ಈ ಬೆಪ್ಪತಕ್ಕಡಿಗೆ ಆಸ್ಕರ್ ಪ್ರಶಸ್ತಿ ಸಿಗಲೇಬೇಕು!

By Nagaraja

50 ಸಾವಿರದ ಸ್ಕೂಟರ್‌ಗೆ 8 ಲಕ್ಷದ ನಂಬರ್ ಪ್ಲೇಟ್ ಖರೀದಿಸಿದ ಆಸಾಮಿ - ಹೌದು, ಇದನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಬೆಪ್ಪತಕ್ಕಡಿಯೊಬ್ಬ 50,000 ರುಪಾಯಿಗಳ ಸ್ಕೂಟರ್ ವೊಂದಕ್ಕೆ ಬರೋಬ್ಬರಿ ಎಂಟು ಲಕ್ಷ ರು.ಗಳಷ್ಟು ರುಪಾಯಿ ಖರ್ಚು ಮಾಡಿ ನಂಬರ್ ಪ್ಲೇಟ್ ಖರೀದಿಸಿದ್ದಾನೆ. ಈತನ ಮಹಾ ಬುದ್ದಿವಂತಿಕೆಗೆ ಆಸ್ಕರ್ ಪ್ರಶಸ್ತಿ ನೀಡಬಹುದೇನೋ?

ಇವನ್ನೂ ಓದಿ - ಚೋಟು ಸ್ವಾಮಿಯ ಫ್ಯಾನ್ಸಿ ನಂಬರ್ ಕ್ರೇಜ್

ಇಷ್ಟು ದೊಡ್ಡ ಮೊತ್ತ ನಮ್ಮ ಕೈಯಲ್ಲಿರುತ್ತಿದ್ದರೆ ಬಹುಶ: ಐಷಾರಾಮಿ ಕಾರು ಖರೀದಿಸಿರಬಹುದೇನೋ ಅಲ್ಲವೇ? ಆದರೆ ಈ ಭೂಪ '0001' ವಿಐಪಿ ನಂಬರ್ ಗಾಗಿ ಬರೋಬ್ಬರಿ 8.1 ಲಕ್ಷ ರುಪಾಯಿ ಖುರ್ಚು ಮಾಡಿದ್ದಾನೆ.

ನಂಬರ್ ಪ್ಲೇಟ್

ಇವನ್ನೂ ಓದಿ - 'ಎಕೆ-47'ಗಾಗಿ 7 ಲಕ್ಷ ಪಾವತಿಸಿದ ಈ ಮಹಾನ್ ರೈತ!

ಪಂಜಾಬ್‌ನ ಚಂಡೀಗಡದ ಕ್ಯಾಟರಿಂಗ್ ಉದ್ಯಮಿ ಕನ್ವಾಲ್ ಜೀತ್ ವಾಲಿಯಾ ಎಂಬವರೇ ಈ ಮಹಾನ್ ವ್ಯಕ್ತಿಯಾಗಿದ್ದಾರೆ. ಫ್ಯಾನಿ ನಂಬರ್ ಖರೀದಿ ಒಂದು ಕ್ರೇಜ್ ಎಂಬುದು ನಿಮೆಗೆಲ್ಲರಿಗೂ ತಿಳಿದಿರುವ ವಿಚಾರ. ಇದರಲ್ಲೂ ಚಂಡೀಗಡದಲ್ಲಿ ಇದು ಉದ್ಯಮಗಳಿಗೆ ಹವ್ಯಾಸವಾಗಿಬಿಟ್ಟಿದೆ.

ಇವನ್ನೂ ಓದಿ - ಕನ್ನಡದಲ್ಲಿ ನಂಬರ್ ಪ್ಲೇಟ್; ಇದು ಭಾಷಾ ಪ್ರೇಮವೇ?

ತಾವು ಹೊಸತಾಗಿ ಖರೀದಿಸಿದ ಆಕ್ಟಿವಾ ಸ್ಕೂಟರ್‌ಗಾಗಿ ಕನ್ವಾಲ್ ಜೀತ್ 'CH01BC 0001' ವಿಐಪಿ ನಂಬರ್ ಖರೀದಿಸಿದ್ದಾರೆ. ಆದರೆ ಇಲ್ಲಿಗೆ ಅವರ ಹುಚ್ಚುತನ ಮುಗಿಯುವುದಿಲ್ಲ. ಮಗನ ಬೈಕ್ (CH01BC 0011 ) ಹಾಗೂ ಮಗದೊಂದು ಎಸ್ ಯುವಿ ನಂಬರ್ ಗಾಗಿ (CH01BC 0026) 2.6 ಲಕ್ಷ ರುಪಾಯಿ ಖರ್ಚು ಮಾಡಿದ್ದಾರೆ. ಇವರ ಕೈಯಲ್ಲಿರುವ ಇನ್ನಿತರ ಎರಡು ಎಸ್ ಯುವಿಗಳು ಸಹ ಫ್ಯಾನ್ಸಿ ನಂಬರ್ ಗಳನ್ನು ಹೊಂದಿದೆ.

ಒಟ್ಟಿನಲ್ಲಿ ಚಂಡೀಗಡ ನಗರ ಪರವಾನಗಿ ವಿಭಾಗವು ತನ್ನ ಗಲ್ಲ ಪೆಟ್ಟಿಗೆಯನ್ನು ತುಂಬಿಕೊಂಡಿದ್ದು, ಲೈಸನ್ಸ್ ಪ್ಲೇಟ್ ನಂಬರ್ ವಿತರಣೆಯಲ್ಲೇ ಬರೋಬ್ಬರಿ 77.71 ಲಕ್ಷ ರು.ಗಳನ್ನು ಸಂಗ್ರಹಿಸಿರುವುದಾಗಿ ಅಧಿಕೃತ ವರದಿಗಳು ತಿಳಿಸುತ್ತದೆ. ಈಗ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿರಿ.

Most Read Articles

Kannada
English summary
Man Pays 8.1 Lakh for a VIP Number For Rs. 50,000 Scooter
Story first published: Wednesday, May 13, 2015, 11:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X