ಹೊಸ ಪಲ್ಸರ್ ಶ್ರೇಣಿಯ ಬೈಕ್ ಗಳಿಗಾಗಿ 14ರ ವರೆಗೆ ಕಾದಿರಿ

Written By:

ದೇಶದ ಬೈಕ್ ಪ್ರೇಮಿಗಳಿಗೆ ಮಗದೊಂದು ಖುಷಿ ಸುದ್ದಿ ಬಂದಿದ್ದು, ಇದೇ ಬರುವ 2015 ಎಪ್ರಿಲ್ 11ರಂದು ಹೊಸ ಶ್ರೇಣಿಯ ಪಲ್ಸರ್ ಬೈಕ ಗಳನ್ನು ಬಿಡುಗಡೆ ಮಾಡಲು ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ ನಿರ್ಧರಿಸಿದೆ.

ದೇಶದ ನಂ.1 ಕ್ರೀಡಾ ಬೈಕ್ ಆಗಿರುವ ಪಲ್ಸರ್ ಹೊಸ ಆವೃತ್ತಿಯು ಇತ್ತೀಚೆಗಷ್ಟೇ ಆರ್ ಎಸ್ 200 ರೂಪದಲ್ಲಿ ಬಿಡುಗಡೆಯಾಗಿತ್ತು. ಇದು ಅತಿ ವೇಗದ ಪಲ್ಸರ್ ಬೈಕ್ ಎಂಬ ಕೀರ್ತಿಗೆ ಪಾತ್ರವಾಗಿತ್ತು.

To Follow DriveSpark On Facebook, Click The Like Button
bajaj pulsar ss

ಆದರೆ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಪಲ್ಸರ್ ಬೈಕ್ ಗಳಲ್ಲಿ ಯಾವುದೆಲ್ಲ ಮಾದರಿಗಳು ಸೇರಿರಲಿದೆ ಎಂಬುದು ಇನ್ನು ಖಚಿತವಾಗಿಲ್ಲ. ಬಿಡುಗಡೆ ವೇಳೆಯಷ್ಟೇ ಈ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಈ ಮೂಲಕ ಕುತೂಹಲತೆಯನ್ನು ಕಾಯ್ದುಕೊಳ್ಳಲಾಗಿದೆ.

bajaj pulsar rs

ಬಲ್ಲ ಮೂಲಗಳ ಪ್ರಕಾರ ಗರಿಷ್ಠ ಸಾಮರ್ಥ್ಯದ ಪಲ್ಸರ್ ಬೈಕ್ ಗಳು ಪ್ರದರ್ಶನವಾಗಲಿದೆ. ಇವುಗಳಲ್ಲಿ ಸಿಎಸ್400 ಹಾಗೂ ಎಸ್ ಎಸ್400 ಮಾದರಿಗಳು ಪ್ರಮುಖವಾಗಿದೆ. ಹಾಗೆಯೇ ಪಲ್ಸರ್ ಎಎಸ್200 ಅಡ್ವೆಂಚರ್ ಬೈಕ್ ಸಹ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇವೆಲ್ಲವೂ ಪಲ್ಸರ್ ಮುಂಬರುವ ಬಹುನಿರೀಕ್ಷಿತ ಆವೃತ್ತಿಗಳಾಗಿದೆ.

bajaj pulsar cs 400

ಪಲ್ಸರ್ ಗೆ ಹೊಸ ಆಯಾಮ ನೀಡುವ ಮೂಲಕ ದೇಶದಲ್ಲಿ ಅತಿ ಹೆಚ್ಚಿನ ಮಾರಾಟ ಕಾಯ್ದುಕೊಳ್ಳುವುದು ಬಜಾಜ್ ಗುರಿಯಾಗಿದೆ. ಈಗ ನಿಮ್ಮ ನೆಚ್ಚಿನ ಪಲ್ಸರ್ ಮಾದರಿಯ ಬಗ್ಗೆ ನಮ್ಮ ಜೊತೆ ಅನಿಸಿಕೆಗಳನ್ನು ಹಂಚಿಕೊಳ್ಳಲು ಮರೆಯದಿರಿ.

English summary
India's first and largest seller of sport bikes, Bajaj will be launching an all-new range of Pulsar motorcycles on 14th April. Present at the event will be Rajiv Bajaj, Managing Director, Bajaj Auto.
Story first published: Saturday, April 11, 2015, 11:08 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark