ಶಕ್ತಿಶಾಲಿ ಬೈಕ್ ಅಭಿವೃದ್ಧಿಪಡಿಸುತ್ತಿರುವ ಬೆನೆಲ್ಲಿ

Written By:

ಸರಿ ಸುಮಾರು ಒಂದು ಶತಮಾನದ ಹಿಂದೆ ಅಂದರೆ 1911ನೇ ಇಸವಿಯಲ್ಲಿ ಸ್ಥಾಪನೆಗೊಂಡಿರುವ ಇಟಲಿಯ ಅತಿ ಪುರಾತನ ದ್ವಿಚಕ್ರ ವಾಹನ ಸಂಸ್ಥೆಗಳಲ್ಲಿ ಒಂದಾಗಿರುವ ಬೆನೆಲ್ಲಿಗೆ ಚೀನಾದ ಕಿಯಾನ್ ಜಿಯಾಂಗ್ ಸಂಸ್ಥೆಯ ಅಭಯ ಹಸ್ತ ದೊರಕುವುದರೊಂದಿಗೆ ಹೊಸ ಚೈತನ್ಯವನ್ನು ಪಡೆದುಕೊಂಡಿದೆ.

ಶಕ್ತಿಶಾಲಿ ಬೈಕ್ ಅಭಿವೃದ್ಧಿಪಡಿಸುತ್ತಿರುವ ಬೆನೆಲ್ಲಿ

ಮರು ಜೀವ ಪಡೆದಿರುವ ಬೆನೆಲ್ಲಿ ಇತ್ತೀಚೆಗಷ್ಟೇ ಟಿಆರ್ ಕೆ 502 ಮತ್ತು ಲಿಯೊಸಿನೊ ಸ್ಕ್ರಾಂಬ್ಲರ್ ಬೈಕ್ ಗಳನ್ನು ಬಿಡುಗಡೆಗೊಳಿಸಿತ್ತು.

ಶಕ್ತಿಶಾಲಿ ಬೈಕ್ ಅಭಿವೃದ್ಧಿಪಡಿಸುತ್ತಿರುವ ಬೆನೆಲ್ಲಿ

ಇಲ್ಲಿಗೆ ತನ್ನ ಓಟವನ್ನು ನಿಲ್ಲಿಸಲು ಬಯಸದ ಬೆನೆಲ್ಲಿ ಮತ್ತಷ್ಟು ಶಕ್ತಿಶಾಲಿ ಬೈಕ್ ಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಶಕ್ತಿಶಾಲಿ ಬೈಕ್ ಅಭಿವೃದ್ಧಿಪಡಿಸುತ್ತಿರುವ ಬೆನೆಲ್ಲಿ

ಬಲ್ಲ ಮೂಗಳ ಪ್ರಕಾರ ಮೂರು ನೂತನ ಪವರ್ ಫುಲ್ ಬೈಕ್ ಗಳ ಅಭಿವೃದ್ಧಿಯಲ್ಲಿ ಬೆನೆಲ್ಲಿ ತೊಡಗಿಸಿಕೊಂಡಿದೆ. ಇವುಗಳಲ್ಲಿ 750 ಸಿಸಿ, 900 ಸಿಸಿ ಮತ್ತು 1200 ಸಿಸಿ ಬೈಕ್ ಗಳು ಸೇರಿವೆ.

ಶಕ್ತಿಶಾಲಿ ಬೈಕ್ ಅಭಿವೃದ್ಧಿಪಡಿಸುತ್ತಿರುವ ಬೆನೆಲ್ಲಿ

ಈ ಪೈಕಿ ಮೊದಲನೆಯದ್ದು ಟೂರಿಂಗ್ ಪೊಲೀಸ್ ಕ್ರೂಸರ್ ಶೈಲಿಯ ಬೈಕಾಗಿದ್ದು, 1200 ಸಿಸಿ ಇನ್ ಲೈನ್ ತ್ರಿ ಸಿಲಿಂಡರ್ ಎಂಜಿನ್ ಗಿಟ್ಟಿಸಿಕೊಂಡಿದೆ.

ಶಕ್ತಿಶಾಲಿ ಬೈಕ್ ಅಭಿವೃದ್ಧಿಪಡಿಸುತ್ತಿರುವ ಬೆನೆಲ್ಲಿ

ಮಗದೊಂದು 900 ಸಿಸಿ ಬೈಕ್ ಬೆನೆಲ್ಲಿ ವಿನ್ಯಾಸ ಉತ್ಕೃಷ್ಟತೆಗೆ ಸಾಕ್ಷ್ಯ ವಹಿಸಲಿದೆ. ಇದು ಟಿಎನ್ ಟಿ 899 ಮಾದರಿಗೆ ಸಮಾನವಾದ 898 ಸಿಸಿ ಎಂಜಿನ್ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.

ಶಕ್ತಿಶಾಲಿ ಬೈಕ್ ಅಭಿವೃದ್ಧಿಪಡಿಸುತ್ತಿರುವ ಬೆನೆಲ್ಲಿ

ಅಪ್ ಸೈಡ್ ಡೌನ್ ಫಾರ್ಕ್, ನೆಕ್ಡ್ ವಿನ್ಯಾಸ, ಎಕ್ಸಾಸ್ಟ್ ಕೊಳವೆ ಮತ್ತು ತಾಜಾ ಎಮಿಷನ್ ಮಟ್ಟವನ್ನು ಇದು ಕಾಯ್ದುಕೊಂಡಿರಲಿದೆ.

ಶಕ್ತಿಶಾಲಿ ಬೈಕ್ ಅಭಿವೃದ್ಧಿಪಡಿಸುತ್ತಿರುವ ಬೆನೆಲ್ಲಿ

ಮೂರನೇ 750 ಸಿಸಿ ಮಾದರಿಯು ಡುಕಾಟಿ ಮಾದರಿಗೆ ಹೋಲುವಂತಿದೆ. ಇದು ಟಿಆರ್ ಕೆ 502 ಮಾದರಿಗೆ ಸಮಾನವಾದ ಎಂಜಿನ್ ಪಡೆಯುವ ಸಾಧ್ಯತೆಯಿದೆ.

ಶಕ್ತಿಶಾಲಿ ಬೈಕ್ ಅಭಿವೃದ್ಧಿಪಡಿಸುತ್ತಿರುವ ಬೆನೆಲ್ಲಿ

ಇಲ್ಲಿ ಆಸಕ್ತಿದಾಯಕ ಸಂಗತಿಯೆಂದರೆ ಡಿಎಸ್ ಕೆ ಸಹಯೋಗದಲ್ಲಿ ಬೆನೆಲ್ಲಿ ಭಾರತದಲ್ಲೂ ತನ್ನ ಶ್ರೇಣಿಯ ಬೈಕ್ ಗಳನ್ನು ಮಾರಾಟ ಮಾಡುತ್ತಿದೆ. ಈಗ ನೂತನ ಬೈಕ್ ಗಳು ಭವಿಷ್ಯದಲ್ಲಿ ಒಂದೊಂದಾಗಿ ದೇಶವನ್ನು ತಲುಪುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

English summary
Is Benelli Secretly Working On Big Displacement Motorcycles?
Story first published: Thursday, December 15, 2016, 11:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark