2015ರಲ್ಲಿ ಕೆಟಿಎಂ 690 ಡ್ಯೂಕ್ ಇಂಡಿಯಾ ಲಾಂಚ್

By Nagaraja

ಬಜಾಜ್ ಜತೆ ಪಾಲುದಾರಿಕೆ ಹೊಂದಿರುವ ಕೆಟಿಎಂ ಭಾರತದಲ್ಲಿ ಎಂಟ್ರಿ ಲೆವೆಲ್ ಕ್ರೀಡಾ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಕೆಟಿಎಂ, ಗರಿಷ್ಠ ಎಂಜಿನ್ ಸಾಮರ್ಥ್ಯವುಳ್ಳ ಬೈಕನ್ನು ದೇಶಕ್ಕೆ ಪರಿಚಯಿಸುವ ಯೋಜನೆ ಹೊಂದಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಕೆಟಿಎಂ 200 ಡ್ಯೂಕ್ ಮತ್ತು 390 ಡ್ಯೂಕ್‌ ಯಶಸ್ಸಿನಿಂದ ಪ್ರೇರಿತವಾಗಿರುವ ಸಂಸ್ಥೆಯು 2015ರಲ್ಲಿ 690 ಡ್ಯೂಕ್ ಪರಿಚಯಿಸುವ ಇರಾದೆಯನ್ನು ಹೊಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಟಿಎಂ ಸಿಇಒ ಸ್ಟೆಫನ್ ಫಿರೆರ್, ನೂತನ ಕೆಟಿಎಂ 390 ಡ್ಯೂಕ್ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ ಎಂದಿದ್ದಾರೆ.


ಡ್ಯೂಕ್ ಸಣ್ಣ ರೇಂಜ್ ಬೈಕ್‌ಗಳಾದ 390, 200 ಹಾಗೂ 125 ಜತೆಗೆ ನೂತನ 690 ಸಿಸಿ ಬೈಕ್ ಫ್ಯಾಟ್‌ಫಾರ್ಮ್ ಹಂಚಿಕೊಳ್ಳಲಿದೆ. ಇದು 69 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, 6 ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ನೂತನ ಕೆಟಿಎಂ 490 ಡ್ಯೂಕ್ ಹಗುರ ಭಾರವಾಗಿರಲಿದ್ದು, ಕೇವಲ 149.5 ಕೆ.ಜಿ. ತೂಕವನ್ನು ಮಾತ್ರ ಹೊಂದಿರಲಿದೆ. ಇದು ಬಜಾಜ್‌ನ ಚಕನ್ ಘಟಕದಲ್ಲಿ ಉತ್ಪಾದನೆಯಾಗಲ್ಲ. ಬದಲಾಗಿ ಕಂಪ್ಲೀಟ್ ನಾಕ್ಡ್ ಡೌನ್ ಸಿದ್ಧಾಂತದಲ್ಲಿ ಆಗಮನವಾಗಲಿದೆ. ಪ್ರಸ್ತುತ ಬೈಕ್ ಭಾರತ ಸೇರಿದಂತೆ ಇತರ ದಕ್ಷಿಣ ಪೂರ್ವ ರಾಷ್ಟ್ರಗಳಲ್ಲಿ ಮಾರಾಟವಾಗಲಿದೆ. ಹಾಗೆಯೇ ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ktm 690 duke
Most Read Articles

Kannada
English summary
The Bajaj-KTM alliance has reached a stage where the duo are confident about launching larger and larger motorcycles that sell in lower volumes.
Story first published: Saturday, November 23, 2013, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X