ಬಿಡುಗಡೆಯಾಗುತ್ತಿರುವ ಹೋಂಡಾ ಹೊಚ್ಚ ಹೊಸ ಸ್ಕೂಟರ್ ಗ್ರಾಜಿಯಾ ಸ್ಪೆಷಲ್ ಏನು?

ಹೋಂಡಾ ಮೋಟಾರ್ಸ್ ಇಂಡಿಯಾ ಸಂಸ್ಥೆಯು ಇದೀಗ ಗ್ರಾಜಿಯಾ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ಹಿನ್ನೆಲೆ ಹೊಸ ಸ್ಕೂಟರ್ ಕುರಿತಾದ ಎಂಜಿನ್ ವೈಶಿಷ್ಟ್ಯತೆಗಳು ಮತ್ತು ಬೆಲೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

By Praveen

ಈ ಹಿಂದೆ 2 ಹೊಸ ಸ್ಕೂಟರ್ ಮಾದರಿಗಳನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದ ಹೋಂಡಾ ಮೋಟಾರ್ಸ್ ಇಂಡಿಯಾ ಸಂಸ್ಥೆಯು ಇದೀಗ ಗ್ರಾಜಿಯಾ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ಹಿನ್ನೆಲೆ ಹೊಸ ಸ್ಕೂಟರ್ ಕುರಿತಾದ ಎಂಜಿನ್ ವೈಶಿಷ್ಟ್ಯತೆಗಳು ಮತ್ತು ಬೆಲೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಹೋಂಡಾ ಹೊಚ್ಚ ಹೊಸ ಸ್ಕೂಟರ್ ಗ್ರಾಜಿಯಾ ಸ್ಪೆಷಲ್ ಏನು?

ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ನಿರ್ಮಾಣದ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರನ್ನು ಸೆಳೆಯುವ ಉದ್ದೇಶದಿಂದ ಹೊಸ ಹೊಸ ನಮೂನೆಯ ಸ್ಕೂಟರ್ ಮತ್ತು ಮೋಟಾರ್ ಸೈಕಲ್‌ಗಳನ್ನು ಸಿದ್ಧಗೊಳಿಸುತ್ತಿದೆ.

ಹೋಂಡಾ ಹೊಚ್ಚ ಹೊಸ ಸ್ಕೂಟರ್ ಗ್ರಾಜಿಯಾ ಸ್ಪೆಷಲ್ ಏನು?

ಹೀಗಾಗಿಯೇ ಈ ಹಿಂದೆ ಹೊಸ ಸ್ಕೂಟರ್ ಬಿಡುಗಡೆ ಕುರಿತಾಗಿ ಸುಳಿವು ನೀಡಿದ್ದ ಹೋಂಡಾ ಸಂಸ್ಥೆಯು 2017ರ ಅಂತ್ಯಕ್ಕೆ ಮತ್ತು 2018ರ ಆರಂಭದಲ್ಲಿ 2 ಹೊಸ ಸ್ಕೂಟರ್ ಉತ್ಪನ್ನಗಳನ್ನು ಮತ್ತು 2 ಹೊಸ ಬೈಕ್‌ಗಳನ್ನು ಪರಿಚಯಿಸುವ ಬಗ್ಗೆ ಇರಾದೆ ವ್ಯಕ್ತಪಡಿಸಿತ್ತು.

Recommended Video

[Kannada] Mahindra KUV 100 NXT Launched In India - DriveSpark
ಹೋಂಡಾ ಹೊಚ್ಚ ಹೊಸ ಸ್ಕೂಟರ್ ಗ್ರಾಜಿಯಾ ಸ್ಪೆಷಲ್ ಏನು?

ಅಂತೆಯೇ ಇದೀಗ ಗ್ರಾಜಿಯಾ ಎನ್ನುವ ಹೊಸ ನಮೂನೆಯ ಸ್ಕೂಟರ್ ಮಾದರಿಯೊಂದನ್ನು ಪರಿಚಯಿಸಲಾಗುತ್ತಿದ್ದು, ಡೀಲರ್ಸ್ ಯಾರ್ಡ್‌ಗಳಲ್ಲಿ ಈಗಾಗಲೇ ಹೊಸ ಸ್ಕೂಟರ್‌ಗಳನ್ನು ಸ್ಟಾಕ್ ಕೂಡಾ ಮಾಡಲಾಗುತ್ತಿದೆ.

ಹೋಂಡಾ ಹೊಚ್ಚ ಹೊಸ ಸ್ಕೂಟರ್ ಗ್ರಾಜಿಯಾ ಸ್ಪೆಷಲ್ ಏನು?

ಸ್ಟಾಕ್ ಯಾರ್ಡ್‌ನಲ್ಲಿ ಕಾಣಿಸಿಕೊಂಡಿರುವ ಗ್ರಾಜಿಯಾ ಸ್ಕೂಟರ್‌ಗಳು ಪ್ರಸ್ತುತ ಸ್ಕೂಟರ್ ಆವೃತ್ತಿಗಳಲ್ಲೇ ವಿಭಿನ್ನ ಮಾದರಿಯಾಗಿದ್ದು, ವಿ ಆಕಾರದ ಹೆಡ್‌ಲ್ಯಾಂಪ್ ಗ್ರಾಜಿಯಾ ಸ್ಕೂಟರ್‌ಗೆ ಲುಕ್ ನೀಡಿರುವುದಂತು ಸುಳ್ಳಲ್ಲ.

ಹೋಂಡಾ ಹೊಚ್ಚ ಹೊಸ ಸ್ಕೂಟರ್ ಗ್ರಾಜಿಯಾ ಸ್ಪೆಷಲ್ ಏನು?

ಜೊತೆಗೆ ಆ್ಯಕ್ಟಿವಾ ರೀತಿಯಲ್ಲಿಯೇ ಮುಂಭಾಗದಲ್ಲಿ ಅಗಲವಾದ ಕ್ರೋಮ್ ಹೊಂದಿದ್ದು, ಟೆಲಿಸ್ಕೂಪಿಕ್ ಫ್ರಂಟ್, ಯುಎಸ್‌ಬಿ ಸ್ಲಾಟ್, ಮೊಬೈಲ್ ಚಾರ್ಜಿಂಗ್ ಯುನಿಟ್, ಡಿಸ್ಕ್ ಬ್ರೇಕ್ ಮತ್ತು ಸುಧಾರಿತ ತಂತ್ರಜ್ಞಾನ ಮಾದರಿಯಾದ ಕೊಂಬಿ ಬ್ರೇಕ್ ವ್ಯವಸ್ಥೆಯನ್ನು ಹೊಂದಿದೆ.

ಹೋಂಡಾ ಹೊಚ್ಚ ಹೊಸ ಸ್ಕೂಟರ್ ಗ್ರಾಜಿಯಾ ಸ್ಪೆಷಲ್ ಏನು?

ಎಂಜಿನ್ ಸಾಮರ್ಥ್ಯ

ಗ್ರಾಜಿಯಾ ಸ್ಕೂಟರ್ ಮಾದರಿಯು 124.9 ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದ್ದು, ಆಕ್ಟಿವಾ ಮಾದರಿಯಲ್ಲೇ 8.52-ಬಿಎಚ್‌ಪಿ ಮತ್ತು 10.54-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಓದಿರಿ-ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಹೋಂಡಾ ಹೊಚ್ಚ ಹೊಸ ಸ್ಕೂಟರ್ ಗ್ರಾಜಿಯಾ ಸ್ಪೆಷಲ್ ಏನು?

ಈ ಮೂಲಕ ಹೊಸ ಸ್ಕೂಟರ್ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ 60 ಸಾವಿರದಿಂದ 65 ಸಾವಿರಕ್ಕೆ ನಿಗದಿಯಾಗುವ ಸಾಧ್ಯತೆಗಳಿದ್ದು, ಯಮಹಾ ರೆ ಮತ್ತು ಸುಜುಕಿ ಆಕ್ಸೆಸ್ 125, ವೆಸ್ಪಾ ವಿಎಕ್ಸ್ಐ 125 ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವುದಲ್ಲಿ ಯಾವುದೇ ಅನುಮಾನವಿಲ್ಲ.

ಹೋಂಡಾ ಹೊಚ್ಚ ಹೊಸ ಸ್ಕೂಟರ್ ಗ್ರಾಜಿಯಾ ಸ್ಪೆಷಲ್ ಏನು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಸ್ಕೂಟರ್ ಆವೃತ್ತಿಗಳಲ್ಲೇ ಗ್ರಾಜಿಯಾ ಮಾದರಿ ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿರುವ ಸ್ಕೂಟರ್ ಆವೃತ್ತಿಯಾಗಿದ್ದು, ನವೆಂಬರ್ ಅಂತ್ಯಕ್ಕೆ ದೇಶ್ಯಾದ್ಯಂತ ಬಿಡುಗಡೆಯಾಗಲಿದೆ. ಹೀಗಾಗಿ ಆಸಕ್ತ ಗ್ರಾಹಕರು ಅಧಿಕೃತ ಡೀಲರ್‌ಗಳ ಬಳಿ ಈಗಲೇ ರೂ.2000 ಮುಂಗಡ ಪಾವತಿಸಿ ಹೊಸ ಸ್ಕೂಟರ್‌ಗಾಗಿ ಬುಕ್ಕಿಂಗ್ ಮಾಡಬಹುದಾಗಿದೆ.

Trending On DriveSpark Kannada:

ಹೊಸ ಕಾರಿನ ನೋಂದಣಿಯಲ್ಲಿ ಮೋಸ ಮಾಡಿದ್ದ ಅಮಲಾ ಪೌಲ್‌‌ಗೆ 20 ಲಕ್ಷ ದಂಡ..!!

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

Most Read Articles

Kannada
English summary
All You Need To Know About The New Honda Grazia
Story first published: Tuesday, October 31, 2017, 10:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X