ವಾರೆ ವ್ಹಾ, ಬಿಎಂಡಬ್ಲ್ಯು ಎಂಟ್ರಿ ಲೆವೆಲ್ ಬೈಕ್ ಭಾರತಕ್ಕೆ

By Nagaraja

ಈ ಮೊದಲೇ ತಿಳಿಸಿರುವಂತೆಯೇ ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಮೋಟಾರ್ಸ್ ಜೊತೆ ಪಾಲುದಾರಿಕೆ ಹೊಂದಿರುವ ಜರ್ಮನಿಯ ಐಕಾನಿಕ್ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ನಿಕಟ ಭವಿಷ್ಯದಲ್ಲೇ ಅತಿ ನೂತನ ಜಿ301ಆರ್ ಬೈಕ್ ದೇಶದಲ್ಲಿ ಬಿಡುಗಡೆ ಮಾಡಲಿದೆ.

Also Read: ಬಿಎಂಡಬ್ಲ್ಯು ಮತ್ತು ಐಕಾನಿಕ್ ಸಂಸ್ಥೆಯ 13 ಸತ್ಯಗಳು !

ಇದನ್ನು ಮುನ್ನುಡಿಯಾಗಿ ಬಿಎಂಡಬ್ಲ್ಯು ಮೊಟೊರಾಡ್ ಜಿ310ಆರ್ ಮುಂಬರುವ ಪ್ರತಿಷ್ಠಿತ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಳ್ಳಲಿದೆ.

ಬಿಎಂಡಬ್ಲ್ಯು ಮೊಟೊರಾಡ್ ಜಿ310ಆರ್

ಭಾರತದಲ್ಲಿ ಬಿಎಂಡಬ್ಲ್ಯು ಮೊಟೊರಾಡ್ ಜಿ310ಆರ್ ಟಿವಿಎಸ್ ಸಹಯೋಗದಲ್ಲಿ ಮಾರಾಟ ನಡೆಯಲಿದೆ. ಇದಕ್ಕೂ ಮೊದಲು 2015 ಮಿಲಾನ್ ಮೋಟಾರ್ ಶೋದಲ್ಲೂ ಜಿ310ಆರ್ ಮೋಡಿ ಮಾಡಿತ್ತು.

313 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಷನ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ನೂತನ ಜಿ301ಆರ್, ಬಿಎಂಡಬ್ಲ್ಯು ಮೊಟೊರಾಡ್ ನಿಂದ ನಿರ್ಮಾಣವಾಗುತ್ತಿರುವ ಅತಿ ಕಡಿಮೆ ಎಂಜಿನ್ ಸಾಮರ್ಥ್ಯದ ಬೈಕ್ ಆಗಿರಲಿದೆ.


ಅಶ್ವಶಕ್ತಿ: 34
ತಿರುಗುಬಲ:
28 ಎನ್‌ಎಂ

ಚಕ್ರಗಳು

  • ಮುಂಭಾಗ 110/70 R17
  • ಹಿಂಭಾಗ 150/60 R17

ಭದ್ರತೆ
ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ

ನಿರ್ಮಾಣ: ಟ್ಯೂಬ್ ಲರ್ ಸ್ಟೀಲ್ ಫ್ರೇಮ್

ಪ್ರತಿಸ್ಪರ್ಧಿಗಳು: ಕೆಟಿಎಂ, ಹೋಂಡಾ, ಯಮಹಾ

ಜರ್ಮನಿಯ ಘಟಕದಲ್ಲಿ ಅಧ್ಯಯನ ಹಾಗೂ ಅಭಿವೃದ್ಧಿಗೊಂಡಿರುವ ಹೊಸ ಜಿ310ಆರ್ ಬೈಕನ್ನು ಭಾರತದಲ್ಲಿ ಟಿವಿಎಸ್ ಮೋಟಾರ್ಸ್ ಘಟಕದಲ್ಲಿ ನಿರ್ಮಾಣವಾಗಲಿದೆ. ಅಲ್ಲದೆ ಇದು ಟಿವಿಎಸ್ ಅಥವಾ ಬಿಎಂಡಬ್ಲ್ಯು ಬ್ರಾಂಡ್ ಹೆಸರಲ್ಲಿ ಮಾರಾಟವಾಗಲಿದೆಯೇ ಎಂಬುದು ಕುತೂಹಲವೆನಿಸಿದೆ.

Most Read Articles

Kannada
English summary
BMW Motorrad G310R Bike To Be Unveiled At 2016 Auto Expo
Story first published: Thursday, January 21, 2016, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X