2016-17ನೇ ಸಾಲಿನಲ್ಲಿ 4 ಕೆಟಿಎಂ ಬೈಕ್ ಗಳು ಬಿಡುಗಡೆ

ಮುಂದಿನ ಒಂದು ವರ್ಷದ ಅವಧಿಯೊಳಗೆ ಕೆಟಿಎಂ ನಾಲ್ಕು ಆಕರ್ಷಕ ಬೈಕ್ ಗಳನ್ನು ಬಿಡುಗಡೆ ಮಾಡಲಿದೆ.

By Nagaraja

ಎಲ್ಲಿ ನೋಡಿದರೂ ಕೆಟಿಎಂ ಬೈಕ್ ಗಳ ಸುದ್ದಿ-ಸದ್ದು. ಬಜಾಜ್ ಆಟೋ ಜೊತೆಗಾರಿಕೆಯಲ್ಲಿ 2012ನೇ ಸಾಲಿನಲ್ಲಿ ಮೊದಲ ಬಾರಿಗೆ ಪ್ರವೇಶ ಪಡೆದಿರುವ ಕೆಟಿಎಂ ಈಗಾಗಲೇ ಯುವ ಮನಸ್ಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜನಪ್ರಿಯ ಡ್ಯೂಕ್ 200 ಹಾಗೂ 390 ಮಾದರಿಗಳನ್ನು ಪರಿಚಯಿಸಿರುವ ಕೆಟಿಎಂ ತದಾ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಈಗ ಮುಂದಿನ ಒಂದು ವರ್ಷದೊಳಗೆ ನಾಲ್ಕು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಎಂಬುದೀಗ ಸದ್ಯದ ಹಾಟ್ ಸುದ್ದಿ.

2016-2017ನೇ ಸಾಲಿನಲ್ಲಿ ಕೆಟಿಎಂ ಬಿಡುಗಡೆ ಮಾಡಲಿರುವ ಮಾದರಿಗಳು

2016-2017ನೇ ಸಾಲಿನಲ್ಲಿ ಕೆಟಿಎಂ ಬಿಡುಗಡೆ ಮಾಡಲಿರುವ ಮಾದರಿಗಳು

2017 ಡ್ಯೂಕ್ 390,

2017 ಡ್ಯೂಕ್ 200,

390 ಅಡ್ವೆಂಚರ್,

ಆರ್ ಸಿ 390

2016-17ನೇ ಸಾಲಿನಲ್ಲಿ 4 ಕೆಟಿಎಂ ಬೈಕ್ ಗಳು ಬಿಡುಗಡೆ

2017 ಡ್ಯೂಕ್ 390 ಈಗಾಗಲೇ ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದು, ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.

2016-17ನೇ ಸಾಲಿನಲ್ಲಿ 4 ಕೆಟಿಎಂ ಬೈಕ್ ಗಳು ಬಿಡುಗಡೆ

ಕೆಟಿಎಂ 1290 ಸೂಪರ್ ಡ್ಯೂಕ್ ನಿಂದ ಪ್ರೇರಣೆ ಪಡೆದಿರುವ ನೂತನ ಡ್ಯೂಕ್ 390, ವಿಭಜಿತ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ, ದೊಡ್ಡದಾದ ಇಂಧನ ಟ್ಯಾಂಕ್ ಇತ್ಯಾದಿ ವೈಶಇಷ್ಟ್ಯಗಳನ್ನು ಪಡೆದಿದೆ.

2016-17ನೇ ಸಾಲಿನಲ್ಲಿ 4 ಕೆಟಿಎಂ ಬೈಕ್ ಗಳು ಬಿಡುಗಡೆ

ಇದರಲ್ಲಿರುವ 373.2 ಸಿಸಿ ಎಂಜಿನ್ 44 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ದೊಡ್ಡದಾದ ಎಕ್ಸಾಸ್ಟ್ ಕೊಳೆವೆಯನ್ನು ನೂತನ ಡ್ಯೂಕ್ 390 ಪಡೆಯಲಿದೆ.

2016-17ನೇ ಸಾಲಿನಲ್ಲಿ 4 ಕೆಟಿಎಂ ಬೈಕ್ ಗಳು ಬಿಡುಗಡೆ

ರೈಡ್-ಬೈ-ವೈರ್ ಥ್ರಾಟಲ್, ಸಂಪೂರ್ಣ ಟಿಎಫ್ ಟಿ ಇನ್ಸ್ಟ್ರುಮೆಂಟ್ ಕಸ್ಟರ್, ಐಚ್ಛಿಕ ಮೈ ರೈಡ್ ಮಲ್ಟಿಮೀಡಿಯಾ ಇಂಟರ್ ಫೇಸ್ ಮುಂತಾದ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ. 2017 ಜನವರಿ ತಿಂಗಳಲ್ಲಿ ಬಿಡುಗಡೆಯಾಗಿರುವ ಕೆಟಿಎಂ ಡ್ಯೂಕ್ 390 ವಿತರಣೆ ಪ್ರಕ್ರಿಯೆ ಎಪ್ರಿಲ್ ತಿಂಗಳಲ್ಲಿ ನಡೆಯಲಿದೆ.

2016-17ನೇ ಸಾಲಿನಲ್ಲಿ 4 ಕೆಟಿಎಂ ಬೈಕ್ ಗಳು ಬಿಡುಗಡೆ

ಮುಂದಿನ ವರ್ಷದಲ್ಲೇ 2017 ಡ್ಯೂಕ್ 200 ಸಹ ಬಿಡುಗಡೆಯಾಗಲಿದೆ. ಇದು ವಿಭಜಿತ ಹೆಡ್ ಲ್ಯಾಂಪ್ ಹೊರತಾಗಿ ತನ್ನ ಹಿರಿಯ ಸೋದರ ಡ್ಯೂಕ್ 390 ಮಾದರಿಗೆ ಸಮಾನವಾದ ವಿನ್ಯಾಸವನ್ನು ಗಿಟ್ಟಿಸಿಕೊಳ್ಳಲಿದೆ.

2016-17ನೇ ಸಾಲಿನಲ್ಲಿ 4 ಕೆಟಿಎಂ ಬೈಕ್ ಗಳು ಬಿಡುಗಡೆ

ಹೆಡ್ ಲ್ಯಾಂಪ್ ನವೀಕೃತಗೊಳಿಸಲಾಗಿದ್ದು, ಹೆಚ್ಚು ಪ್ರಕಾಶಮಾನವಾಗಿರಲಿದೆ. ಇನ್ನು ಡ್ಯೂಕ್ 390 ಮಾದರಿಗೆ ಸಮಾನವಾಗಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಥ್ರಾಟಲ್ ವ್ಯವಸ್ಥೆಯನ್ನು ಪಡೆಯಲಿದೆ.

2016-17ನೇ ಸಾಲಿನಲ್ಲಿ 4 ಕೆಟಿಎಂ ಬೈಕ್ ಗಳು ಬಿಡುಗಡೆ

ಇದರಲ್ಲಿರುವ 200 ಸಿಸಿ ಎಂಜಿನ್ 26 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ತನ್ಮೂಲಕ ಎಂಜಿನ್ ನಿರ್ವಹಣೆಯಲ್ಲೂ ಸುಧಾರಣೆ ಕಂಡುಬಂದಿದೆ.

2016-17ನೇ ಸಾಲಿನಲ್ಲಿ 4 ಕೆಟಿಎಂ ಬೈಕ್ ಗಳು ಬಿಡುಗಡೆ

ಕೆಟಿಎಂ ಸಾಲಿಗೆ ಸೇರಿಕೊಂಡಿರುವ ಮಗದೊಂಡು 390 ಅಡ್ವೆಂಚರ್ ಬೈಕ್ 2016-17ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವುದು ಗಮನಾರ್ಹ. ಇದು ದೇಶದ ಎಂಟ್ರಿ ಲೆವೆಲ್ ಅಡ್ವೆಂಚರ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ.

2016-17ನೇ ಸಾಲಿನಲ್ಲಿ 4 ಕೆಟಿಎಂ ಬೈಕ್ ಗಳು ಬಿಡುಗಡೆ

ಡ್ಯೂಕ್ 390 ತಳಹದಿಯಲ್ಲಿ ನಿರ್ಮಾಣವಾಗಿರುವ ಅಡ್ವೆಂಚರ್ ಬೈಕ್ ಸಹ ಎಂಜಿನ್ ಮಾನದಂಡಗಳನ್ನು ಹಂಚಿಕೊಂಡಿದೆ. ಕೆಟಿಎಂನ ಟ್ರಾವೆಲ್ ಎಂಡ್ಯುರೊ ಫ್ಯಾಮಿಲಿಯಲ್ಲಿ ಗುರುತಿಸಿಕೊಂಡಿರುವ ಈ ಬೈಕ್ ಪ್ರಮುಖವಾಗಿಯೂ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ಗೆ ಸವಾಲನ್ನು ಒಡ್ಡಲಿದೆ.

2016-17ನೇ ಸಾಲಿನಲ್ಲಿ 4 ಕೆಟಿಎಂ ಬೈಕ್ ಗಳು ಬಿಡುಗಡೆ

ಅಂತಿಮವಾಗಿ ಮುಂದಿನ ತಲೆಮಾರಿನ ಆರ್ ಸಿ 390 ಬೈಕನ್ನು 2017 ಮಿಲಾನ್ ಮೋಟಾರ್ ಶೋದಲ್ಲಿ ಪ್ರದರ್ಶಿಸುವ ನಿರೀಕ್ಷೆಯಿದೆ. ತದಾ ಬೆನ್ನಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ. ಇದು ಹೊಸ ಡ್ಯೂಕ್ ಗೆ ಸಮಾನವಾದ ಎಂಜಿನ್ ತಂತ್ರಗಾರಿಕೆಗಳನ್ನು ಒಳಗೊಂಡಿರಲಿದೆ.

Most Read Articles

Kannada
Read more on ಕೆಟಿಎಂ ktm
English summary
KTM To Launch Four Motorcycles In 2016-17 In India
Story first published: Tuesday, November 22, 2016, 15:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X