ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ 15ರ ಹರೆಯ; ಭಾರಿ ಆಫರ್!

Written By:

ದೇಶದ ನಂ.1 ಕ್ರೀಡಾ ಬೈಕ್ ಪ್ರವೇಶಿಸಿ 15 ವಸಂತಗಳೇ ಸಂದಿವೆ. ಈ ಐತಿಹಾಸಿಕ ಕ್ಷಣವನ್ನು ಗ್ರಾಹಕರ ಜೊತೆಗೂ ಹಂಚಿಕೊಳ್ಳುವ ಮೂಲಕ ಸ್ಮರಣೀಯವಾಗಿಸಲು ಹೊರಟಿರುವ ಬಜಾಜ್ ಆಟೋ ಸಂಸ್ಥೆಯು, ತನ್ನೆಲ್ಲ ಪಲ್ಸರ್ ಶ್ರೇಣಿಯ ಬೈಕ್ ಗಳಿಗೆ ಆಕರ್ಷಕ ಆಫರುಗಳನ್ನು ಮುಂದಿಟ್ಟಿದೆ.

ಕೈಗೆಟುಕುವ ದರಗಳಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಿರುವ ಪಲ್ಸರ್ ಬಿಡುಗಡೆಯಾದ ಕೆಲವೇ ವರ್ಷಗಳಲ್ಲಿ ಅತೀವ ಜನಪ್ರಿಯತೆ ಸಾಧಿಸಿತ್ತಲ್ಲದೆ ಅಗ್ರ ಕ್ರೀಡಾ ಬೈಕೆಂಬ ಖ್ಯಾತಿಗೂ ಪಾತ್ರವಾಗಿತ್ತು. ಈಗ ಸಂಸ್ಥೆಯು 15 ವರ್ಷಗಳ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.

To Follow DriveSpark On Facebook, Click The Like Button
ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ 15ರ ಹರೆಯ; ಭಾರಿ ಆಫರ್!

ನಿಮ್ಮ ನೆಚ್ಚಿನ ಬಜಾಜ್ ಪಲ್ಸರ್ ಖರೀದಿ ವೇಳೆಯಲ್ಲಿ ಗರಿಷ್ಠ 14,100 ರುಪಾಯಿಗಳ ವರೆಗೂ ಉಳಿತಾಯ ಮಾಡಬಹುದಾಗಿದೆ. ಇದರಲ್ಲಿ ಹಣಕಾಸು ನೆರವು ಮತ್ತು ಆಕರ್ಷಕ ಉಳಿತಾಯಗಳು ಸೇರಿರಲಿದೆ.

ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ 15ರ ಹರೆಯ; ಭಾರಿ ಆಫರ್!

ಬಜಾಜ್ ಪಲ್ಸರ್ 135 ಎಲ್ ಎಸ್, 150, 180, 220 ಎಫ್ ಮತ್ತು ಎಸ್ 150 ಹಾಗೂ 200 ಮಾದರಿಗಳಿಗೆ ಆಫರ್ ನೀಡಲಾಗುತ್ತಿದ್ದು, ವಿಶೇಷ ದರಗಳಲ್ಲಿ ಲಭ್ಯವಾಗಲಿದೆ.

ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ 15ರ ಹರೆಯ; ಭಾರಿ ಆಫರ್!

ಈ ಎಲ್ಲ ಆಫರ್ ಗಳು 2016 ಸೆಪ್ಟೆಂಬರ್ 14ರ ವರೆಗೆ ಮಾತ್ರ ಲಭ್ಯವಾಗಲಿದೆ. ಹಾಗಾಗಿ ಆಸಕ್ತ ಗ್ರಾಹಕರು ಆದಷ್ಟು ಬೇಗನೇ ತಮ್ಮ ನಿಕಟ ಅಧಿಕೃತ ಬಜಾಜ್ ಡೀಲರುಗಳನ್ನು ಸಂಪರ್ಕಿಸಬಹುದಾಗಿದೆ.

ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ 15ರ ಹರೆಯ; ಭಾರಿ ಆಫರ್!

2001ನೇ ಇಸವಿಯಲ್ಲಿ ಮೊದಲ ಬಾರಿಗೆ ಪಲ್ಸರ್ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ತದಾ ಬಳಿಕ ಮಾರುಕಟ್ಟೆಯಲ್ಲಿ ತಾಜಾತನವನ್ನು ಕಾಪಾಡಿಕೊಳ್ಳಲು ಅನೇಕ ಪಲ್ಸರ್ ಶ್ರೇಣಿಯ ಬೈಕ್ ಗಳನ್ನು ಸಂಸ್ಥೆಯು ಬಿಡುಗಡೆಗೊಳಿಸಿತ್ತು.

ಬಜಾಜ್ ಪಲ್ಸರ್ ವ್ಯಾಂಟೇಜ್ ಸ್ಪೋರ್ಟ್

ಬಜಾಜ್ ಪಲ್ಸರ್ ವ್ಯಾಂಟೇಜ್ ಸ್ಪೋರ್ಟ್

ಬಹುನಿರೀಕ್ಷಿತ ಪಲ್ಸರ್ ವ್ಯಾಂಟೇಜ್ ಸ್ಪೋರ್ಟ್ (ವಿಎಸ್400) ಬಿಡುಗಡೆಯಾಗಲು ತಯಾರಿ ನಡೆಸುತ್ತಿರುವ ಮಧ್ಯೆ ಪಲ್ಸರ್ 135 ಸಿಸಿ ಹಿಡಿದು ಆರ್ ಎಸ್ 200 ಸಿಸಿ ವರೆಗಿನ ಬೈಕ್ ಗಳಿಗೆ ವಿಶೇಷ ದರ ಆಫರ್ ಗಳನ್ನು ಘೋಷಿಸಿದೆ.

ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ 15ರ ಹರೆಯ; ಭಾರಿ ಆಫರ್!

ಇನ್ನು ಮುಂದೆ ಬಜಾಜ್ ಪಲ್ಸರ್ ಕ್ರೂಸರ್ ಸ್ಪೋರ್ಟ್ಸ್ ಬೈಕ್ ವ್ಯಾಂಟೇಜ್ ಸ್ಪೋರ್ಟ್ಸ್ ಎಂದು ಹೆಸರಿಸಿಕೊಳ್ಳಲಿದೆ. ಇದರಲ್ಲಿರುವ 373 ಸಿಸಿ ಲಿಕ್ವಿಡ್ ಕೂಲ್ಡ್ 4 ವಾಲ್ವ್ ಟ್ರಿಪಲ್ ಸ್ಪಾರ್ಕ್ ಎಂಜಿನ್ 34.5 ಅಶ್ವಶಕ್ತಿ ಉತ್ಪಾದಿಸಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ 15ರ ಹರೆಯ; ಭಾರಿ ಆಫರ್!

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಈ ಬಹುನಿರೀಕ್ಷಿತ ಬೈಕ್ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, 1.5 ಲಕ್ಷ ರುಪಾಯಿಗಳಿಂದ 1.7 ಲಕ್ಷ ರುಪಾಯಿಗಳ ವರೆಗೆ ದುಬಾರಿಯೆನಿಸುವ ಸಾಧ್ಯತೆಯಿದೆ.

English summary
Bajaj Celebrates 15 Years Of Pulsar Mania — Offers Exciting Discount Deals
Story first published: Thursday, September 8, 2016, 12:51 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark