ಹಾರ್ಲೆ ಡೇವಿಡ್ಸನ್ ನಕಲು ಮಾಡಿತೇ ಹೊಸ ಅವೆಂಜರ್?

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹೊಸ ಸ್ವರೂಪ, ಎಂಜಿನ್‌ ಹಾಗೂ ಎಂಜಿನ್ ಆಯ್ಕೆಯೊಂದಿಗೆ ಪರಿಷ್ಕೃತ ಅವೆಂಜರ್ ಕ್ರೂಸರ್ ಬೈಕ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರೊಂದಿಗೆ ಈ ಹಬ್ಬದ ಆವೃತ್ತಿಯಲ್ಲಿ ಕಳೆಗುಂದಿರುವ ಮಾರಾಟಕ್ಕೆ ಉತ್ತೇಜನ ನೀಡುವ ನಿರೀಕ್ಷೆ ಹೊಂದಿದೆ.

ಐಕಾನಿಕ್ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಮಾದರಿಯನ್ನು 2015 ಬಜಾಜ್ ಅವೆಂಜರ್ ನಕಲು ಮಾಡಿತೇ ಎಂಬುದೀಗ ಹೆಚ್ಚಿನ ಚರ್ಚೆಗೀಡು ಮಾಡಿದೆ. ಈ ಸಂಬಂಧ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಭೇಟಿ ಕೊಡಿರಿ.

2015 ಬಜಾಜ್ ಅವೆಂಜರ್ ಸಮಗ್ರ ವಿವರ ಮತ್ತು ಚಿತ್ರಗಳು

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಡಾರ್ಕ್ ಕಸ್ಟಮ್ ಮಾದರಿಯಿಂದ ಸ್ಪೂರ್ತಿ ಪಡೆದ ವಿನ್ಯಾಸ ತಂತ್ರಗಾರಿಕೆಯನ್ನು ಹೊಂದಿರುವ ಬಜಾಜ್ ಅವೆಂಜರ್ ಕಪ್ಪು ವರ್ಣದ ಬಣ್ಣವನ್ನು ಪಡೆದಿದೆ.

2015 ಬಜಾಜ್ ಅವೆಂಜರ್ ಸಮಗ್ರ ವಿವರ ಮತ್ತು ಚಿತ್ರಗಳು

ಇಂಧನ ಟ್ಯಾಂಕ್ ಮೇಲೆ ವಿಶೇಷ ಗ್ರಾಫಿಕ್ಸ್ ಪಡೆದಿರುವ ಹೊಸ ಅವೆಂಜರ್, ಹೊಸದಾಗಿ ವಿನ್ಯಾಸಗೊಳಿಸಲಾದ ಎಕ್ಸಾಸ್ಟ್ ಕೊಳವೆ, ಕ್ಲಿಯರ್ ಟರ್ನ್ ಸಿಗ್ನಲ್ ಲೆನ್ಸ್ ಹಾಗೂ ಮ್ಯಾಟ್ ಬ್ಲ್ಯಾಕ್ ಅಲಾಯ್ ವೀಲ್ ಪಡೆದುಕೊಂಡಿದೆ.

2015 ಬಜಾಜ್ ಅವೆಂಜರ್ ಸಮಗ್ರ ವಿವರ ಮತ್ತು ಚಿತ್ರಗಳು

ಹಿಂದಿನ ಮಾದರಿಯಲ್ಲಿದ್ದ 220ಸಿಸಿ ಗಿಂತಲೂ ವಿಭಿನ್ನವಾಗಿ 2015 ಬಜಾಜ್ ಅವೆಂಜರ್, ಪಲ್ಸರ್ 200 ಎನ್ ಎಸ್ ಮಾದರಿಗೆ ಸಮಾನವಾದ 200 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು 18.3 ಎನ್‌ಎಂ ತಿರುಗುಬಲದಲ್ಲಿ 23.52 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

2015 ಬಜಾಜ್ ಅವೆಂಜರ್ ಸಮಗ್ರ ವಿವರ ಮತ್ತು ಚಿತ್ರಗಳು

ಇದರೊಂದಿಗೆ ಈಗಿರುವ 220ಸಿಸಿ ಎಂಜಿನ್ ಸಹ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನುಳಿದಂತೆ ಪ್ರೀಮಿಯಂ ವೆರಿಯಂಟ್ ಎಬಿಸ್ ಭದ್ರತಾ ವ್ಯವಸ್ಥೆಯೊಂದಿಗೂ ಲಭ್ಯವಾಗಲಿದೆ.

2015 ಬಜಾಜ್ ಅವೆಂಜರ್ ಸಮಗ್ರ ವಿವರ ಮತ್ತು ಚಿತ್ರಗಳು

ಹೊಸ ಅವೆಂಜರ್ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡುವುದು ಸಂಸ್ಥೆಯ ಯೋಜನೆಯಾಗಿದೆ. ಇದು ಒಂದು ಲಕ್ಷ ರು.ಗಳ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


Most Read Articles

Kannada
English summary
Bajaj All-Set To Launch New Avenger (Pics & Details)
Story first published: Thursday, October 8, 2015, 14:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X