ಮುಂದಿನ ವರ್ಷಾರಂಭದಲ್ಲಿ ಯುಎಂ ಕ್ರೂಸರ್ ಬೈಕ್ ಭಾರತಕ್ಕೆ

Written By:

ವಿಸ್ತಾರವಾಗಿ ಹರಡಿರುವ ಭಾರತೀಯ ಮಾರುಕಟ್ಟೆಯಲ್ಲಿ ಬೆಳೆದು ಬರುತ್ತಿರುವ ಕ್ರೂಸರ್ ಬೈಕ್‌ಗಳ ಬೇಡಿಕೆಯನ್ನು ಮನಗಂಡಿರುವ ಅಮೆರಿಕ ಮೂಲದ ಪ್ರಕ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯುಎಂ ಮೋಟಾರ್ ಸೈಕಲ್ಸ್ (UM Motorcycles) ಮುಂದಿನ ವರ್ಷಾರಂಭದಲ್ಲಿ ಕ್ರೂಸರ್ ಶ್ರೇಣಿಯ ಬೈಕ್ ಗಳನ್ನು ದೇಶಕ್ಕೆ ಪರಿಚಯಿಸಲಿದೆ.

ಬಲ್ಲ ಮೂಲಗಳ ಪ್ರಕಾರ 2016 ಜನವರಿ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಯೋಜನೆಯಾಗಲಿರುವ ಆಟೋ ಎಕ್ಸ್ ಪೋದಲ್ಲಿ ಯುಎಂ ಮೋಟಾರ್ ಸೈಕಲ್ಸ್ ಭಾರತಕ್ಕೆ ಭರ್ಜರಿ ಎಂಟ್ರಿ ಕೊಡಲಿದೆ.

ಯುಎಂ ಮೋಟಾರ್ ಸೈಕಲ್

ಲೋಹಿಯಾ ಆಟೋ ಸಹಯೋಜದಲ್ಲಿ ಭಾರತದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಿರುವ ಯುಎಂ ಮೋಟಾರ್ ಸೈಕಲ್ಸ್ ಪ್ರಾರಂಭದಲ್ಲಿ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ಕ್ರೂಸರ್ ಬೈಕ್ ಗಳನ್ನು ಪರಿಚಯಿಸಲಿದೆ. ತದಾ ಬಳಿಕ ದೇಶದಲ್ಲೇ ಸ್ಥಳೀಯವಾಗಿ ಜೋಡಣೆ ಮಾಡುವ ಇರಾದೆಯನ್ನು ಹೊಂದಿದೆ.

ಉತ್ತರಾಖಂಡದಲ್ಲಿ ನೂತನ ಘಟಕ ತೆರೆದುಕೊಳ್ಳಲಿರುವ ಯುಎಂ ಮೋಟಾರ್ ಸೈಕಲ್ಸ್ ಮತ್ತು ಲೋಹಿಯಾ ಆಟೋ ವಾರ್ಷಿಕವಾಗಿ ಒಂದು ಲಕ್ಷ ದ್ವಿಚಕ್ರ ವಾಹನಗಳನ್ನು ನಿರ್ಮಿಸಲಿದೆ. 350ರಿಂದ 500 ಸಿಸಿ ಎಂಜಿನ್ ಸಾಮರ್ಥ್ಯದ ಬೈಕ್ ಬಿಡುಗಡೆ ಮಾಡುವ ಯೋಜನೆಯನ್ನು ಯುಎಂ ಹೊಂದಿದೆ.

English summary
UM Motorcycles To Launch Cruiser Bike At 2016 Auto Expo
Story first published: Monday, September 28, 2015, 12:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark