ಹಬ್ಬದ ಸಂಭ್ರಮಕ್ಕೆ ಟಿವಿಎಸ್ ಅಪಾಚೆ ಮ್ಯಾಟ್ ಬ್ಲೂ ಆವೃತ್ತಿ

Written By:

ಪ್ರಸಕ್ತ ಸಾಲಿನ ಹಬ್ಬದ ಸಂಭ್ರಮಕ್ಕೆ ಹೊಸ ಮೆರಗು ತುಂಬಲಿರುವ ಟಿವಿಎಸ್, ವಾಹನ ಪ್ರೇಮಿಗಳಿಗಾಗಿ ಅತಿ ನೂತನ ಅಪಾಚೆ ಆರ್‌ಟಿಆರ್ 180 ಎಬಿಎಸ್ ಮ್ಯಾಟ್ ಬ್ಲೂ ಎಡಿಷನ್ ಪರಿಚಯಪಡಿಸಲಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಅಪಾಚೆ ಆರ್‌ಟಿಆರ್ 180 ಎಬಿಎಸ್ ಮಾದರಿಯು 87,283 ರು.ಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ದುಬಾರಿಯೆನಿಸುತ್ತದೆ. ಅಂದರೆ ಈ ವಿಶೇಷ ಮ್ಯಾಟ್ ಬ್ಲೂ ಆವೃತ್ತಿಯು ಇದಕ್ಕಿಂತಲೂ 1,500 ರು.ಗಳಿಂದ 2,000 ರು.ಗಳಷ್ಟು ದುಬಾರಿಯೆನಿಸಲಿದೆ.

ಹಾಗಿದ್ದರೂ ಎಂಜಿನ್ ತಾಂತ್ರಿಕತೆ ಅಥವಾ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಅಂತೆಯೇ ಈ ಹಬ್ಬದ ಆವೃತ್ತಿಯಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 180 ಎಬಿಎಸ್ ಮ್ಯಾಟ್ ಬ್ಲೂ ಎಡಿಷನ್ 177.4 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 15.5 ಎನ್‌ಎಂ ತಿರುಗುಬಲದಲ್ಲಿ 17.03 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಇನ್ನು ಡ್ಯುಯಲ್ ಚಾನೆಲ್ ಎಬಿಎಸ್ ಜೊತೆ ಆಗಮನವಾಗಲಿರುವ ಅಪಾಚೆ ಆರ್‌ಟಿಆರ್ 180, ಮುಂಭಾಗದಲ್ಲಿ 270 ಎಂಎಂ ರೊಟೊ ಪೆಡಲ್ ಡಿಸ್ಕ್ ಮತ್ತು ಹಿಂದುಗಡೆ 200 ಎಂಎಂ ರೊಟೊ ಪೆಡಲ್ ಡಿಸ್ಕ್ ಜೊತೆ ಎಬಿಎಸ್ ಮತ್ತು ಆರ್‌ಎಲ್‌ಪಿ ಪಡೆಯಲಿದೆ. ಅಂತೆಯೇ ಡಿಜಿಟಲ್ ಸ್ಪೀಡೋಮೀಟರ್ ಮತ್ತು ಅನಲಾಗ್ ಟ್ಯಾಕೋಮೀಟರ್ ಇತರ ಪ್ರಮುಖ ಆಕರ್ಷಣೆಯಾಗಲಿದೆ.

Read more on ಟಿವಿಎಸ್ tvs
English summary
TVS Apache RTR 180 ABS Matte Blue Edition Ready For Festive Season
Please Wait while comments are loading...

Latest Photos