordable, entry level Ninja, priced lower than its earlier INR 2.70 lakhs figure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X