ಡುಕಾಟಿ ಬ್ರಾಂಡ್ ಮಾರಾಟ ಮಾಡುವುದಿಲ್ಲ : ಫೋಕ್ಸ್‌ವ್ಯಾಗನ್

Written By:

ಡೀಸೆಲ್-ಹೊರಸೂಸುವಿಕೆ ವಂಚನೆ ಹಗರಣದಿಂದಾಗಿ ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಡುಕಾಟಿ ಐಕಾನಿಕ್ ಮೋಟಾರ್‌ಸೈಕಲ್ ಬ್ರಾಂಡನ್ನು ಮಾರಾಟ ಮಾಡಲು ಫೋಕ್ಸ್‌ವ್ಯಾಗನ್ ಗ್ರೂಪ್ ನಿರ್ಧರಿಸಿತ್ತು.

To Follow DriveSpark On Facebook, Click The Like Button
ಡುಕಾಟಿ ಬ್ರಾಂಡ್ ಮಾರಾಟ ಮಾಡುವುದಿಲ್ಲ : ಫೋಕ್ಸ್‌ವ್ಯಾಗನ್

ಆದರೆ ಸದ್ಯದ ಮಾಹಿತಿ ಪ್ರಕಾರ, ಫೋಕ್ಸ್‌ವ್ಯಾಗನ್ ಗ್ರೂಪ್ ತನ್ನ ಕಾರ್ಮಿಕ ಗುಂಪುಗಳಿಂದ ಪ್ರಬಲ ವಿರೋಧ ವ್ಯಕ್ತವಾದ ನಂತರ ಡಕ್ಯಾಟಿ ಸೂಪರ್ ಬೈಕ್ ವಿಭಾಗದ ಮಾರಾಟವನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ. ಡುಕಾಟಿ ಸಿಇಒ ಆಗಿರುವಂತಹ ಕ್ಲಾಡಿಯೊ ಡೊಮೆನಿಕಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಡುಕಾಟಿ ಬ್ರಾಂಡ್ ಮಾರಾಟ ಮಾಡುವುದಿಲ್ಲ : ಫೋಕ್ಸ್‌ವ್ಯಾಗನ್

ಕ್ಲಾಡಿಯೊ ಡೊಮೆನಿಕಲಿ ಅವರು ಫೋಕ್ಸ್‌ವ್ಯಾಗನ್ ಗ್ರೂಪ್ ಮೇಲ್ವಿಚಾರಣಾ ಮಂಡಳಿಯಲ್ಲಿ ನೆಡೆದ ಸಭೆಯ ನಂತರ ಮಾರಾಟ ಪ್ರಕ್ರಿಯೆಯನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂಬ ಮಾಹಿತಿಯನ್ನು ಕಾರ್ಮಿಕರಿಗೆ ತಿಳಿಸಿದ್ದಾರೆ.

ಡುಕಾಟಿ ಬ್ರಾಂಡ್ ಮಾರಾಟ ಮಾಡುವುದಿಲ್ಲ : ಫೋಕ್ಸ್‌ವ್ಯಾಗನ್

ಡುಕಾಟಿ ನೌಕರರನ್ನು ಪ್ರತಿನಿಧಿಸುವ ಇಟಾಲಿಯನ್ ಮೆಟಲರ್ಜಿಕಲ್ ಕಾರ್ಮಿಕರ ಸಂಘದ ನಾಯಕ ಬ್ರೂನೋ ಪಾಪಿಗ್ನಾನಿ ಅವರೂ ಸಹ ಕಾರ್ಮಿಕರ ಈ ಡುಕಾಟಿ ವಿಭಾಗವನ್ನು ಮಾರಾಟ ಮಾಡುವ ಪ್ರಕ್ರಿಯೆ ನಿಲ್ಲಿಸುವಿಕೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.

ಡುಕಾಟಿ ಬ್ರಾಂಡ್ ಮಾರಾಟ ಮಾಡುವುದಿಲ್ಲ : ಫೋಕ್ಸ್‌ವ್ಯಾಗನ್

2016ರಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯು ಆಸ್ತಿ ವಿಮರ್ಶೆಯ ಭಾಗವಾಗಿ ಡುಕಾಟಿ ಮಾರಾಟವನ್ನು ತನ್ನ ಕಾರು ಮತ್ತು ಟ್ರಕ್‌ನ ವ್ಯಾಪಾರಕ್ಕೆ ಸರಿಹೊಂದದ ಕಾರ್ಯಾಚರಣೆ ಪರೀಕ್ಷಿಸಲು ಮುಂದಾಗಿತ್ತು. ಈ ಕಾರ್ಯಾಚರಣೆಯ ಮಾರಾಟದ ಬಗ್ಗೆ ಸಲಹೆ ನೀಡುವಂತೆ ತನ್ನ ಪಾಲುದಾರರನ್ನು ಸಹ ಕಂಪನಿಯು ನೇಮಿಸಿತ್ತು.

ಡುಕಾಟಿ ಬ್ರಾಂಡ್ ಮಾರಾಟ ಮಾಡುವುದಿಲ್ಲ : ಫೋಕ್ಸ್‌ವ್ಯಾಗನ್

2012ರಲ್ಲಿ, ಡುಕಾಟಿಯನ್ನು ಫೋಕ್ಸ್‌ವ್ಯಾಗನ್ ಗ್ರೂಪ್ ಆಡಿ ಕಂಪನಿಯ ಮೂಲಕ $981 ಮಿಲಿಯನ್‌ಗೆ ಖರೀದಿಸಿತ್ತು. ಡುಕಾಟಿಯನ್ನು ಮಾರಾಟ ಮಾಡುವ ಮೂಲಕ, ಫೋಕ್ಸ್‌ವ್ಯಾಗನ್ ಕಂಪನಿ $ 1.8 ಶತಕೋಟಿಯಷ್ಟು ನಗದು ಮೀಸಲು ಸಂಗ್ರಹಿಸಬಹುದೆಂದು ಯೋಜನೆ ಹಾಕಿಕೊಂಡಿತ್ತು. ಆದರೆ ಈ ವಿಚಾರವನ್ನು ಸದ್ಯಕ್ಕೆ ಕೈಬಿಟ್ಟಿದೆ.

English summary
A report states that Volkswagen Group has halted the possible sale of Ducati after opposition from its powerful labour groups. Volkswagen Group had decided to sell the iconic motorcycle brand Ducati to manage the rising costs of diesel-emission cheating scandal.
Story first published: Tuesday, October 3, 2017, 20:26 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark