ಬೆನೆಲ್ಲಿ 302 ಆರ್ ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 3.48 ಲಕ್ಷ

Written By:

ಬೆನೆಲ್ಲಿ 302 ಆರ್ ಬೈಕ್ ಭಾರತದಲ್ಲಿ ಅಮೋಘವಾಗಿ ಬಿಡುಗಡೆಗೊಂಡಿದ್ದು, ಇಟಾಲಿಯನ್ ಮೋಟಾರ್ ಸೈಕಲ್ ಉತ್ಪಾದಕ ಕಂಪನಿಯ ಪ್ರವೇಶ ಮಟ್ಟದ ಬೈಕ್ ಇದಾಗಿದೆ.

ಬೆನೆಲ್ಲಿ 302 ಆರ್ ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 3.48 ಲಕ್ಷ

ಈ ಮೊದಲು ದೆಹಲಿಯ 2016 ಆಟೊ ಎಕ್ಸ್‌ಪೊನಲ್ಲಿ ಅನಾವರಣಗೊಂಡಿದ್ದ ಬೆನೆಲ್ಲಿ ಡಿಎಸ್‌ಕೆ 302R ಬೈಕ್, ಭಾರತದಲ್ಲಿ ರೂ, 3,48,000 ಲಕ್ಷ ಎಕ್ಸ್ ಷೋರೂಂ(ಭಾರತ) ಬೆಲೆ ಹೊಂದಿದೆ. ಬೆನೆಲ್ಲಿ 302R ಗುಣಮಟ್ಟದ ಎಬಿಎಸ್ ಪಡೆಯಲಿದ್ದು, ಈ ಮೋಟಾರ್ ಸೈಕಲ್ ಹೆಚ್ಚು ಸುರಕ್ಷತೆಯನ್ನು ಪಡೆದುಕೊಂಡಿದೆ.

ಬೆನೆಲ್ಲಿ 302 ಆರ್ ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 3.48 ಲಕ್ಷ

ಹೊಸ ಬೆನೆಲ್ಲಿ 302R ಬೈಕ್ 300ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿದ್ದು, 26.5 ಏನ್‌ಎಂ ತಿರುಗುಬಲದಲ್ಲಿ 38.26 ರಷ್ಟು ಅಶ್ವಶಕ್ತಿ ಉತ್ಪತ್ತಿ ಮಾಡಲಿದೆ. ಈ ಬೈಕ್ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ಬೆನೆಲ್ಲಿ 302 ಆರ್ ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 3.48 ಲಕ್ಷ

ಬೆನೆಲ್ಲಿ 302R ಬೈಕ್ ಹೊಸ ಹಂದರದ ಫ್ರೇಮ್ ಚಾರ್ಸಿ ಪಡೆದುಕೊಂಡಿದ್ದು, ಇದರಿಂದಾಗಿ ಟಿಎನ್‌ಟಿ300 ಮೋಟಾರ್ ಸೈಕಲ್‌ಗಿಂತ ಹಗುರವಿರಲಿದೆ.

ಬೆನೆಲ್ಲಿ 302 ಆರ್ ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 3.48 ಲಕ್ಷ

ಇನ್ನು, ಬೈಕಿನ ಬ್ರೇಕಿಂಗ್ ಕಾರ್ಯಗಳ ಬಗ್ಗೆ ಹೇಳುವುದಾದರೆ ನಾಲ್ಕು ಪಿಸ್ಟನ್ ಕ್ಯಾಲಿಪೆರ್ಸ್ ಜೊತೆ 260ಎಂಎಂ ಅಳತೆ ಹೊಂದಿರುವ ಡಿಸ್ಕ್ ಮತ್ತು ಒಂದು ಪಿಸ್ಟನ್ ಕ್ಯಾಲಿಪೆರ್ಸ್ ಜೊತೆ 240ಎಂಎಂ ಅಳತೆಯ ಹಿಂಬದಿಯ ಡಿಸ್ಕ್ ಈ ಬೈಕ್ ಹೊಂದಿದೆ.

ಬೆನೆಲ್ಲಿ 302 ಆರ್ ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 3.48 ಲಕ್ಷ

ವಿನ್ಯಾಸ ಬಗ್ಗೆ ತಿಳಿಸುವುದಾದರೆ, ಬೆನೆಲ್ಲಿ 302R ಕ್ರೀಡಾ ಕ್ಲಿಪ್ ಆನ್ ಹ್ಯಾಂಡಲ್ ಬಾರ್, ಮುಂಭಾಗದಲ್ಲಿ ವಿಭಜನೆಗೊಂಡ ಹೆಡ್‌ಲ್ಯಾಂಪ್‌ಗಳನ್ನು ಪಡೆದುಕೊಂಡಿದೆ.

ಬೆನೆಲ್ಲಿ 302 ಆರ್ ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 3.48 ಲಕ್ಷ

ಹಿಂಭಾಗದಲ್ಲಿ, ಹೆಚ್ಚು ಬಳಕು ಪಸರಿಸುವ ಎಲ್ಇಡಿ ಕ್ರೀಡಾ ದೀಪಗಳು, ಸ್ಪಷ್ಟ ಲೆನ್ಸ್ ಸೂಚಕಗಳು ಮತ್ತು ಡಬಲ್ ಬ್ಯಾರೆಲ್ ಹೊಗೆ ಉಗುಳುವ ಕೊಳವೆಗಳನ್ನು ಒಳಗೊಂಡಿದೆ.

ಬೆನೆಲ್ಲಿ 302 ಆರ್ ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 3.48 ಲಕ್ಷ

ವೈಟ್ ರೊಸ್ಸೊ, ರೆಡ್ ನೀರೋ ಮತ್ತು ಸಿಲ್ವರ್ ವೆರ್ಡೆ ಎಂಬ ಮೂರು ವಿವಿಧ ಬಣ್ಣಗಳಲ್ಲಿ ಇಟಾಲಿಯನ್ ಮೋಟಾರ್ ಸೈಕಲ್ ಲಭ್ಯವಿದೆ.

ಬೆನೆಲ್ಲಿ 302 ಆರ್ ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 3.48 ಲಕ್ಷ

ಡಿಎಸ್‌ಕೆ ಬೆನೆಲ್ಲಿ 302 ಆರ್ ಬೈಕ್ 4 ವರ್ಷ ಅನಿಯಮಿತ ಕಿಲೋಮೀಟರ್ ವಾರಂಟಿ ನೀಡಲಾಗಿದೆ ಮತ್ತು ಮತ್ತು ಕವಾಸಕಿ ನಿಂಜಾ 300 ಮತ್ತು ಕೆಟಿಎಂ ಆರ್‌ಸಿ 390 ಮೋಟಾರ್ ಸೈಕಲ್‌ಗಳೊಂದಿಗೆ ಸ್ಪರ್ಧೆ ನೆಡೆಸಲಿವೆ.

English summary
Read in Kannada about Benelli 302R launched in India. The all-new DSK Benelli 302R is priced at Rs 3.48 lakh ex-showroom (pan India).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark