ಅತ್ಯಂತ ಶಕ್ತಿಶಾಲಿ ಡಿಸ್ಕವರ್ 150ಎಸ್ ಇಂದೇ ಬಿಡುಗಡೆ

Written By:

ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಸಹಿತ ಅನೇಕ ಆಕರ್ಷಕ ಬೈಕ್‌ಗಳನ್ನು ಕೊಡುಗೆಯಾಗಿ ನೀಡಿರುವ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಬಜಾಜ್ ಆಟೋ, ಎಲ್ಲ ಹೊಸತನದಿಂದ ಕೂಡಿರುವ ಬಜಾಜ್ ಡಿಸ್ಕವರ್ 150ಎಸ್ ಬೈಕನ್ನು ಇಂದು (ಆಗಸ್ಟ್ 11, ಸೋಮವಾರ) ಬಿಡುಗಡೆ ಮಾಡಲಿದೆ.

ಇದರಂತೆ ಸಂಸ್ಥೆಯು ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ. ಒಟ್ಟು ಎರಡು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಅವುಗಳೆಂದರೆ ನೆಕ್ಡ್ ಹಾಗೂ ಸೆಮಿ-ಫೇರಿಂಗ್ ವರ್ಷನ್ ಆಗಿರಲಿದೆ.

discover

ಡಿಸ್ಕವರ್ ಮಾದರಿಗಳ ಪೈಕಿ 150ಎಸ್ ಅತ್ಯಂತ ಶಕ್ತಿಶಾಲಿ ಬೈಕ್ ಎನಿಸಿಕೊಳ್ಳಲಿದೆ. ಅಲ್ಲದೆ 125ಎಸ್‌ಟಿ ಮಾದರಿಯಿಂದ ಕೆಲವೊಂದು ವಿನ್ಯಾಸ ಆಮದು ಮಾಡಿಕೊಳ್ಳಲಾಗಿದೆ.

ಹೊಸ ಡಿಸ್ಕವರ್ 150ಎಸ್ ಬೈಕ್‌ನಲ್ಲಿ ಡಿಟಿಎಸ್-ಐ 150ಸಿಸಿ ಎಂಜಿನ್ ಒದಗಿಸಲಾಗುವುದು. ಇದು 13.8 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

ಇನ್ನು ಮುಂದುಗಡೆ ಡಿಸ್ಕ್ ಬ್ರೇಕ್ ಹಾಗೂ ಹಿಂದುಗಡೆ ಡ್ರಮ್ ಬ್ರೇಕ್ ಪಡೆದುಕೊಳ್ಳಲಿದೆ. ಅಂತಿಮವಾಗಿ ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ ಕೆಳಗಡೆ ಗುರುತಿಸಿಕೊಳ್ಳಲಿರುವ ಡಿಸ್ಕವರ್ 150ಎಸ್, ಹೊಸತಾದ ಅನಾಲಾಗ್ ಇನ್ಸ್ಟ್ರಮೆಂಟ್ ಕ್ಲಸ್ಟರ್ ಸಹ ಪಡೆದುಕೊಳ್ಳಲಿದೆ. ಇನ್ನು ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯೂ ಇದೆ.

English summary
Indian two wheeler giant Bajaj will be launching a new motorcycle to its Discover range on the 11th of August, 2014.
Story first published: Monday, August 11, 2014, 11:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark