ಸಂಪೂರ್ಣ ದಿವಾಳಿತನಕ್ಕೆ ತುತ್ತಾಗಿರುವ ಎರಿಕ್ ಬ್ಯುಯೆಲ್ ಹೀರೊ ತೆಕ್ಕೆಗೆ?

Written By:

ಅಮೆರಿಕದ ಮೂಲದ ಕ್ರೀಡಾ ಮೋಟಾರ್ ಸೈಕಲ್ ತಯಾರಿಕಸ ಸಂಸ್ಥೆಯಾಗಿರುವ ಎರಿಕ್ ಬ್ಯುಯೆಲ್ ರೇಸಿಂಗ್ ಸಂಪೂರ್ಣ ದಿವಾಳಿಯಾಗಿರುವುದಾಗಿ ಘೋಷಿಸಿದೆ. ಇದರ ಮುಂದುವರಿದ ಬೆಳವಣಿಗೆಯಂತೆ ಈ ಐಕಾನಿಕ್ ಸಂಸ್ಥೆಯನ್ನು ಭಾರತದ ನಂಬರ್ ವನ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಖರೀದಿಸುವ ಸಾಧ್ಯತೆಯಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹೀರೊ ಸಂಸ್ಥೆಯು 2013 ಜುಲೈ 01ರಂದು ಎರಿಕ್ ಬ್ಯುಯೆಲ್ ಸಂಸ್ಥೆಯಿಂದ ಶೇಕಡಾ 49.2ರಷ್ಟು ಶೇರನ್ನು ವಶಪಡಿಸಿಕೊಂಡಿತ್ತು. ಇದರಂತೆ ಉತ್ತರ ಅಮೆರಿಕದಲ್ಲಿ ಹೀರೊ ಮೋಟಾರ್ ಸೈಕಲ್ ಹಾಗೂ ಸೂಟ್ಕರ್ ಗಳ ವಿತರಣೆಯನ್ನು ಆರಂಭಿಸಿತ್ತು.

ಹೀರೊ ಹಸ್ಟೂರ್

ಆದರೆ ಈಗ ಸಂಪೂರ್ಣ ಸಾಲಕ್ಕೆ ತುತ್ತಾಗಿರುವ ಎರಿಕ್ ಬ್ಯುಯೆಲ್ ಆರ್ಥಿಕ ಮುಗ್ಗಟ್ಟನ್ನು ಘೋಷಿಸಿದೆ. ಸದ್ಯ ಕಂಪನಿಯನ್ನು ಸಾಲದಿಂದ ರಕ್ಷಿಸಲು ಹೀರೊ ಮೊಟೊಕಾರ್ಪ್ ಗೆ ಮಾತ್ರ ಸಾಧ್ಯ ಎಂಬುದು ಆಟೋ ವಿಮರ್ಶಕರ ಅಭಿಪ್ರಾಯಪಟ್ಟಿದೆ.

ಜಗತ್ತಿನಲ್ಲೇ ಅತ್ಯುತ್ತಮ ತಂತ್ರಗಾರಿಕೆಯನ್ನು ಎರಿಕ್ ಬ್ಯುಯೆಲ್ ಹೊಂದಿದ್ದು, ತನ್ನ ಮುಂದಿನ ಮಾದರಿಗಳಲ್ಲಿ ಬಳಕೆ ಮಾಡಲು ಹೀರೊ ಯೋಜಿಸಿತ್ತು. ಎರಿಕ್ ಸಹಾಯಹಸ್ತದೊಂದಿಗೆ ನೂತನ ಎಕ್ಸ್ ಎಕ್ಸ್250ಆರ್ ಮತ್ತು ಹಸ್ಟೂರ್ ಮಾಡೆಲ್ ಗಳನ್ನು ಹೊರ ತರುವ ಯೋಜನೆಯನ್ನು ಹೀರೊ ಹೊಂದಿತ್ತು. ಆದರೆ ಈಗಿನ ಬೆಳವಣಿಗೆಯು ಅತಂತ್ರಕ್ಕೆ ಸಿಲುಕಿಸಿದೆ.

English summary
Hero MotoCorp was in partnership with Erik Buell Racing prior to the American manufacturer filing for bankruptcy. Now the Indian two-wheeler giant is contemplating buying EBR completely.
Story first published: Monday, July 27, 2015, 15:11 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark