ಬಜಾಜ್ ಬೈಕ್ ಗಳಿಗೆ ಬೆಲೆ ಏರಿಕೆ; ಡೊಮಿನರ್‌ಗೆ ಧಕ್ಕೆಯಾದಿತೇ?

Written By:

ದೇಶದಲ್ಲಿರುವ ತನ್ನೆಲ್ಲ ಶ್ರೇಣಿಯ ಬೈಕ್ ಗಳಿಗೆ ಬೆಲೆ ಏರಿಕೆಗೊಳಿಸಲು ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಬಜಾಜ್ ಆಟೋ ನಿರ್ಧರಿಸಿದೆ. ಇದು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಬಹುನಿರೀಕ್ಷಿತ ಡೊಮಿನರ್ 400 ಬೈಕ್ ಗೂ ತಟ್ಟಿತೇ ಎಂಬುದು ಬಹಳಷ್ಟು ಕುತೂಹಲ ಮೂಡಿಸಿದೆ.

ಬಜಾಜ್ ಬೈಕ್ ಗಳಿಗೆ ಬೆಲೆ ಏರಿಕೆ; ಡೊಮಿನರ್‌ಗೆ ಧಕ್ಕೆಯಾದಿತೇ?

ದೇಶದಲ್ಲಿರುವ ಬಜಾಜ್ ಶ್ರೇಣಿಯ ಬೈಕ್ ಗಳಿಗೆ ಹೊಸ ವರ್ಷದಿಂದ 1,500 ರು.ಗಳ ವರೆಗೂ ಬೆಲೆ ಏರಿಕೆಯಾಗಲಿದೆ.

ಬಜಾಜ್ ಬೈಕ್ ಗಳಿಗೆ ಬೆಲೆ ಏರಿಕೆ; ಡೊಮಿನರ್‌ಗೆ ಧಕ್ಕೆಯಾದಿತೇ?

ನೂತನ ಬೆಲೆ ನೀತಿಯು ಜನವರಿ ತಿಂಗಳಿಂದಲೇ ಅನ್ವಯವಾಗಲಿದೆ. ಇದು ಹೊಸ ವರ್ಷದಲ್ಲಿ ಬಜಾಜ್ ಬೈಕ್ ಕೊಳ್ಳುವವರಿಗೆ ಸ್ವಲ್ಪ ಹಿನ್ನಡೆಯನ್ನುಂಟು ಮಾಡಲಿದೆ.

ಬಜಾಜ್ ಬೈಕ್ ಗಳಿಗೆ ಬೆಲೆ ಏರಿಕೆ; ಡೊಮಿನರ್‌ಗೆ ಧಕ್ಕೆಯಾದಿತೇ?

ಬಜಾಜ್ ಇತ್ತೀಚೆಗಷ್ಟೇ ತನ್ನ ಶ್ರೇಣಿಯ ಬೈಕ್ ಗಳಿಗೆ ಹೊಸತಾದ ಬಿಎಸ್-IV ಎಂಜಿನ್ ಜೋಡಣೆಗೊಳಿಸಿ ಪರಿಷ್ಕೃತ ರೂಪದಲ್ಲಿ ಬಿಡುಗಡೆಗೊಳಿಸಿತ್ತು.

ಬಜಾಜ್ ಬೈಕ್ ಗಳಿಗೆ ಬೆಲೆ ಏರಿಕೆ; ಡೊಮಿನರ್‌ಗೆ ಧಕ್ಕೆಯಾದಿತೇ?

2017 ಎಪ್ರಿಲ್ ತಿಂಗಳಿಂದ ದೇಶದಲ್ಲಿ ದ್ವಿಚಕ್ರ ವಾಹನಗಳಿಗೆ ಬಿಎಸ್-IV ಎಂಜಿನ್ ಜೋಡಣೆಯಾಗುವ ನಿಯಮವನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಲಿದೆ. ತನ್ಮೂಲಕ ಮಾಲಿನ್ಯ ಮಟ್ಟವನ್ನು ತಡೆಯಲು ಕ್ರಮ ಕೈಗೊಂಡಿದೆ.

ಬಜಾಜ್ ಬೈಕ್ ಗಳಿಗೆ ಬೆಲೆ ಏರಿಕೆ; ಡೊಮಿನರ್‌ಗೆ ಧಕ್ಕೆಯಾದಿತೇ?

ಬಜಾಜ್ ಸಹ ಇದೇ ಕಾರಣವನ್ನು ಮುಂದಿಟ್ಟಿದ್ದು, ಬಿಎಸ್-IV ಎಂಜಿನ್ ಜೋಡಿಸುವ ನಿಟ್ಟಿನ್ಲಲಿ 700 ರು.ಗಳಿಂದ 1500 ರು.ಗಳಷ್ಟು ಬೆಲೆ ಏರಿಕೆಗೊಳಿಸಲಾಗುತ್ತಿದೆ ಎಂದಿದೆ.

ಬಜಾಜ್ ಬೈಕ್ ಗಳಿಗೆ ಬೆಲೆ ಏರಿಕೆ; ಡೊಮಿನರ್‌ಗೆ ಧಕ್ಕೆಯಾದಿತೇ?

ಅದೇ ಹೊತ್ತಿಗೆ ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯು ಸಹ ಏರಿಕೆಗೆ ಕಾರಣವಾಗಿದೆ ಎಂಬುದನ್ನು ಬಜಾಜ್ ಆಟೋ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಬಜಾಜ್ ಬೈಕ್ ಗಳಿಗೆ ಬೆಲೆ ಏರಿಕೆ; ಡೊಮಿನರ್‌ಗೆ ಧಕ್ಕೆಯಾದಿತೇ?

ಹಾಗಿದ್ದರೂ ಈ ಬೆಲೆ ಏರಿಕೆ ನೀತಿಯು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಡೊಮಿನರ್ 400 ಬೈಕ್ ಗೆ ಅನ್ವಯವಾಗುವುದಿಲ್ಲ. ಇದು ಬೆಂಗಳೂರು ಎಕ್ಸ್ ಶೋ ರೂಂ ಪರಿಚಾಯತ್ಮಕ ಬೆಲೆ 1,37 ಲಕ್ಷರು. (ಡಿಸ್ಕ್ ಬ್ರೇಕ್) ಮತ್ತು 1.51 ಲಕ್ಷ ರು.ಗಳಲ್ಲಿ (ಟ್ವಿನ್ ಚಾನೆಲ್ ಎಬಿಎಸ್) ಲಭ್ಯವಾಗಲಿದೆ.

ಬಜಾಜ್ ಬೈಕ್ ಗಳಿಗೆ ಬೆಲೆ ಏರಿಕೆ; ಡೊಮಿನರ್‌ಗೆ ಧಕ್ಕೆಯಾದಿತೇ?

ಟಾಟಾ ಮೋಟಾರ್ಸ್, ನಿಸ್ಸಾನ್, ಟೊಯೊಟಾ, ಫೋಕ್ಸ್ ವ್ಯಾಗನ್, ಹ್ಯುಂಡೈ, ಮರ್ಸಿಡಿಸ್ ಬೆಂಝ್, ಹೋಂಡಾ ಹಾಗೂ ಷೆವರ್ಲೆಗಳಂತಹ ಕಾರು ಸಂಸ್ಥೆಗಳು ಈಗಾಗಲೇ ಬೆಲೆ ಏರಿಕೆಯನ್ನು ಪ್ರಕಟಿಸಿವೆ. ಇದಕ್ಕೀಗ ಬಜಾಜ್ ಆಟೋ ದ್ವಿಚಕ್ರ ವಾಹನ ಸಂಸ್ಥೆಯು ಸೇರ್ಪಡೆಯಾಗಿದೆ.

English summary
Bajaj Announces Price Increase Of Its Motorcycles
Story first published: Thursday, December 22, 2016, 10:21 [IST]
Please Wait while comments are loading...

Latest Photos