ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ 2018ರ ಬಜಾಜ್ ಡೋಮಿನಾರ್ 400

Written By:

ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಬಜಾಜ್ ಡೋಮಿನಾರ್ 400 ಬೈಕ್ ಇದೀಗ 2018ರ ಹೊಸ ಆವೃತ್ತಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಮತ್ತೊಂದು ಪ್ರಮಖ ಬಣ್ಣದೊಂದಿಗೆ ಖರೀದಿಗೆ ಲಭ್ಯವಾಗುವ ಮಾಹಿತಿ ದೊರೆತಿದೆ.

ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ 2018ರ ಬಜಾಜ್ ಡೋಮಿನಾರ್ 400

ಈ ಹಿಂದೆ ಡೋಮಿನಾರ್ 400 ಬೈಕ್ ಆವೃತ್ತಿಯು ಬಿಡುಗೊಂಡ ಸಂದರ್ಭದಲ್ಲಿ ಕೇವಲ ಎರಡು ಬಣ್ಣಗಳಲ್ಲಿ ಮಾತ್ರ ಆಯ್ಕೆಗೆ ಅವಕಾಶವಿತ್ತು. ಆದ್ರೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬಜಾಜ್ ಸಂಸ್ಥೆಯು ವಿವಿಧ ಬಣ್ಣಗಳಲ್ಲಿ ಖರೀದಿ ಮಾಡಬಹುದಾದ ಆಯ್ಕೆ ನೀಡುತ್ತಿದೆ.

ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ 2018ರ ಬಜಾಜ್ ಡೋಮಿನಾರ್ 400

373 ಸಿಸಿ ಸಿಂಗಲ್ ಸಿಲಿಂಡರ್ ಸೌಲಭ್ಯ ಹೊಂದಿರುವ ಬಜಾಜ್ ಡೋಮಿನಾರ್ 400 ಬೈಕ್ ಸದ್ಯ ವೈಟ್ ಮತ್ತು ಮ್ಯಾಟೆ ಬ್ಲ್ಯಾಕ್ ಶೆಡ್‌ನೊಂದಿಗೆ ಖರೀದಿ ಮಾಡಬಹುದಾಗಿದ್ದು, ಬಿಡುಗಡೆಯಾಗಲಿರುವ 2018ರ ಆವೃತ್ತಿಯು ರೆಡ್ ಬಣ್ಣದೊಂದಿಗೆ ಲಭ್ಯವಾಗಲಿದೆ.

Recommended Video - Watch Now!
Full Moon Causes Motorcycle Accidents, States New Study
ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ 2018ರ ಬಜಾಜ್ ಡೋಮಿನಾರ್ 400

ಈಗಾಗಲೇ ಬಜಾಜ್ ಶೋರಂಗಳಲ್ಲಿ ಮ್ಯಾಟೆ ಬ್ಲ್ಯಾಕ್ ಶೆಡ್ ಹೊಂದಿರುವ ಡೋಮಿನಾರ್ 400 ಆಯ್ಕೆಗೆ ಲಭ್ಯವಿದ್ದು, ಸದ್ಯದಲ್ಲೇ 2018ರ ಆವೃತ್ತಿಯ ಡೋಮಿನಾರ್ 400 ಮಾರಾಟಕ್ಕೆ ಲಭ್ಯವಾಗಲಿದೆ.

ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ 2018ರ ಬಜಾಜ್ ಡೋಮಿನಾರ್ 400

ಕೆಲವು ವರದಿಗಳ ಪ್ರಕಾರ ಮುಂದಿನ 15 ದಿನಗಳಲ್ಲಿ 2018ರ ಡೋಮಿನಾರ್ 400 ಬೈಕ್ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಾಗಲಿದ್ದು, ಹೊಸ ಬಣ್ಣದ ಬೈಕ್ ಬಜಾಜ್ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ತಪ್ಪದೇ ಓದಿ-ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಬಿಡುಗಡೆ

ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ 2018ರ ಬಜಾಜ್ ಡೋಮಿನಾರ್ 400

ಇನ್ನು ಬಿಡುಗಡೆಗೆ ಸಿದ್ಧವಾಗಿರುವ ಹೊಸ ಬೈಕ್ ಮುಂಬೈ ಡಿಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೈಕ್ ವಿನ್ಯಾಸದಲ್ಲಿ ಅಲ್ಪ ಮಟ್ಟಿಗೆ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ.

ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ 2018ರ ಬಜಾಜ್ ಡೋಮಿನಾರ್ 400

ಒಟ್ಟಿನಲ್ಲಿ ಬಿಡುಗಡೆಯಾಗಲಿರುವ 2018ರ ಡೋಮಿನಾರ್ 400 ಸೂಪರ್ ಬೈಕ್ ಪ್ರಿಯರನ್ನು ಸೆಳೆಯಬಲ್ಲ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎನ್ನಲಾಗಿದ್ದು, ಈಗಲಾದರೂ ನಿಗದಿತ ಮಾರಾಟ ಗುರಿ ಹೊಂದುತ್ತಾ ಎಂದು ಕಾಯ್ದು ನೋಡಬೇಕಿದೆ.

ತಪ್ಪದೇ ಓದಿ-ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ನೆಕ್ಸ್ಟ್ ಬೈಕ್ ಯಾವುದು ಗೊತ್ತಾ?

Trending DriveSpark YouTube Videos

Subscribe To DriveSpark Kannada YouTube Channel - Click Here

Read more on bajaj ಬಜಾಜ್
English summary
Read in Kannada about 2018 Bajaj Dominar 400 Spotted with Gets New Colour Option.
Story first published: Wednesday, December 27, 2017, 10:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark