ನಿಮ್ಮ ಭಾವನೆಗೆ ತಕ್ಕಂತೆ ರಂಗು ಬದಲಾಯಿಸುವ ಸೈಕಲ್

Written By:

ಆಟೋಮೊಬೈಲ್ ಪ್ರತಿಯೊಂದು ಕ್ಷೇತ್ರದಲ್ಲೂ ಬದಲಾವಣೆ ತರುವ ಪ್ರಯತ್ನ ಆಗುತ್ತಲೇ ಇದೆ. ಇಲ್ಲಿ ಸೈಕಲ್ ಹಳೆ ಕಾಲದ ವಾಹಕ ಎಂದು ಅರ್ಥೈಸಿಕೊಂಡರೆ ತಪ್ಪಾದಿತು.

ಯಾಕೆಂದರೆ ನಾವಿಂದು ಪರಿಚಯಿಸಲಿರುವ ಸೈಕಲ್ ನಿಮ್ಮ ಭಾವನೆಗೆ ತಕ್ಕಂತೆ ರಂಗು ಬದಲಾಯಿಸಲಿದೆ. ಅದು ಹೇಗೆ ಅಂತೀರಾ? ಇದಕ್ಕಾಗಿ ಚಿತ್ರಪುಟಕ್ಕೆ ಭೇಟಿ ಕೊಡಿರಿ.

To Follow DriveSpark On Facebook, Click The Like Button
ನಿಮ್ಮ ಭಾವನೆಗೆ ತಕ್ಕಂತೆ ರಂಗು ಬದಲಾಯಿಸುವ ಸೈಕಲ್

ಸೆನ್ಸ್ ಔರಾ ಟೆಕ್ ಎಂಬ ಸಂಸ್ಥೆಯು ಅತಿ ನೂತನ ಬಯೊರಾ (Biora) ಎಂಬ ಸೈಕಲನ್ನು ಅಭಿವೃದ್ಧಿಪಡಿಸಿದ್ದು, ನಿಮ್ಮ ಮನೋಭಾವನೆಗೆ ತಕ್ಕಂತೆ ಕೆಂಪು, ಹಸಿರು ನೀಲಿ ಹೀಗೆ ಬಣ್ಣ ಬದಲಾಯಿಸಲಿದೆ.

ಹೇಗೆ ವರ್ತಿಸುತ್ತದೆ?

ಹೇಗೆ ವರ್ತಿಸುತ್ತದೆ?

ಬಯೊರಾ ಸೈಕಲ್‌ನ ಹ್ಯಾಂಡ್ ಗ್ರಿಪ್‌ಗೆ ಹೃದಯ ಬಡಿತದ ಸೆನ್ಸಾರ್ ಗಳನ್ನು ಆಳವಡಿಸಲಾಗಿದ್ದು, ನೀವು ಸೈಕಲ್ ಹ್ಯಾಂಡಲ್ ಹಿಡಿದಾಗ ನಿಮ್ಮ ದೈಹಿಕ ಸಂಕೇತಗಳನ್ನು ಗ್ರಹಿಸಲಿದೆ.

ನಿಮ್ಮ ಭಾವನೆಗೆ ತಕ್ಕಂತೆ ರಂಗು ಬದಲಾಯಿಸುವ ಸೈಕಲ್

ಈ ಮೂಲಕ ನೀವು ಉದ್ವೇಗಕ್ಕೊಳಗಾಗಿದ್ದೀರಾ, ಕೋಪಿಸಿಕೊಂಡಿರುವೀರಾ, ಸಂತೋಷವಾಗಿದ್ದೀರಾ ಎಂಬುದನ್ನು ಗ್ರಹಿಸಲಿದೆ. ಇದಕ್ಕಾಗಿ ಸ್ಮಾರ್ಟ್ ಫೋನ್ ನಲ್ಲಿ ಬಯೊರಾ ಸ್ಮಾರ್ಟ್ ಫೋನ್ ಸಹ ಸಂಪರ್ಕಿಸಲಾಗಿದೆ.

ನಿಮ್ಮ ಭಾವನೆಗೆ ತಕ್ಕಂತೆ ರಂಗು ಬದಲಾಯಿಸುವ ಸೈಕಲ್

ಸ್ಲೋವಾಕಿಯಾದ ವಿನ್ಯಾಸಗಾರ ಜಾನ್ ಬುಜ್ನಾಕ್ ಎಂಬವರೇ ಇಂತಹದೊಂದು ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ ಸೈಕಲ್ ಪ್ರೇಮಿಗಳಿಗೆ ಪರಿಪೂರ್ಣ ಆಯ್ಕೆಯಾಗಿರಲಿದೆ ಎಂದು ಅಭಿಪ್ರಾಯಪಡುತ್ತಾರೆ.

ನಿಮ್ಮ ಭಾವನೆಗೆ ತಕ್ಕಂತೆ ರಂಗು ಬದಲಾಯಿಸುವ ಸೈಕಲ್

ಒಟ್ಟಿನಲ್ಲಿ ನಿಮ್ಮ ಸಹವರ್ತಿಗಳೊಂದಿಗೂ ಭಾವನೆಗಳನ್ನು ಹಂಚಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಸಂಸ್ಥೆ ಅಭಿಪ್ರಾಯಪಡುತ್ತದೆ.

Read more on ಸೈಕಲ್ cycle
English summary
Biora is a cycle interact with you based on your mood
Story first published: Friday, September 18, 2015, 9:51 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark