ದೇಶಕ್ಕೆ ಎಂಟ್ರಿ ಕೊಟ್ಟ ಕವಾಸಕಿ ನಿಂಜಾ ಸೂಪರ್ ಬೈಕ್

ಸೂಪರ್ ಬೈಕ್ ಪ್ರಿಯರಿಗೆ ಖುಷಿ ಸುದ್ದಿ ಬಂದಿದ್ದು, ಕವಾಸಕಿ ನಿಂಜಾ ಝಡ್‌ಎಕ್ಸ್-10ಆರ್ (ZX-10R) ಮತ್ತು ಝಡ್‌ಎಕ್ಸ್-14ಆರ್ (ZX-14R) ಸೂಪರ್ ಬೈಕ್‌ಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

  • ಕವಾಸಕಿ ನಿಂಜಾ ಝಡ್‌ಎಕ್ಸ್-14ಆರ್: 16.9 ಲಕ್ಷ ರು.
  • ಕವಾಸಕಿ ನಿಂಜಾ ಝಡ್‌ಎಕ್ಸ್-10ಆರ್: 15.7 ಲಕ್ಷ ರು.

ಪ್ರಸ್ತುತ ಕವಾಸಕಿ ಸೂಪರ್ ಬೈಕ್‌ಗಳು ದೇಶದ ಹೈ ಎಂಡ್ ಮಾರುಕಟ್ಟೆಯಲ್ಲಿ ದೊಡ್ಡ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ. ಹಾಗೆಯೇ ಸುಜುಕಿ ಹಯಾಬುಸ, ಎಪ್ರಿಲಿಯಾ, ಹೋಂಡಾ ಸಿಬಿಆರ್, ಬಿಎಂಡಬ್ಲ್ಯು ಹಾಗೂ ಡುಕಾಟಿ ಸೂಪರ್ ಬೈಕ್‌ಗಳಿಗೆ ನಿಕಟ ಪೈಪೋಟಿ ನೀಡಲಿದೆ.

ಅಂದ ಹಾಗೆ ನೀವೇನಾದರೂ ಕವಾಸಕಿ ನಿಂಜಾ ಸೂಪರ್ ಬೈಕ್ ಖರೀದಿಸಲು ಯೋಜನೆ ಹಾಕಿಕೊಂಡಿದ್ದಲ್ಲಿ ಇನ್ನು ತಡ ಮಾಡದಿರಿ. ಯಾಕೆಂದರೆ ಕವಾಸಕಿ ನಿಂಜಾ ಝಡ್‌ಎಕ್ಸ್-10ಆರ್ ಮತ್ತು ಝಡ್‌ಎಕ್ಸ್-14ಆರ್ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದ್ದು, ಮಾಸಂತ್ಯದಲ್ಲಿ ವಿತರಣೆ ಕಾರ್ಯ ಆರಂಭವಾಗಲಿದೆ.

ಕವಾಸಕಿ ಝಡ್‌ಎಕ್ಸ್-14ಆರ್

ಕವಾಸಕಿ ಝಡ್‌ಎಕ್ಸ್-14ಆರ್

ZZR1400 ಎಂದೂ ಅರಿಯಲ್ಪಡುವ ನೂತನ ಕವಾಸಕಿ ನಿಂಜಾ ZX-14R ಸೂಪರ್ ಬೈಕ್, 1.4 ಲೀಟರ್ ಇನ್ ಲೈನ್ ಫೋರ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು 196 ಬಿಎಚ್‌ಪಿ ಪವರ್ (155 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ವೇಗತೆ

ವೇಗತೆ

ಕವಾಸಕಿ ನಿಂಜಾ ಝಡ್‌ಎಕ್ಸ್-14ಆರ್ ಬೈಕ್ ಕೇವಲ 2.9 ಸೆಕೆಂಡುಗಳಲ್ಲಿ 0-100 ಕೀ.ಮೀ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 299 ಕೀ.ಮೀ. ಗರಿಷ್ಠ ವೇಗವನ್ನು ಪಡೆದುಕೊಳ್ಳಲಿದೆ. ಇದು ಮೂರು ಟ್ರಾಕ್ಷನ್ ಕಂಟ್ರೋಲ್ ಮೋಡ್‌ಗಳಲ್ಲಿ ಲಭ್ಯವಿರುತ್ತದೆ.

ಕವಾಸಕಿ ನಿಂಜಾ ಝಡ್‌ಎಕ್ಸ್-10ಆರ್

ಕವಾಸಕಿ ನಿಂಜಾ ಝಡ್‌ಎಕ್ಸ್-10ಆರ್

ಇನ್ನೊಂದೆಡೆ ಕವಾಸಕಿ ನಿಂಜಾ ZX-10R 998 ಸಿಸಿ ಇನ್ ಲೈನ್ ಫೋರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 194 ಬಿಎಚ್‌ಪಿ ಪವರ್ (112 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಗರಿಷ್ಠ ವೇಗತೆ

ಗರಿಷ್ಠ ವೇಗತೆ

ಇದು 2.8 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 299 ಕೀ.ಮೀ. ವೇಗವನ್ನು ಪಡೆದುಕೊಳ್ಳಲಿದೆ. ಇದು ಕೂಡಾ ಆಫ್ ಮೋಡ್ ಸೇರಿದಂತೆ ಮೂರು ಪವರ್ ಟ್ರಾಕ್ಷನ್ ಕಂಟ್ರೋಲ್‌ಗಳಲ್ಲಿ ಆಗಮನವಾಗಲಿದೆ.

ಸಿಕೆಡಿ ಸಿದ್ಧಾಂತ

ಸಿಕೆಡಿ ಸಿದ್ಧಾಂತ

ಕಂಪ್ಲೀಟ್ ನಾಕ್ಡ್ ಡೌನ್ (ಸಿಕೆಡಿ) ಸಿದ್ಧಾಂತ ಮುಖಾಂತರ ಕವಾಸಕಿ ಸೂಪರ್ ಬೈಕ್‌ಗಳು ಭಾರತಕ್ಕೆ ಆಗಮನವಾಗಲಿದೆ. ಇದು ಬಜಾಜ್‌ ಪ್ರೊಬೈಕಿಂಗ್ ಡೀಲರ್‌ಶಿಪ್ ಜಾಲ ಬದಲು ಎಕ್ಸ್‌ಕ್ಲೂಸಿವ್ ಡೀಲರ್‌ಶಿಪ್‌ಗಳಲ್ಲಿ ಮಾತ್ರ ಲಭ್ಯವಾಗಲಿದೆ. ಲಭಿಸಲಿದೆ. 1000ಸಿಸಿಗಿಂತಲೂ ಮೇಲ್ಪಟ್ಟ ಬೈಕ್‌ಗಳನ್ನು ಕವಾಸಕಿ ತನ್ನ ಎಕ್ಸ್‌ಕ್ಲೂಸಿವ್ ಡೀಲರ್‌ಶಿಪ್‌ಗಳಲ್ಲಿ ವಿತರಿಸುತ್ತಿದೆ.

ಆವೃತ್ತಿ

ಆವೃತ್ತಿ

ದೇಶದ ದ್ವಿಚಕ್ರ ವಾಹನ ಸೆಗ್ಮೆಂಟ್‌ಗಳಲ್ಲಿ ಈಗಾಗಲೇ ತನ್ನ ನೆಲೆ ಸ್ಥಾಪಿಸಿರುವ ಕವಾಸಕಿ 250ಆರ್, 300 ಹಾಗೂ 650 ಆವೃತ್ತಿಗಳ ಮೂಲಕ ಗ್ರಾಹಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಪ್ರೀಮಿಯಂ ಸೆಗ್ಮೆಂಟ್

ಪ್ರೀಮಿಯಂ ಸೆಗ್ಮೆಂಟ್

ದೇಶದ ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಸುಭದ್ರ ನೆಲೆ ಸ್ಥಾಪಿಸಲು ಹೊರಟಿರುವ ಕವಾಸಕಿ ಭವಿಷ್ಯದಲ್ಲಿ ಇನ್ನು ಹೆಚ್ಚಿನ ಆವೃತ್ತಿಗಳನ್ನು ಪರಿಚಯಿಸುವ ಇರಾದೆ ಹೊಂದಿದೆ.

ಕವಾಸಕಿ ಗುರಿ

ಕವಾಸಕಿ ಗುರಿ

ಒಟ್ಟಾರೆಯಾಗಿ 2015 ವೇಳೆಯಾಗುವಾಗ ದೇಶದ ಮಾರುಕಟ್ಟೆಯ ಶೇಕಡಾ 20ರಷ್ಟು ಮಾರಾಟ ವಶಪಡಿಸಿಕೊಳ್ಳುವುದು ಕವಾಸಕಿ ಗುರಿಯಾಗಿದೆ.

Most Read Articles

Kannada
English summary
Kawasaki has announced the launch of two superbikes in India, the Ninja ZX-10R and Ninja ZX-14R. These are available at a price tag of Rs 16.9 lakh and Rs 15.7 lakh ((ex-showroom, Pune).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X