ಹಲೋ ಧೋನಿ, ಇದು ಕ್ರಿಕೆಟ್ ಮೈದಾನವಲ್ಲ, ಇಲ್ಲಿನ ನಿಯಮನೇ ಬೇರೆ!

Written By:

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ಜಂಟಿಯಾಗಿ ಆಯೋಜಿಸಲಾಗಿದ್ದ 2015 ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಮೆಂಟ್ ಬಳಿಕ ತವರೂರಾದ ರಾಂಚಿಗೆ ಮರಳಿರುವ ಭಾರತೀಯ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ನಗರದುದ್ಧಕ್ಕೂ ಬೈಕ್ ಓಡಿಸಿರುವುದು ಭಾರಿ ಪ್ರಚಾರ ಗಿಟ್ಟಿಸಿಕೊಂಡಿತ್ತು.

ಐಕಾನಿಕ್ ವಿಂಟೇಜ್ ಮೋಟಾರ್ ಸೈಕಲ್ ಬಿಎಸ್ ಎ ಮಾದರಿಯಲ್ಲಿ ರಾಂಚಿಯ ರಸ್ತೆಯುದ್ಧಕ್ಕೂ ಧೋನಿ ಬೊಂಬಾಟ್ ಸವಾರಿ ನಡೆಸಿದ್ದರು. ಇದರ ಬೆನ್ನಲ್ಲೇ ನಾಯಕ ಧೋನಿ ರಸ್ತೆ ಸಾರಿಗೆ ನಿಯಮ ಉಲ್ಲಂಘನೆಗಾಗಿ 450 ರು. ದಂಡ ತೆರಬೇಕಾಗಿ ಬಂದಿದೆ.

ಟ್ರಾಫಿಕ್ ನಿಯಮದನ್ವಯ ವಾಹನ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ವಾಹನದ ಮುಂಭಾಗದಲ್ಲಿರಬೇಕು. ಆದರೆ ಧೋನಿ ವಿಂಟೇಜ್ ಬೈಕ್ ನಲ್ಲಿ ನಂಬರ್ ಪ್ಲೇಟ್ ಕಂಡುಬಂದಿಲ್ಲ. ಬದಲಾಗಿ ಇದು ಚಕ್ರದ ಮಡ್ ಗಾರ್ಡ್ ನ ಎಡಬದಿಯಲ್ಲಿ ಇದನ್ನು ನಮೂದಿಸಲಾಗಿತ್ತು. ಇದರಿಂದಾಗಿ ನಿಯಮ ಉಲ್ಲಂಘನೆಯಾಗಿದೆ ಎಂದು ಟ್ರಾಫಿಕ್ ಪೊಲೀಸರು ಖಚಿತಪಡಿಸಿದ್ದಾರೆ.

ಪ್ರಸ್ತುತ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ದಂಡವನ್ನು ಅವರ ತಂದೆ ಪಾನ್ ಸಿಂಗ್ ತೆತ್ತಿರುವುದಾಗಿ ತಿಳಿದು ಬಂದಿದೆ.

English summary
Mahendra Singh Dhoni Fined for Violating Traffic Rules in Ranchi
Story first published: Wednesday, April 8, 2015, 13:51 [IST]
Please Wait while comments are loading...

Latest Photos