ಪಲ್ಸರ್ ಸರಣಿಯ ಬೆಲೆಗಳನ್ನು ಪರಿಷ್ಕರಿಸಿದ ಬಜಾಜ್

Written By:

ಬಜಾಜ್ ಆಟೊ ತನ್ನ ಜನಪ್ರಿಯ ಪಲ್ಸರ್ ಸರಣಿಯ ಬೆಲೆಗಳನ್ನು ಪರಿಷ್ಕರಿಸಿದೆ ಮತ್ತು ಗ್ರಾಹಕರಿಗೆ ಜಿಎಸ್‌ಟಿ ಪ್ರಯೋಜನಗಳನ್ನು ಜಾರಿಗೆ ತಂದಿದೆ.

ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಪರಿಚಯದಿಂದಾಗಿ ಕಾರುಗಳು ಮತ್ತು ದ್ವಿಚಕ್ರಗಳ ಬೆಲೆಗಳನ್ನು ಉತ್ಪಾದಕ ಸಂಸ್ಥೆಗಳು ಪರಿಷ್ಕರಣೆ ಮಾಡಿದ್ದು, ಬಜಾಜ್ ಆಟೊ ಸಂಸ್ಥೆ ಸಹ ತನ್ನ ವಾಹನಗಳ ಬೆಲೆ ಪರಿಷ್ಕರಿಸಿದೆ.

ಬಜಾಜ್ ಪಲ್ಸರ್ ಬೈಕಿನ ಪರಿಷ್ಕೃತ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಇರಲಿದ್ದು, ಸರ್ಕಾರದ ತೆರಿಗೆ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುತ್ತದೆ.

ಪಲ್ಸರ್ ಶ್ರೇಣಿಯ ಆಧುನಿಕ ಮಾದರಿಯ ಬೈಕ್ ಎಂಬ ಖ್ಯಾತಿ ಪಡೆದಿರುವ ಎನ್ಎಸ್200 ಬೈಕ್ ಗರಿಷ್ಠ ಬೆಲೆ ರೂ. 1,100 ಕಡಿತಗೊಂಡಿದೆ.

ಪಲ್ಸರ್ ಶ್ರೇಣಿಯ ಹೊರತಾಗಿ, ಕಂಪೆನಿಯು ತನ್ನ ಫ್ಲಾಗ್‌ಶಿಪ್ಪಿನ ಡಾಮಿನಾರ್ 400 ಬೈಕಿನ ಬೆಲೆ ಹೆಚ್ಚಿಸಿದೆ. ಇದು 350ಸಿಸಿ ಗಿಂತ ಹೆಚ್ಚಿನ ಮೋಟರ್ ಸೈಕಲ್ ವ್ಯಾಪ್ತಿಗೆ ಬರಲಿರುವ ಕಾರಣ ಬೆಲೆ ಹೆಚ್ಚಳಗೊಳಿಸಲಾಗಿದೆ.

ಮಾದರಿ                  ಹಿಂದಿನ ಬೆಲೆ     ಈಗಿನ ಬೆಲೆ        ಬೆಲೆ ಕಡಿತ

ಪಲ್ಸರ್ 135 LS        Rs 61,177   Rs 60,705      Rs 472
ಪಲ್ಸರ್ 150             Rs 75,604   Rs 74,975      Rs 629
ಪಲ್ಸರ್ 180             Rs 80,546   Rs 79,893      Rs 653
ಪಲ್ಸರ್ 220F           Rs 92,200    Rs 91,555     Rs 645
ಪಲ್ಸರ್ 200NS         Rs 97,452     Rs 96,747    Rs 705
RS200 (N-ABS)    Rs 122,881  Rs 121,891    Rs990

RS200 (ABS)       Rs 134,882    Rs 133,744   Rs 1,138

English summary
Bajaj Auto has revised prices of its popular Pulsar series and has passed on the GST benefits to customers.
Story first published: Wednesday, July 5, 2017, 19:02 [IST]
Please Wait while comments are loading...

Latest Photos