2013ರಲ್ಲೇ ಹೊಸ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಆಗಮನ

Posted By:

ದ್ವಿಚಕ್ರ ವಾಹನ ಜಗತ್ತಿನ ಬೇಡಿಕೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ದೇಶದ ಮುಂಚೂಣಿಯ ಬೈಕ್ ಉತ್ಪಾದಕ ಸಂಸ್ಥೆಯಾದ ರಾಯಲ್ ಎನ್‌ಫೀಲ್ಡ್, ನೂತನ ಘಟಕವೊಂದನ್ನು ತೆರೆದುಕೊಂಡಿದೆ. ಎನ್‌ಫೀಲ್ಡ್ ಎರಡನೇ ಘಟಕವು ಚೆನ್ನೈನ ಓರಗಾಡಂ ಪ್ರದೇಶದಲ್ಲಿ ಸ್ಥಿತಗೊಂಡಿದೆ.

ನೂತನ ಘಟಕವು 50 ಎಕ್ರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿದ್ದು, 150 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಲಾಗಿದೆ. ರಾಯಲ್ ಎನ್‌ಫೀಲ್ಡ್ ಪ್ರಥಮ ಘಟಕವು ವಾರ್ಷಿಕವಾಗಿ 150,000 ಯುನಿಟ್‌ಗಳನ್ನು ಉತ್ಪಾದಿಸುವಷ್ಟು ಸಕ್ಷಮವಾಗಿದೆ. ಇದೀಗ ಹೊಸ ಘಟಕದ ಮೂಲಕ ಒಟ್ಟು 500,000 ಬುಲೆಟ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ.

To Follow DriveSpark On Facebook, Click The Like Button

2013ರಲ್ಲೇ ಕಾಂಟಿನೆಂಟಲ್ ಜಿಟಿ ಆಗಮನ...

ಈ ನಡುವೆ ಪ್ರತಿಕ್ರಿಯಿಸಿರುವ ರಾಯಲ್ ಎನ್‌ಫೀಲ್ಡ್ ಉನ್ನತಾಧಿಕಾರಿಗಳು, ವರ್ಷಾಂತ್ಯದಲ್ಲೇ ಹೊಸ ಕಾಂಟಿನೆಂಟಲ್ ಜಿಟಿ ಬುಲೆಟ್ ಆಗಮನವಾಗಲಿದೆ ಎಂದು ಖಚಿತಪಡಿಸಿದ್ದಾರೆ. ಫ್ಲಾಟ್ ಸಿಟ್ಟಿಂಗ್ ವ್ಯವಸ್ಥೆ ಹೊಂದಿರುವ ಈ ಕೆಫೆ ರೇಸರ್ ವಿನ್ಯಾಸದ ಬುಲೆಟ್, ಸಾಂಪ್ರದಾಯಿಕ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗಿಂತಲೂ ವಿಭಿನ್ನವಾಗಿ ಕೆಂಪು ಬಣ್ಣ ಹೊಂದಿರಲಿದೆ.

ಚೆನ್ನೈ ನೂತನ ಓರಗಾಡಂ ಘಟಕದಲ್ಲಿ ನಿರ್ಮಾಣವಾಗಲಿರುವ ಹೊಸ ಕಾಂಟಿನೆಂಟಲ್ ಜಿಟಿ 525 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಕ್ಲಾಸಿಕ್ ವಿನ್ಯಾಸಕ್ಕೆ ಹೆಸರುವಾಸಿಯಾಗಿರುವ ರಾಯಲ್ ಎನ್‌ಫೀಲ್ಡ್, ಇತ್ತೀಚೆಗಷ್ಟೇ ಬುಲೆಟ್ 500 ಫಾರೆಸ್ಟ್ ಗ್ರೀನ್ ಆವೃತ್ತಿಯನ್ನು ಪರಿಚಯಿಸಿತ್ತು.

English summary
Royal Enfield planning to introduce the Continental-GT by year-end. The Continental GT will be powered by a 525cc engine and will be produced at the Oragadam plant.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark