ದುಬಾರಿಯಾಯ್ತು ಟ್ರಯಂಪ್ ಬೈಕ್ಸ್

By Nagaraja

ಕಳೆದ ವರ್ಷ ಭಾರತ ಮಾರುಕಟ್ಟೆ ಪ್ರವೇಶ ಪಡೆದಿದ್ದ ಬ್ರಿಟನ್ ಮೂಲದ ಐಕಾನಿಕ್ ಟ್ರಯಂಪ್ ಮೋಟಾರ್ ಸೈಕಲ್ ದೇಶದ ಪ್ರೀಮಿಯಂ ಬೈಕ್ ವಿಭಾಗದಲ್ಲಿ ಸರಾಸರಿ ಮಾರಾಟ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಪ್ರಸ್ತುತ ಸಂಸ್ಥೆಯು ತನ್ನೆಲ್ಲ ಶ್ರೇಣಿಗಳ ಬೈಕ್ ಗಳಿಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

ಆಮದು ವೆಚ್ಚ ಹೆಚ್ಚಾಗಿರುವುದೇ ಟ್ರಯಂಪ್ ಬೈಕ್ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದು ಆಗಲೇ ದುಬಾರಿಯಾಗಿರುವ ಟ್ರಯಂಪ್ ಬೈಕ್ ಗಳು ಮತ್ತಷ್ಟು ದುಬಾರಿ ಮಾಡಿದೆ. ವರದಗಳ ಪ್ರಕಾರ ಕನಿಷ್ಠ 20,000 ರು.ಗಳಿಂದ ಗರಿಷ್ಠ ಒಂದು ಲಕ್ಷ ರು.ಗಳ ವರೆಗೆ ಬೆಲೆ ಏರಿಕೆ ಕಂಡುಬಂದಿದೆ.

triump tiger xcx

ಅಂದ ಹಾಗೆ ದೇಶದಲ್ಲಿ 11 ಡೀಲರ್ ಶಿಪ್ ಗಳಲ್ಲಾಗಿ 13 ಶ್ರೇಣಿಗಳ ಬೈಕ್ ಗಳನ್ನು ಟ್ರಯಂಪ್ ಮಾರಾಟ ಮಾಡುತ್ತಿದೆ. ಹಾಗೆಯೇ 2018ರ ವೇಳೆಗೆ ಈ ಸಂಖ್ಯೆಯನ್ನು 25ಕ್ಕೆ ಏರಿಸುವುದು ಸಂಸ್ಥೆಯ ಗುರಿಯಾಗಿದೆ. ಅಂತೆಯೇ ಪ್ರಸಕ್ತ ಸಾಲಿನಲ್ಲಿ 2500ರಷ್ಟು ಬೈಕ್ ಗಳನ್ನು ಮಾರಾಟ ಮಾಡುವ ಇರಾದೆ ಹೊಂದಿದೆ.

ಪರಿಷ್ಕೃತ ಬೆಲೆ ಇಂತಿದೆ (ಎಕ್ಸ್ ಶೋ ರೂಂ ದೆಹಲಿ)

  • ಟ್ರಯಂಪ್ ಬೊನೆವಿಲ್ಲೆ: 5.99 ಲಕ್ಷ ರು.
  • ಟ್ರಯಂಪ್ ಬೊನೆವಿಲ್ಲೆ ಟಿ100: 6.97 ಲಕ್ಷ ರು.
  • ಟ್ರಯಂಪ್ ಥ್ರಾಕ್ಸ್ಟನ್: 7.18 ಲಕ್ಷ ರು.
  • ಟ್ರಯಂಪ್ ಸ್ಟ್ರೀಟ್ ಟ್ರಿಪಲ್: 7,91 ಲಕ್ಷ ರು.
  • ಟ್ರಯಂಪ್ ಸ್ಪೀಡ್ ಟ್ರಿಪಲ್: 11,05 ಲಕ್ಷ ರು.
  • ಟ್ರಯಂಪ್ ಡೇಟೋನಾ 675: 10,69 ಲಕ್ಷ ರು.
  • ಟ್ರಯಂಪ್ ಡೇಟೋನಾ 675ಆರ್: 12,14 ಲಕ್ಷ ರು.
  • ಟ್ರಯಂಪ್ ಎಕ್ಸ್ ಸಿ ಎಕ್ಸ್: 10,50 ಲಕ್ಷ ರು.
  • ಟ್ರಯಂಪ್ ಎಕ್ಸ್ ಆರ್ ಎಕ್ಸ್: 12,70 ಲಕ್ಷ ರು.
  • ಟ್ರಯಂಪ್ ಟೈಗರ್ ಎಕ್ಸ್ ಪ್ಲೋರರ್: 18,75 ಲಕ್ಷ ರು.
  • ಟ್ರಯಂಪ್ ಥಂಡರ್ ಬರ್ಡ್ ಸ್ಟ್ರೋಮ್: 13,95 ಲಕ್ಷ ರು.
  • ಟ್ರಯಂಪ್ ಥಂಡರ್ ಬರ್ಡ್ ಎಲ್ ಟಿ: 16,19 ಲಕ್ಷ ರು.
  • ಟ್ರಯಂಪ್ ರಾಕೆಟ್ III: 21,29 ಲಕ್ಷ ರು.
Most Read Articles

Kannada
English summary
British based two-wheeler manufacturer, Triumph Motorcycles has had a decent outing in India during 2014. They have now decided to hike their motorcycle prices for 2015 to offset their input costs.
Story first published: Monday, March 30, 2015, 9:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X