2018ರ ಕವಾಸಕಿ ವರ್ಸ್ಸಿ 650 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ. ರೂ 6.50 ಲಕ್ಷ

Written By:

2018ರ ವರ್ಸ್ಸಿ 650 ದ್ವಿಚಕ್ರ ವಾಹನವನ್ನು ಭಾರತದ ಸ್ಪೋರ್ಟ್ಸ್ ವಾಹನ ತಯಾರಕ ಸಂಸ್ಥೆಯಾದ ಕವಾಸಕಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ವಾಹನವು ರೂ 6.50 ಲಕ್ಷ ಎಕ್ಸ್ ಶೋರೂಂ(ಭಾರತ) ಬೆಲೆ ಪಡೆದುಕೊಂಡಿದೆ.

2018ರ ಕವಾಸಕಿ ವರ್ಸ್ಸಿ 650 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ. ರೂ 6.50 ಲಕ್ಷ

2018ರ ಹೊಸ ಕವಾಸಕಿ ವರ್ಸ್ಸಿ 650 ವಾಹನವು ದೇಶದಾದ್ಯಂತ ಇರುವಂತಹ ಶೋರೂಂಗಳಲ್ಲಿ ಬುಕಿಂಗ್ ಮಾಡಲು ಲಭ್ಯವಿದ್ದು, ಮುಂಬರುವ ಕೆಲವು ವಾರಗಳಲ್ಲಿ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆ ಇದೆ. 2017ರ ಮಾದರಿಗೆ ಹೋಲಿಕೆ ಮಾಡಿದರೆ ಗ್ರಾಫಿಕ್ಸ್ ಹೊರತುಪಡಿಸಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಈ ವಾಹನ ಪಡೆದುಕೊಂಡಿಲ್ಲ.

2018ರ ಕವಾಸಕಿ ವರ್ಸ್ಸಿ 650 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ. ರೂ 6.50 ಲಕ್ಷ

ವರ್ಸ್ಸಿ 650 ಸಾಹಸ ಟೂರರ್ ಮೋಟಾರ್ ಸೈಕಲ್ ವಾಹನವು ಎಂದಿನಂತೆ ಹಸಿರು ಮತ್ತು ಕಪ್ಪು ಬಣ್ಣದ ಯೋಜನೆಯನ್ನು ಉಳಿಸಿಕೊಂಡಿದ್ದು, ಹೊಂದಿಕೊಳ್ಳುವ ವಿಂಡ್‌ಸ್ಕ್ರೀನ್ ಮತ್ತು ಇನ್ಸ್ಟ್ರು‌ಮೆಂಟ್ ಕನ್ಸೋಲ್ ಒಳಗೊಂಡಿದೆ.

2018ರ ಕವಾಸಕಿ ವರ್ಸ್ಸಿ 650 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ. ರೂ 6.50 ಲಕ್ಷ

2018 ಕವಾಸಕಿ ವರ್ಸ್ಸಿ 650 ಬೈಕ್ ಯಾಂತ್ರಿಕವಾಗಿ ಬದಲಾಗದೆ ಉಳಿದಿದೆ ಮತ್ತು 649 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಈ ಎಂಜಿನ್ 68 ಬಿಎಚ್‌ಪಿ ಮತ್ತು 64 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ 6-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

2018ರ ಕವಾಸಕಿ ವರ್ಸ್ಸಿ 650 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ. ರೂ 6.50 ಲಕ್ಷ

ಬ್ರೇಕ್ ಕರ್ತವ್ಯಗಳ ಬಗ್ಗೆ ಹೇಳುದುದಾದರೆ, ಮುಂಭಾಗದಲ್ಲಿ ಎರಡು 300 ಎಂ.ಎಂ ಪೇಟಲ್ ಡಿಸ್ಕ್‌ಗಳು ಮತ್ತು ಹಿಂಭಾಗದಲ್ಲಿ ಸಿಂಗಲ್ 250 ಎಂ.ಎಂ ಘಟಕವು ಎಬಿಎಸ್ ಮೂಲಕ ಸಹಾಯ ಪಡೆಯುತ್ತದೆ ಹಾಗು 17 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಅಳವಡಿಸಲಾಗಿದೆ.

2018ರ ಕವಾಸಕಿ ವರ್ಸ್ಸಿ 650 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ. ರೂ 6.50 ಲಕ್ಷ

ಕವಾಸಕಿ ವರ್ಸ್ಸಿ 650 ಬೈಕಿನ 2018ರ ಮತ್ತು 2017ರ ಮಾದರಿಗಳ ನಡುವಿನ ವ್ಯತ್ಯಾಸವೆಂದರೆ ಹೊಸ ಗ್ರಾಫಿಕ್ಸ್ ಅಷ್ಟೇ ಎನ್ನಬಹುದು. ಮಧ್ಯಮ ಗಾತ್ರದ ಸಾಹಸ ಟೂರೆರ್ ವಾಹನದ ಹೊಸ ಆವೃತ್ತಿಯು ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದ್ದು, ಹೆಚ್ಚಿನ ಮಾಹಿತಿ ಹೊರ ಬಂದಿಲ್ಲ.

English summary
2018 Kawasaki Versys 650 launched in India. The Kawasaki Versys 650 is priced at Rs 6.50 lakh ex-showroom (India).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark