ಆಗಸ್ಟ್‌ನಲ್ಲಿ ಪವರ್‌ಫುಲ್ ಬಜಾಜ್ ಪಲ್ಸರ್ ಸಿಎಸ್‌400 ಬಿಡುಗಡೆ; ಬೆಲೆ ಎಷ್ಟು?

Written By:

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಬಜಾಜ್ ಆಟೋ, ಮುಂಬರುವ ಆಗಸ್ಟ್ ತಿಂಗಳಲ್ಲಿ ಅತ್ಯಂತ ಶಕ್ತಿಶಾಲಿ ಪಲ್ಸರ್ ಸಿಎಸ್400 ಬೈಕನ್ನು ಬಿಡುಗಡೆ ಮಾಡಲಿದೆ.

ಬಜಾಜ್ ಆಟೋ ಸಿಇಒ ರಾಜೀವ್ ಬಜಾಜ್ ಇದನ್ನು ಖಚಿತಪಡಿಸಿಕೊಂಡಿದ್ದು, ಇದರೊಂದಿಗೆ ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ ಶ್ರೇಣಿಗೆ ಮಗದೊಂದು ಅತ್ಯಾಕರ್ಷಕ ಬೈಕ್ ಸೇರ್ಪಡೆಗೊಳ್ಳಲಿದೆ.

To Follow DriveSpark On Facebook, Click The Like Button
ಆಗಸ್ಟ್‌ನಲ್ಲಿ ಪವರ್‌ಫುಲ್ ಬಜಾಜ್ ಪಲ್ಸರ್ ಸಿಎಸ್‌400 ಬಿಡುಗಡೆ

ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಗಳ ಸಾಲಿನಲ್ಲಿ ಧೂಳೆಬ್ಬಿಸಿರುವ ಪಲ್ಸರ್ ಈಗ ನೂತನ ಕ್ರೂಸರ್ ಸ್ಪೋರ್ಟ್ 400 ಬೈಕ್ ನೊಂದಿಗೆ ಪ್ರೀಮಿಯಂ ಬೈಕ್ ಪ್ರೇಮಿಗಳ ಮನಸೊರೆಗೈಯಲಿದೆ.

ಆಗಸ್ಟ್‌ನಲ್ಲಿ ಪವರ್‌ಫುಲ್ ಬಜಾಜ್ ಪಲ್ಸರ್ ಸಿಎಸ್‌400 ಬಿಡುಗಡೆ

ಕೆಟಿಎಂ ಡ್ಯೂಕ್ 390 ಜೊತೆ ಎಂಜಿನ್ ಹಂಚಿಕೊಂಡಿರುವ ಬಜಾಜ್ ಪಲ್ಸರ್ ಸಿಎಸ್400 ಬೈಕ್ ನಲ್ಲಿ, 373.2 ಎಂಜಿನ್ ಜೋಡಣೆಯಾಗಲಿದೆ. ವಿಶೇಷವಾಗಿ ಟ್ಯೂನ್ ಗೊಳಿಸಲಾಗಿರುವ ಈ ಎಂಜಿನ್ 33ರಿಂದ 35 ಎನ್ ಎಂ ತಿರುಗುಬಲದಲ್ಲಿ 35ರಿಂದ 38 ಅಶ್ವಶಕ್ತಿ ಉತ್ಪಾದಿಸುವ ನಿರೀಕ್ಷೆಯಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಆಗಸ್ಟ್‌ನಲ್ಲಿ ಪವರ್‌ಫುಲ್ ಬಜಾಜ್ ಪಲ್ಸರ್ ಸಿಎಸ್‌400 ಬಿಡುಗಡೆ

ಇನ್ನುಳಿದಂತೆ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್, ಮೊನೊಶಾಕ್ ಸಸ್ಪೆನ್ಷನ್, ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ ಜೊತೆ ಡ್ಯುಯಲ್ ಚಾನೆಲ್ ಎಬಿಎಸ್ ಹೆಚ್ಚು ಭದ್ರತೆಯನ್ನು ಖಾತ್ರಿಪಡಿಸಲಿದೆ.

ಆಗಸ್ಟ್‌ನಲ್ಲಿ ಪವರ್‌ಫುಲ್ ಬಜಾಜ್ ಪಲ್ಸರ್ ಸಿಎಸ್‌400 ಬಿಡುಗಡೆ

ಡುಕಾಟಿ ಡೇವಿಯಲ್ ಪ್ರೇರಿತ ಎಲ್‌ ಇಡಿ ಟೈಲ್ ಲೈಟ್, ಶಕ್ತಿಶಾಲಿ ಇಂಧನ ಟ್ಯಾಂಕ್, ಎಲ್ ‌ಇಡಿ ಹೆಡ್ ಲ್ಯಾಂಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇತ್ಯಾದಿ ವೈಶಿಷ್ಟ್ಯಗಳನ್ನು ವಾಹನ ಪ್ರೇಮಿಗಳು ನಿರೀಕ್ಷೆ ಮಾಡಬಹುದಾಗಿದೆ.

ಆಗಸ್ಟ್‌ನಲ್ಲಿ ಪವರ್‌ಫುಲ್ ಬಜಾಜ್ ಪಲ್ಸರ್ ಸಿಎಸ್‌400 ಬಿಡುಗಡೆ

ಇನ್ನು ಮಹತ್ವದ ಬೆಲೆಯ ವಿಚಾರಕ್ಕೆ ಬಂದಾಗ ನೂತನ ಬಜಾಜ್ ಪಲ್ಸರ್ ಸಿಎಸ್400, 1.50 ಲಕ್ಷ ರು.ಗಳಿಂದ 1.80 ಲಕ್ಷ ರುಪಾಯಿಗಳಷ್ಟು (ಎಕ್ಸ್ ಶೋ ರೂಂ ಬೆಲೆ) ದುಬಾರಿಯೆನಿಸುವ ಸಾಧ್ಯತೆಯಿದೆ.

ಆಗಸ್ಟ್‌ನಲ್ಲಿ ಪವರ್‌ಫುಲ್ ಬಜಾಜ್ ಪಲ್ಸರ್ ಸಿಎಸ್‌400 ಬಿಡುಗಡೆ

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಕೆಟಿಎಂ ಡ್ಯೂಕ್ 200, ಡ್ಯೂಕ್ 300, ಬೆನೆಲ್ಲಿ ಟಿಎನ್ ಟಿ 250, ಮಹೀಂದ್ರ ಮೊಜೊ ಮುಂತಾದ ಮಾದರಿಗಳಿಗೆ ನೂತನ ಪೈಕಿ ಪೈಪೋಟಿಯನ್ನು ಒಡ್ಡಲಿದೆ.

ಆಗಸ್ಟ್‌ನಲ್ಲಿ ಪವರ್‌ಫುಲ್ ಬಜಾಜ್ ಪಲ್ಸರ್ ಸಿಎಸ್‌400 ಬಿಡುಗಡೆ

ಇದಕ್ಕೂ ಮೊದಲು 2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಬಜಾಜ್ ಪಲ್ಸರ್ ಸಿಎಸ್400 ದೇಶದಲ್ಲಿ ಅನಾವರಣಗೊಂಡಿತ್ತು.

English summary
Bajaj Pulsar CS400 Launch Confirmed For August
Story first published: Friday, July 29, 2016, 10:33 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark