ದೀಪಾವಳಿ ಹಬ್ಬಕ್ಕೆ ಕಾಂಟಿನೆಂಟಲ್ ಜಿಟಿ ರಾಯಲ್ ಸವಾರಿ

Written By:

ಬುಲೆಟ್ ಪ್ರಿಯರಿಗೆ ಖುಷಿ ಸುದ್ದಿ ಬಂದಿದ್ದು, ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ರೇಸರ್ ಬೈಕ್ ಶೀಘ್ರದಲ್ಲೇ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಚೆನ್ನೈನ ಓರಗಾಡಂ ಘಟಕದಲ್ಲಿ ಉತ್ಪಾದನೆ ಆರಂಭಿಸಿರುವ ರಾಯಲ್ ಎನ್‌ಫೀಲ್ಡ್, ಸದ್ಯದಲ್ಲೇ ಕಾಂಟಿನೆಂಟಲ್ ಜಿಟಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಉತ್ಸುಕವಾಗಿದೆ.

2012ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಈ ಗರಿಷ್ಠ ಇಂಧನ ಕ್ಷಮತೆಯ ಕೆಫೆ ರೇಸರ್, ಸೆಪ್ಟೆಂಬರ್ ತಿಂಗಳಲ್ಲಿ ಬ್ರಿಟನ್‌ನಲ್ಲಿ ಲಾಂಚ್ ಆಗಲಿದೆ. ತದಾ ಬಳಿಕ ಅಕ್ಟೋಬರ್ ತಿಂಗಳಲ್ಲಿ ಅಂದರೆ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿ ಮುಂಚಿತವಾಗಿ ಭಾರತದಲ್ಲಿ ಲಾಂಚ್ ಆಗಲಿದೆ.

ಒಬ್ಬ ಪ್ರಯಾಣಿಕನಿಗೆ ಆರಾಮದಾಯಕವಾಗಿ ಕುಳಿತುಕೊಳ್ಳುವ ಸಿಟ್ಟಿಂಗ್ ವ್ಯವಸ್ಥೆ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿಯಲ್ಲಿ ಉದ್ದವಾದ ಇಂಧನ ಟ್ಯಾಂಕ್ ಲಗತ್ತಿಸಲಾಗಿದೆ.

To Follow DriveSpark On Facebook, Click The Like Button
English summary
India will receive the Royal Enfield Continental GT in October, just ahead of the festive season in the country.
Story first published: Saturday, August 24, 2013, 11:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark