ಸೆ.26ರಂದು ಸ್ಟೈಲಿಷ್ ಹೀರೊ ಅಚೀವರ್ ಬೈಕ್ ಬಿಡುಗಡೆ

Written By:

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ನಿರಂತರ ಅಂತರಾಳದಲ್ಲಿ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆಗೊಳಿಸುತ್ತಲೇ ಬಂದಿದೆ. ತನ್ಮೂಲಕ ಮಾರುಕಟ್ಟೆಯಲ್ಲಿ ತಾಜಾತನವನ್ನು ಕಾಪಾಡಿಕೊಳ್ಳುವ ಮೂಲಕ ಗರಿಷ್ಠ ಮಾರಾಟವನ್ನುಗುರಿಯಿಸಿಕೊಂಡಿದೆ.

ಇದೇ ಬರುವೆ 2016 ಸೆಪ್ಟೆಂಬರ್ 26ರಂದು ಹೀರೊ ನೂತನ ಅಚೀವರ್ ಬೈಕ್ ಬಿಡುಗಡೆ ಮಾಡಲಿದೆ. ಇದು ಹೀರೊ ಸಂಸ್ಥೆಗೆ ಹಬ್ಬದ ಆವೃತ್ತಿಯಲ್ಲಿ ಮತ್ತಷ್ಟು ಮಾರಾಟ ಉತ್ತೇಜನ ನೀಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

To Follow DriveSpark On Facebook, Click The Like Button
ಹೀರೊ ಅಚೀವರ್

ನೂತನ ಹೀರೊ ಅಚೀವರ್ ಅಂದತೆಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದೆ. ಈಗಿರುವ ಹೀರೊ ಅಚೀವರ್ ದೀರ್ಘ ಕಾಲದಿಂದ ಮಾರಾಟದಲ್ಲಿದೆ. ಕೆಲವೊಂದು ಬಾರಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಮರು ಪರಿಚಯಿಸಲಾಗಿತ್ತು.

ಸದ್ಯ ಮಾರಾಟದಲ್ಲಿರುವ ಹೀರೊ ಅಚೀವರ್ ಬೈಕ್ ನಲ್ಲಿರುವ 149.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ 12.80 ಎನ್ ಎಂ ತಿರುಗುಬದಲ್ಲಿ 13.4 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ನೂತನ ಅಚೀವರ್ ಬೈಕ್ ನಲ್ಲಿ ಸ್ಪ್ಲೆಂಡರ್ ಗೆ ಸಮಾನವಾದ ಐ3ಎಸ್ ತಂತ್ರಜ್ಞಾನ ಆಳವಡಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಹೆಚ್ಚಿನ ಇಂಧನ ಕ್ಷಮತೆಯು ಲಭ್ಯವಾಗಲಿದೆ.

150 ಸಿಸಿ ಶ್ರೇಣಿ ವಿಭಾಗದಲ್ಲಿ ಮಾರಾಟದಲ್ಲಿರುವ ಯೂನಿಕಾರ್ನ್, ಪಲ್ಸರ್ ಮುಂತಾದ ಮಾದರಿಗಳಿಗೆ ಹೀರೊ ಅಚೀವರ್ ಪ್ರತಿಸ್ಪರ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಬೆಲೆಯನ್ನು ಕಾಪಾಡಿಕೊಳ್ಳಲಾಗುವುದು.

English summary
Hero MotoCorp Achiever India Launch On September 26
Story first published: Saturday, September 24, 2016, 12:12 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X