ಮೈಸೂರಿನಲ್ಲಿ ಉದ್ಘಾಟನೆಗೊಂಡ ಸೂಪರ್ ಬೈಕ್ ಬೆನೆಲ್ಲಿ ಶೋರಂ

Written By:

ಸೂಪರ್ ಬೈಕ್ ಆವೃತ್ತಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಇಟಲಿಯ ಐಕಾನಿಕ್ ಸೂಪರ್ ಬೈಕ್‌ಗಳು ಇನ್ಮುಂದೆ ಮೈಸೂರಿನಲ್ಲೇ ಖರೀದಿಗೆ ಲಭ್ಯವಿರಲಿದ್ದು, ಇದಕ್ಕಾಗಿ ಡಿಕೆಎಸ್ ಮೋಟಾರ್ಸ್ ವೀಲ್ಹ್ ಸಂಸ್ಥೆಯು ಹೊಸ ಶೋರಂ ಒಂದನ್ನು ಉದ್ಘಾಟನೆ ಮಾಡಿದೆ.

To Follow DriveSpark On Facebook, Click The Like Button
ಮೈಸೂರಿನಲ್ಲಿ ಉದ್ಘಾಟನೆಗೊಂಡ ಸೂಪರ್ ಬೈಕ್ ಬೆನೆಲ್ಲಿ ಶೋರಂ

ಮೈಸೂರು-ಹುಣಸೂರು ರಸ್ತೆಯಲ್ಲಿ ಹೊಸದಾಗಿ ಬೆನೆಲ್ಲಿ ಬೈಕ್ ಶೋರಂ ಉದ್ಘಾಟನೆಗೊಂಡಿದ್ದು, ಸೂಪರ್ ಬೈಕ್ ಖರೀದಿದಾರರನ್ನು ಸೆಳೆಯಲು ಇದು ಸಹಕಾರಿಯಾಗಿದೆ. ಈ ಮೂಲಕ ಡಿಕೆಎಸ್ ಮೋಟಾರ್ಸ್ ವೀಲ್ಹ್ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೂಪರ್ ಬೈಕ್ ಆವೃತ್ತಿಗಳನ್ನು ಒದಗಿಸಲಿದೆ.

ಮೈಸೂರಿನಲ್ಲಿ ಉದ್ಘಾಟನೆಗೊಂಡ ಸೂಪರ್ ಬೈಕ್ ಬೆನೆಲ್ಲಿ ಶೋರಂ

ಈಗಾಗಲೇ ದೇಶದ ವಿವಿಧಡೆ ಡಿಕೆಎಸ್ ಮೋಟಾರ್ಸ್ ವೀಲ್ಹ್ ಸಂಸ್ಥೆ ಹಲವಾರು ಬೈಕ್ ಶೋರಂ ಕಾರ್ಯಚರಣೆಯಲ್ಲಿದ್ದು, ಮೈಸೂರಿನಲ್ಲಿರುವ ಪ್ರತಿಷ್ಠಿತ ಶೋಭಾ ಮೋಟಾರ್ಸ್ ಜೊತೆಗೂಡಿ ಈ ಹೊಸ ಬೆನೆಲ್ಲಿ ಶೋರಂ ಅನ್ನು ಪ್ರಾರಂಭ ಮಾಡುತ್ತಿದೆ.

ಮೈಸೂರಿನಲ್ಲಿ ಉದ್ಘಾಟನೆಗೊಂಡ ಸೂಪರ್ ಬೈಕ್ ಬೆನೆಲ್ಲಿ ಶೋರಂ

ಬೈಕ್ ಶೋರಂ ಉದ್ಘಾಟನೆ ಹಿನ್ನೆಲೆ ಬೆನೆಲ್ಲಿ ಸೂಪರ್ ಬೈಕ್ ಆವೃತ್ತಿಗಳಾದ ಟಿಎನ್‌ಟಿ, ಟಿಎನ್‌ಟಿ 25, ಟಿಎನ್‌ಟಿ 300, ಟಿಎನ್‌ಟಿ 600ಐ ಮತ್ತು ಟಿಎನ್‌ಟಿ 600 ಜಿಟಿಯನ್ನು ಪ್ರದರ್ಶನಕ್ಕಿಡಲಾಗಿದ್ದು, ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಶೋಭಾ ಮೋಟಾರ್ಸ್ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಮೈಸೂರಿನಲ್ಲಿ ಉದ್ಘಾಟನೆಗೊಂಡ ಸೂಪರ್ ಬೈಕ್ ಬೆನೆಲ್ಲಿ ಶೋರಂ

ಇನ್ನು ಹೊಸ ಶೋರಂ ಈ ಭಾಗದ ಬೆನೆಲ್ಲಿ ಗ್ರಾಹಕರಿಗೆ ಸಹಕಾರಿಯಾಗಲಿದ್ದು, ಹೊಸ ಬೈಕ್ ಮತ್ತು ಬೀಡಿಭಾಗಗಳ ಸೇವೆಗಳು ಕೂಡಾ ದೊರೆಯಲಿವೆ. ಇದರಿಂದ ಬೆಂಗಳೂರು ಮತ್ತು ಚೆನ್ನೈ ಹೊಗಬೇಕಿದ್ದ ಗ್ರಾಹಕರಿಗೆ ಶೋಭಾ ಮೋಟಾರ್ಸ್ ಡಿಕೆಎಸ್ ಶೋರಂ ಸಹಾಯವಾಗಲಿದೆ.

ಮೈಸೂರಿನಲ್ಲಿ ಉದ್ಘಾಟನೆಗೊಂಡ ಸೂಪರ್ ಬೈಕ್ ಬೆನೆಲ್ಲಿ ಶೋರಂ

250 ಸಿಸಿ ನಿಂದ 350 ಸಿಸಿ ಎಂಜಿನ್ ಸಾಮರ್ಥ್ಯವುಳ್ಳ ಸೂಪರ್ ಬೈಕ್ ಮಾದರಿಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚುತ್ತಿದ್ದು, ಬೆನೆಲ್ಲಿ ಕೂಡಾ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿರುವುದು ಗಮನಾರ್ಹ ಸಂಗತಿ.

ಮೈಸೂರಿನಲ್ಲಿ ಉದ್ಘಾಟನೆಗೊಂಡ ಸೂಪರ್ ಬೈಕ್ ಬೆನೆಲ್ಲಿ ಶೋರಂ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇದೇ ತಿಂಗಳು 25ಕ್ಕೆ ಬೆನೆಲ್ಲಿ ಟೋರ್ನಾಡೋ 302ಆರ್ ಸೂಪರ್ ಬೈಕ್ ಬಿಡುಗಡೆಯಾಗುತ್ತಿದ್ದು, ಇದರ ಬೆನ್ನಲ್ಲೇ ಮೈಸೂರಿನಲ್ಲಿ ಹೊಸ ಬೈಕ್ ಶೋರಂ ಪ್ರಾರಂಭ ಮಾಡಿರುವುದು ಮತ್ತೊಂದು ವಿಶೇಷ.

English summary
Read in Kannada about DSK Benelli Inaugurates First Dealership In Mysore.
Story first published: Friday, July 21, 2017, 13:02 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark