2017ರಿಂದ ಬೈಕ್ ಗಳಲ್ಲಿ 'ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್' ಕಡ್ಡಾಯ!

Written By:

ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಪ್ರಮಾಣವನ್ನು ಗಂಭೀರವಾಗಿ ಪರಿಣಮಿಸಿರುವ ಕೇಂದ್ರ ಸರಕಾರವು 2017 ಎಪ್ರಿಲ್ ತಿಂಗಳಿಂದ ಎಲ್ಲ ದ್ವಿಚಕ್ರ ವಾಹನಗಳಲ್ಲೂ 'ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್' ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ನಿರ್ಧರಿಸಿದೆ. ತನ್ಮೂಲಕ ಅಪಘಾತ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವುದು ಸರಕಾರದ ಉದ್ದೇಶವಾಗಿದೆ.

To Follow DriveSpark On Facebook, Click The Like Button
2017ರಿಂದ ಬೈಕ್ ಗಳಲ್ಲಿ 'ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್' ಕಡ್ಡಾಯ!

ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದರತ್ತ ಮಗದೊಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರಕಾರವು ಯುರೋಪ್ ಮಾದರಿಯಲ್ಲಿ ಭಾರತದಲ್ಲೂ ದ್ವಿಚಕ್ರ ವಾಹನಗಳಲ್ಲಿ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಗಳನ್ನು ಕಡ್ಡಾಯಗೊಳಿಸುತ್ತಿದೆ.

2017ರಿಂದ ಬೈಕ್ ಗಳಲ್ಲಿ 'ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್' ಕಡ್ಡಾಯ!

ಕೇಂದ್ರ ಸರಕಾರದ ಭವಿಷ್ಯದ ಯೋಜನೆಯನ್ನು ಮುಂಚಿತವಾಗಿಯೇ ಅರಿತುಕೊಂಡಿರುವ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೀರೊ ಮೊಟೊಕಾರ್ಪ್ ತನ್ನೆಲ್ಲ ಶ್ರೇಣಿಯ ವಾಹನಗಳಿಗೂ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆಯನ್ನು ಒದಗಿಸಲು ನಿರ್ಧರಿಸಿದೆ.

2017ರಿಂದ ಬೈಕ್ ಗಳಲ್ಲಿ 'ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್' ಕಡ್ಡಾಯ!

ಈ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿರುವ ಹೀರೊ ಸಂಸ್ಥೆಯು ಸ್ಪ್ಲೆಂಡರ್ ಸೇರಿದಂತೆ ಕೆಲವು ಆಯ್ದ ಮಾದರಿಗಳಲ್ಲಿ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆಯನ್ನು ನೀಡುತ್ತದೆ.

ಏನಿದು ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ತಂತ್ರಜ್ಞಾನ ?

ಏನಿದು ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ತಂತ್ರಜ್ಞಾನ ?

ನೀವು ಇಗ್ನಿಷನ್ ಗೆ ಕೀ ಹಾಕಿ ಗಾಡಿ ಸ್ಟ್ಯಾರ್ಟ್ ಮಾಡಿದಾಗ ಸ್ವಯಂಚಾಲಿತವಾಗಿ ಹೆಡ್ ಲ್ಯಾಂಪ್ ಆನ್ ಆಗಲಿದೆ. ಇದು ಹಗಲು ರಾತ್ರಿಯೆನ್ನದೇ ಸವಾರಿಯುದ್ಧಕ್ಕೂ ಆನ್ ನಲ್ಲಿರಲಿದೆ.

2017ರಿಂದ ಬೈಕ್ ಗಳಲ್ಲಿ 'ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್' ಕಡ್ಡಾಯ!

ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆಯೊಂದಿಗೆ ಹೆಚ್ಚಿನ ರಸ್ತೆ ಸುರಕ್ಷತೆಯನ್ನು ಖಾತ್ರಿಪಡಿಸಬಹುದಾಗಿದ್ದು, ಅಪಘಾತ ಪ್ರಮಾಣದಲ್ಲಿ ಇಳಿಕೆಯುಂಟಾಗಲಿದೆ.

2017ರಿಂದ ಬೈಕ್ ಗಳಲ್ಲಿ 'ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್' ಕಡ್ಡಾಯ!

ಈ ತಂತ್ರಜ್ಞಾನದ ಮೂಲಕ ಮಂದ ಬೆಳಕಿನ ಸಮಯದಲ್ಲಿ ಸವಾರ ಹೆಡ್ ಲೈಟ್ ಆನ್ ಮಾಡಲು ಮರೆತಿದ್ದಾನೆಂಬ ಭಯ ಇರದು.

2017ರಿಂದ ಬೈಕ್ ಗಳಲ್ಲಿ 'ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್' ಕಡ್ಡಾಯ!

ರಸ್ತೆ ಸುರಕ್ಷತೆಯತ್ತ ಮಗದೊಂದು ಹೆಜ್ಜೆ ಮುಂದಿಡಲಿರುವ ಕೇಂದ್ರ ಸರಕಾರವು 2018ನೇ ಸಾಲಿನಿಂದ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಮತ್ತು ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ ಸಹ ಕಡ್ಡಾಯಗೊಳಿಸಲಿದೆ.

2017ರಿಂದ ಬೈಕ್ ಗಳಲ್ಲಿ 'ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್' ಕಡ್ಡಾಯ!

ಸ್ಲೈಂಡರ್ ಐಸ್ಮಾರ್ಟ್ ಬಳಿಕ ಇತ್ತೀಚೆಗಷ್ಟೇ ಬಿಡುಗಡೆಯಾದ ಹೀರೊ ಅಚೀವರ್ 150 ಬೈಕ್ ನಲ್ಲೂ ಹೀರೊ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆಯನ್ನು ಒದಗಿಸಿತ್ತು.

English summary
Hero MotoCorp Two-Wheelers To Get ‘Automatic Headlamp On’ Soon
Story first published: Saturday, November 5, 2016, 11:01 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark