ಶೀಘ್ರದಲ್ಲೇ ಬಜಾಜ್ ಪಲ್ಸರ್ ಇಂಡೋನೇಷ್ಯಾಗೆ ರಫ್ತು

Written By:
ಮೇಡ್ ಇನ್ ಇಂಡಿಯಾ ಬೈಕ್ ಬಜಾಜ್ ಪಲ್ಸರ್ ಸದ್ಯದಲ್ಲೇ ಇಂಡೋನೇಷ್ಯಾಗೆ ರಫ್ತು ಆಗಲಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲೂ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಳ್ಳಲಿದೆ.

ಬಜಾಜ್ ಆಟೋದ ಪಲ್ಸರ್ 200 ಎನ್‌ಎಸ್ ಆವೃತ್ತಿ ದೇಶದಲ್ಲಿ ಅತಿ ಹೆಚ್ಚು ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ಕವಾಸಕಿ ಪಾಲುದಾರಿಕೆಯೊಂದಿಗೆ ಮೇ ತಿಂಗಳಿಂದ ಇಂಡೋನೇಷ್ಯಾದಲ್ಲಿ ಮಾರುಕಟ್ಟೆ ಕಂಡುಕೊಳ್ಳಲಿದೆ.

ಬಜಾಜ್‌ನ ಚಕನ್ ಫ್ಯಾಕ್ಟರಿಯಲ್ಲಿ ಪಲ್ಸರ್ ರೂಪುಗೊಳ್ಳಲಿದ್ದು, ಪ್ರಸ್ತುತವಿರುವ ಮಾದರಿಯನ್ನೇ ಕಾಯ್ದುಕೊಳ್ಳಲಿದೆ. ಈ ಮೂಲಕ ಯಮಹಾ ವಿಕ್ಸಿಯನ್ (Yamaha Vixion) ಹಾಗೂ ಹೋಂಡಾ ಸಿಬಿ150ಆರ್ ಸ್ಟ್ರೀಟ್‌ಫೈರ್ ಬೈಕ್‌ಗಳಲ್ಲಿ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಇತರ ಸ್ಪರ್ಧಿಗಳ ಬೈಕ್‌ಗಳಿಗೆ ಹೋಲಿಸಿದರೆ 200 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಬಜಾಜ್ ಪಲ್ಸರನ್ನು ಹೆಚ್ಚು ಶಕ್ತಿಶಾಲಿ ಮಾಡುವಲ್ಲಿ ನೆರವಾಗಲಿದೆ.

English summary
Bajaj Auto is gearing to export its flagship motorcycle, the Pulsar 200 NS to Indonesian markets. The all-new Bajaj Pulsar 200NS is expected to be sold through Kawasaki dealerships in Indonesia.
Story first published: Friday, March 22, 2013, 12:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark