ಕೆಟಿಎಂ 390 ಅಡ್ವೆಂಚರ್ ಬೈಕ್ ಟೆಸ್ಟಿಂಗ್ ವೇಳೆ ಚಿತ್ರಗಳು ಲೀಕ್

Posted By: Super Admin

ಆಸ್ಟ್ರಿಯಾ ಮೂಲದ ವಾಹನ ಸಂಸ್ಥೆ ಕೆಟಿಎಂ ಅತಿ ನೂತನ 390 ಅಡ್ವೆಂಚರ್ ಬೈಕ್ ಅಭಿವೃದ್ಧಿಪಡಿಸಿದ್ದು, ಯುರೋಪ್ ನಲ್ಲಿ ಟೆಸ್ಟಿಂಗ್ ಹಂತದಲ್ಲಿರುವ ವೇಳೆಗೆ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದೆ.

ಕೆಟಿಎಂ 390 ಅಡ್ವೆಂಚರ್ ಬೈಕ್ ಟೆಸ್ಟಿಂಗ್ ವೇಳೆ ಚಿತ್ರಗಳು ಲೀಕ್

ದಕ್ಷಿಣ ಯುರೋಪ್ ನ ಕೆಟಿಎಂ ಘಟಕದ ಹೊರಗಡೆ ಪ್ರಯೋಗಿಕ ಸಂಚಾರ ಪರೀಕ್ಷೆಯ ವೇಳೆಯಲ್ಲಿ 390 ಅಡ್ವೆಂಚರ್ ಬೈಕ್ ನ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.

ಕೆಟಿಎಂ 390 ಅಡ್ವೆಂಚರ್ ಬೈಕ್ ಟೆಸ್ಟಿಂಗ್ ವೇಳೆ ಚಿತ್ರಗಳು ಲೀಕ್

ಆರ್ ಸಿ 390 ಮತ್ತು ಡ್ಯೂಕ್ 390 ತಳಹದಿಯಲ್ಲಿ ನೂತನ ಕೆಟಿಎಂ 390 ಅಡ್ವೆಂಚರ್ ಬೈಕ್ ನಿರ್ಮಾಣವಾಗುವ ಸಾಧ್ಯತೆಯಿದೆ.

ಕೆಟಿಎಂ 390 ಅಡ್ವೆಂಚರ್ ಬೈಕ್ ಟೆಸ್ಟಿಂಗ್ ವೇಳೆ ಚಿತ್ರಗಳು ಲೀಕ್

ಸದ್ಯಕ್ಕೆ ಎಂಜಿನ್ ಮಾನದಂಡಗಳ ಬಗ್ಗೆ ವಿವರಗಳು ಅಲಭ್ಯವಾಗಿದೆ. ಇದು ಆರ್ ಸಿ ಮತ್ತು ಡ್ಯೂಕ್ ಸಮಾನವಾದ ಎಂಜಿನ್ ಗಿಟ್ಟಿಸಿಕೊಂಡಲ್ಲಿ 40 ಅಶ್ವಶಕ್ತಿ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿರಲಿದೆ.

ಕೆಟಿಎಂ 390 ಅಡ್ವೆಂಚರ್ ಬೈಕ್ ಟೆಸ್ಟಿಂಗ್ ವೇಳೆ ಚಿತ್ರಗಳು ಲೀಕ್

ಆಫ್ ರೋಡ್ ಚಾಲನಾ ಸಾಮರ್ಥ್ಯವು ಕೆಟಿಎಂ 390 ಅಡ್ವೆಂಚರ್ ಬೈಕ್ ನ ಪ್ರಮುಖ ವಿಶಿಷ್ಟತೆಯಾಗಲಿದೆ. ಇದಕ್ಕಣುಗುಣವಾಗಿ ದೊಡ್ಡದಾದ ಸ್ಪೋಕ್ಡ್ ಚಕ್ರಗಳನ್ನು ಗಿಟ್ಟಿಸಿಕೊಳ್ಳಲಿದೆ.

ಕೆಟಿಎಂ 390 ಅಡ್ವೆಂಚರ್ ಬೈಕ್ ಟೆಸ್ಟಿಂಗ್ ವೇಳೆ ಚಿತ್ರಗಳು ಲೀಕ್

ಇನ್ನು ಸ್ಕಿಡ್ ಪ್ಲೇಟ್, ಹ್ಯಾಂಡ್ ಗಾರ್ಡ್ ಹಾಗೂ ಹೈ ಮೌಂಟೆಡ್ ಎಕ್ಸಾಸ್ಟ್ ವ್ಯವಸ್ಥೆಗಳ್ನು ಕೊಡಲಾಗಿದೆ.

ಕೆಟಿಎಂ 390 ಅಡ್ವೆಂಚರ್ ಬೈಕ್ ಟೆಸ್ಟಿಂಗ್ ವೇಳೆ ಚಿತ್ರಗಳು ಲೀಕ್

ಯುರೋಪ್ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಮೊಟೊರಾಡ್ ಜಿ310ಜಿಎಸ್ ಬಿಡುಗಡೆ ಮಾಡಲಿರುವಂತೆಯೇ ಕೇಸರಿ ಪಡೆಯಿಂದ ಈ ಸವಾಲನ್ನು ಎದುರಿಸಲು ಸಾಧ್ಯ ಎಂಬುದು ಸ್ಪಷ್ಟವಾಗಿದೆ.

ಕೆಟಿಎಂ 390 ಅಡ್ವೆಂಚರ್ ಬೈಕ್ ಟೆಸ್ಟಿಂಗ್ ವೇಳೆ ಚಿತ್ರಗಳು ಲೀಕ್

ಇತ್ತ ಕೆಟಿಎಂ 390 ಅಡ್ವೆಂಚರ್ ಬೈಕ್ ಭಾರತಕ್ಕೆ ಆಗಮಿಸಿದ್ದಲ್ಲಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಮುಂತಾದ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

English summary
2018 KTM 390 Adventure Spy Images + Complete Details

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark