ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಆವೃತಿ ಭಾರತದಲ್ಲಿ ಬಿಡುಗಡೆ

ಬಜಾಜ್ ಆಟೋ ಸಂಸ್ಥೆಯು ಭಾರತದಲ್ಲಿ ತನ್ನ ಪಲ್ಸರ್ ಎನ್‌ಎಸ್200 ಸ್ಟ್ರೀಟ್ ಫೈಟರ್ ಎಬಿಎಸ್ ರೂಪಾಂತರವನ್ನು ಪರಿಚಯಿಸಿದೆ. ಬಜಾಜ್ ಪಲ್ಸರ್ ಎನ್ಎಸ್ 200 ಎಬಿಎಸ್ ಬೈಕ್ ರೂ. 1.09 ಲಕ್ಷ ಎಕ್ಸ್ ಶೋರೂಂ(ದೆಹಲಿ) ದರದಲ್ಲಿ ಲಭ್ಯವಿದೆ.

By Girish

ಪಲ್ಸರ್ ಎನ್ಎಸ್ 200 ಎಬಿಎಸ್ ಮುಂಭಾಗದ ಚಕ್ರದಲ್ಲಿ ಸಿಂಗಲ್ ಚಾನಲ್ ಎಬಿಎಸ್(ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.ಈ ಮೋಟಾರ್ ಸೈಕಲ್ 300ಎಂಎಂ ದೊಡ್ಡದಾದ ಮುಂಭಾಗದ ಡಿಸ್ಕ್ ಪಡೆಯುತ್ತದೆ, ಇದರಿಂದಾಗಿ ಬ್ರೇಕ್ ಸೌಕರ್ಯ ಸುಧಾರಿಸುತ್ತದೆ ಎಂದು ಕಂಪನಿ ಹೇಳಿಕೆ ನೀಡಿದೆ.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಆವೃತಿ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿರುವ ಎಲ್ಲಾ ಮೆಟ್ರೊ ನಗರಗಳಲ್ಲಿ ಈ ಎಬಿಎಸ್ ಆವೃತಿಯ ಪಲ್ಸರ್ ಎನ್ಎಸ್200 ಬೈಕನ್ನು ಪರಿಚಯಿಸಿದೆ ಮತ್ತು ಮುಂಬರುವ ದಿನಗಳಲ್ಲಿ ದೇಶದಾದ್ಯಂತ ಹಂತ ಹಂತವಾಗಿ ಲಭ್ಯವಾಗುತ್ತದೆ.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಆವೃತಿ ಭಾರತದಲ್ಲಿ ಬಿಡುಗಡೆ

ಮುಂಭಾಗದ ವಿನ್ಯಾಸವು ಪಲ್ಸರ್ ಎನ್ಎಸ್ 200 ಎಬಿಎಸ್ ಯಾವುದೇ ಬದಲಾವಣೆಯನ್ನು ಕಾಣುವುದಿಲ್ಲ ಎನ್ನಬಹುದು. ಈ ಬೈಕ್ ಚೂಪಾದ ಹೆಡ್‌ಲ್ಯಾಂಪ್ ವಿನ್ಯಾಸ, ಇಂಜಿನ್ ಕೋಲ್, ಸ್ಟೆಪ್-ಅಪ್ ಸೀಟ್‌ಗಳು ಮತ್ತು ಸಿಗ್ನೇಚರ್ ಪಲ್ಸರ್ ಎಲ್ಇಡಿ ಟೈಲ್ ದೀಪದೊಂದಿಗೆ ಸ್ನಾಯುವಿನ ವಿನ್ಯಾಸ ಪಡೆದ ಇಂಧನ ಟ್ಯಾಂಕ್ ಆಕ್ರಮಣಕಾರಿ ಶೈಲಿಯನ್ನು ಹೊಂದಿದೆ.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಆವೃತಿ ಭಾರತದಲ್ಲಿ ಬಿಡುಗಡೆ

ಸಿಂಗಲ್ ಚಾನೆಲ್ ಎಬಿಎಸ್ ಪ್ಯಾನಿಕ್ ಬ್ರೇಕ್ ಹಾಕುವ ಸಮಯದಲ್ಲಿ ಮುಂಭಾಗದ ಚಕ್ರ ಲಾಕ್ ಆಗುವುದನ್ನು ಮತ್ತು ಮೇಲೆ ಬೀಳುವುದನ್ನು ತಪ್ಪಿಸುತ್ತದೆ. ಹೀಗೆ ಸವಾರರಿಗೆ ಸುರಕ್ಷತಾ ಲಾಭವನ್ನು ಒದಗಿಸುತ್ತದೆ ಎನ್ನಬಹುದು. ಎಬಿಎಸ್ ಹೊರತುಪಡಿಸಿ, ಈ ಮೋಟಾರ್ ಸೈಕಲ್ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿಲ್ಲ ಎನ್ನಬಹುದು.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಆವೃತಿ ಭಾರತದಲ್ಲಿ ಬಿಡುಗಡೆ

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ 199.5 ಸಿಸಿ ಲಿಕ್ವಿಡ್ ಕೋಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆ ಹೊಂದಿದೆ 23.17 ಬಿಎಚ್‌ಪಿ ಮತ್ತು 18.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6-ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಆವೃತಿ ಭಾರತದಲ್ಲಿ ಬಿಡುಗಡೆ

ಬಜಾಜ್ ಪಲ್ಸರ್ ಎನ್ಎಸ್ 200 ಎಬಿಎಸ್ ಬೈಕ್ ವೈಲ್ಡ್ ರೆಡ್, ಮಿರಾಜ್ ವೈಟ್ ಮತ್ತು ಗ್ರ್ಯಾಫೈಟ್ ಬ್ಲಾಕ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.2017ರಲ್ಲಿ ಬಿಡುಗಡೆಗೊಂಡ 200 ಬೈಕಿನೊಂದಿಗೆ ಈ ಹೊಸ ಆವೃತಿಯೂ ಸ್ಪಂದಿಸುತ್ತದೆ, ಹೆಚ್ಚಿನ ಸ್ಪೋರ್ಟಿ ನೋಟಕ್ಕೆ ಒಳಗೊಂಡಿದೆ.

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಆವೃತಿ ಭಾರತದಲ್ಲಿ ಬಿಡುಗಡೆ

ಗ್ರಾಹಕರಿಂದ ಹೆಚ್ಚಿನ ಸಂಖ್ಯೆಯ ಎಬಿಎಸ್ ಅಳವಡಿಕೆಗೆ ಮನವಿ ಬಂದಿರುವುದರಿಂದ ಈ ಹೊಸ ಪಲ್ಸರ್ ಎನ್ಎಸ್ 200 ಈ ಎಬಿಎಸ್ ಬೈಕನ್ನು ಪರಿಚಯಿಸಲಾಗಿದೆ. ಎಬಿಎಸ್‌ನಿಂದಾಗಿ ಈ ಮೋಟಾರ್ ಸೈಕಲ್‌ನ ಕಾರ್ಯಕ್ಷಮತೆ ಇನ್ನಷ್ಟು ಸುಧಾರಿಸಲಿದ್ದು, ಕಾರ್ಯಕ್ಷಮತೆಯ ವಿಭಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತದೆ ಎನ್ನಲಾಗಿದೆ.

Most Read Articles

Kannada
Read more on ಬಜಾಜ್
English summary
Bajaj Auto has introduced the ABS variant of the naked street fighter, the Pulsar NS200 in India. The Bajaj Pulsar NS200 ABS is priced at Rs 1.09 lakh ex-showroom (Delhi).
Story first published: Friday, November 3, 2017, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X