ವೆಸ್ಪಾದಿಂದ ಎಲ್‌ಎಕ್ಸ್, ವಿಎಕ್ಸ್, ಎಸ್ ಮಾದರಿಗಳಿಗೆ ಕತ್ತರಿ ಪ್ರಯೋಗ

Written By:

ಇಟಲಿಯ ಐಕಾನಿಕ್ ಸಂಸ್ಥೆಯಾಗಿರುವ ಪಿಯಾಜಿಯೊ ಸ್ಕೂಟರ್ ಬ್ರಾಂಡ್ ಆಗಿರುವ ವೆಸ್ಪಾ ಇದೀಗಷ್ಟೇ ಭಾರತದಲ್ಲಿ 150 ಹಾಗೂ 125 ಶ್ರೇಣಿಯ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿತ್ತು [ವೆಸ್ಪಾ ಪ್ರೀಮಿಯಂ ಶ್ರೇಣಿಗಳ ಸ್ಕೂಟರ್ ಬಿಡುಗಡೆ]. ಪ್ರಸ್ತುತ ಸಂಸ್ಥೆಯೀಗ ತನ್ನ ಅಧಿಕೃತ ವೆಬ್ ಸೈಟ್ ನಿಂದ ವೆಸ್ಪಾ ಎಲ್ ಎಕ್ಸ್, ವಿಎಕ್ಸ್ ಹಾಗೂ ಎಸ್ ಮಾದರಿಗಳನ್ನು ತೆಗೆದು ಹಾಕಿದೆ.

ಹಳೆಯ ಮಾದರಿಗಳನ್ನು ಬದಿಗೆ ಸರಿಸುವ ಮೂಲಕ ಈಗಷ್ಟೇ ಪ್ರವೇಶ ಪಡೆದಿರುವ ಹೊಸ ಸ್ಕೂಟರ್ ಗಳ ಮಾರಾಟಕ್ಕೆ ಉತ್ತೇಜನ ನೀಡುವುದು ಸಂಸ್ಥೆಯ ಇರಾದೆಯಾಗಿದೆ. ಇದರಂತೆ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ.

ವೆಸ್ಬಾ

ವೆಸ್ಪಾದಿಂದ ಮಾರಾಟಕ್ಕೆ ಲಭ್ಯವಿರುವ ಮಾದರಿಗಳು

  • ವೆಸ್ಪಾ ಎಸ್‌ಎಕ್ಸ್‌ಎಲ್ 150
  • ವೆಸ್ಪಾ ವಿಎಕ್ಸ್‌ಎಲ್ 150
  • ವೆಸ್ಪಾ ಎಸ್‌ಎಕ್ಸ್‌ಎಲ್ 125
  • ವೆಸ್ಪಾ ವಿಎಕ್ಸ್‌ಎಲ್ 125
  • ವೆಸ್ಪಾ ಎಲೆಗಂಟ್
ವೆಸ್ಬಾ

ನೂತನ ಸ್ಕೂಟರ್ ಗಳಲ್ಲಿ ಹೆಚ್ಚಿನ ಸ್ಟೈಲಿಷ್ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದ್ದು, ಗರಿಷ್ಟ ವೈಶಿಷ್ಟ್ಯಗಳು ಸಿಗಲಿದೆ. ಒಟ್ಟಿನಲ್ಲಿ ದೇಶದ ಪ್ರೀಮಿಯಂ ಸ್ಕೂಟರ್ ಗಳ ವಿಭಾಗದಲ್ಲಿ ವೆಸ್ಪಾ ತನ್ನದೇ ಆದ ಮಾರಾಟ ವಲಯವನ್ನು ಸೃಷ್ಟಿಸುವ ಇರಾದೆಯಲ್ಲಿದೆ.

Read more on ವೆಸ್ಪಾ vespa
English summary
Vespa India Removes LX, VX & S Scooters From Official Website
Story first published: Wednesday, September 9, 2015, 7:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark