ಅತಿ ಶೀಘ್ರದಲ್ಲೇ ಮಹೀಂದ್ರ ಸ್ಕೂಟರ್ ಭಾರತದಲ್ಲಿ ಬಿಡುಗಡೆ

Written By:

ದ್ವಿಚಕ್ರ ವಾಹನ ವಿಭಾಗದಲ್ಲೂ ಗಮನಾರ್ಹ ಸಾಧನೆ ತೋರಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಅತಿ ಶೀಘ್ರದಲ್ಲೇ ಮಗದೊಂದು ಆಕರ್ಷಕ ಸ್ಕೂಟರ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಹಾಗಿದ್ದರೂ ನೂತನ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರ ಬಂದಿಲ್ಲ. ಇದರ ಎಂಜಿನ್ ಸಾಮರ್ಥ್ಯ, ನಿರ್ವಹಣೆ, ಶೈಲಿ, ಮೈಲೇಜ್ ಇತ್ಯಾದಿ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ.

ಮಹೀಂದ್ರ ಸ್ಕೂಟರ್

'ಜಿ108' ಎಂಬ ಕೋಡ್ ಪಡೆದುಕೊಂಡಿರುವ ಮಹೀಂದ್ರದ ನೂತನ ಸ್ಕೂಟರ್ ಗೈಗೆಟುಕುವ ದರಗಳಲ್ಲಿ ಮಾರುಕಟ್ಟೆಯನ್ನು ತಲುಪಲಿದೆ. ಅಲ್ಲದೆ ನಿರಂತರ ಅಧ್ಯಯನ ಹಾಗೂ ಸಂಶೋಧನೆಯ ಬಳಿಕ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಇದುವರೆಗೆ ಸ್ಕೂಟರ್ ಗೆ ಸಂಬಂಧಪಟ್ಟಂತೆ ಯಾವುದೇ ರಹಸ್ಯ ಚಿತ್ರಗಳು ಅಥವಾ ಮಾಹಿತಿಗಳು ಹೊರಬಂದಿಲ್ಲ. ಈ ಮೂಲಕ ಕುತೂಹಲತೆಯನ್ನು ಕಾಪಾಡಿಕೊಳ್ಳುವಲ್ಲಿ ಸಂಸ್ಥೆಯು ಯಶ ಕಂಡಿದೆ.

ಪ್ರಸ್ತುತ ದೇಶದಲ್ಲಿ ಮಹೀಂದ್ರ ಡ್ಯುರೊ ಡಿಝಡ್, ರೊಡಿಯೊ ಯುಝಡ್‌ಒ 135 ಹಾಗೂ ಗಸ್ಟೊ ಮಾದರಿಗಳು ಮಾರಾಟದಲ್ಲಿದೆ. ಈ ಪೈಕಿ ಡ್ಯುರೊ ಡಿಝಡ್ ಮತ್ತು ರೊಡಿಯೊ ಯುಝಡ್‌ಒ125 ಮಾದರಿಗಳು 125 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಟ್ಟರೆ ಗಸ್ಟೊ 109.6 ಸಿಸಿ ಎಂಜಿನ್‌ನಿಂದ ಓಡುತ್ತದೆ.

English summary
Mahindra’s All-New Scooter Launching Soon In India
Story first published: Monday, January 4, 2016, 9:29 [IST]
Please Wait while comments are loading...

Latest Photos