ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಇಂಡಿಯನ್ ಮೋಟಾರ್‌ ಸೈಕಲ್‌ನಿಂದ ಕೆ2ಕೆ ಅಭಿಯಾನ

Written By:

ಬಡಹೆಣ್ಣು ಮಕ್ಕಳ ಶಿಕ್ಷಣದಿಂದ ವಂಚಿತರಾಗುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು ಕೆ2ಕೆ ಅಭಿಯಾನ ಕೈಗೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

To Follow DriveSpark On Facebook, Click The Like Button
ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಇಂಡಿಯನ್ ಮೋಟಾರ್‌ ಸೈಕಲ್‌ನಿಂದ ಅಭಿಯಾನ

ಭಾರತ ಬೆಳೆಯುತ್ತಿದ್ದಂತೆ ಹತ್ತಾರು ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಇದರಲ್ಲಿ ಬಡತನವು ಒಂದಾಗಿದ್ದು, ಅನೇಕರು ಇದೇ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗುತ್ತಿರುವುದು ಮತ್ತೊಂದು ಸಮಸ್ಯೆಗೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸ ಅಭಿಯಾನಯೊಂದನ್ನು ಕೈಗೊಂಡಿರುವ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹಿಸಲು ಮುಂದಾಗಿದೆ.

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಇಂಡಿಯನ್ ಮೋಟಾರ್‌ ಸೈಕಲ್‌ನಿಂದ ಅಭಿಯಾನ

ಇದಕ್ಕಾಗಿಯೇ ಇಂಡಿಯನ್ ರೋಡ್‌ ಸ್ಟಾರ್ ಬೈಕಿನ ಮೂವರು ಮಾಲೀಕರು ದೇಶಾದ್ಯಂತ 12 ನಗರಗಳನ್ನು ಪ್ರಯಾಣ ಮಾಡಲಿದ್ದು, ಅಭಿಯಾನದ ಜೊತೆ ಆಯ್ದ ಶಾಲಾ ಕಾಲೇಜುಗಳಿಗೆ ಭೇಟಿ ಮಾಡಲಿದ್ದಾರೆ.

Recommended Video
MV Agusta Brutale Launched In India | In Kannada - DriveSpark ಕನ್ನಡ
ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಇಂಡಿಯನ್ ಮೋಟಾರ್‌ ಸೈಕಲ್‌ನಿಂದ ಅಭಿಯಾನ

ಈ ಹಿನ್ನೆಲೆ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಬೈಕ್ ಅಭಿಯಾನ ನಡೆಯಲಿದ್ದು, 'ಗರ್ಲ್ ಚೈಲ್ಡ್ ಎಜುಕೇಷನ್' ಪರಿಕಲ್ಪನೆ ಅಡಿ ಬಡಹೆಣ್ಣುಮಕ್ಕಳಿಗಾಗಿ ಶೈಕ್ಷಣಿಕ ಕಿ‌ಟ್‌ಗಳನ್ನು ಒದಗಿಸಲು ದೇಣಿಗೆ ಸಂಗ್ರಹಿಸಿಲಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಇಂಡಿಯನ್ ಮೋಟಾರ್‌ ಸೈಕಲ್‌ನಿಂದ ಅಭಿಯಾನ

ಇದಕ್ಕೂ ಮೊದಲ ಬೆಂಗಳೂರಿನಿಂದ ಕೆ2ಕೆ ಅಭಿಯಾನಕ್ಕೆ ಹಸಿರು ನಿಶಾನೆ ತೊರಲಾಗಿದ್ದು, ಅನುರಾಗ್ ಶ್ರೀವಾಸ್ತವ, ನೀಲಾದ್ರಿ ಸಹಾ ಮತ್ತು ಬರ್ನಾರ್ಡ್ ಲಜರ್ ಬೆಂಗಳೂರಿನಿಂದ ಕೆ2ಕೆ ರೈಡ್ ಪ್ರಾರಂಭಿಸಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಇಂಡಿಯನ್ ಮೋಟಾರ್‌ ಸೈಕಲ್‌ನಿಂದ ಅಭಿಯಾನ

ಇಂಡಿಯನ್ ಮೋಟಾರ್ ಸೈಕಲ್ ಮಾಲೀಕರ ವಿನೂತನ ಪ್ರಯತ್ನಕ್ಕೆ ಹಲವು ಸಂಘಟನೆಗಳು ಕೈಜೋಡಿಸಿದ್ದು, ಬಡ ಹೆಣ್ಣುಮಕ್ಕಳ ಶಿಕ್ಷಣ ಅಭಿವೃದ್ಧಿಗೆ ಕೈಗೊಂಡಿರುವ ಅಭಿಯಾನ ಪ್ರಸಂಶೆಗೆ ಕಾರಣವಾಗಿದೆ.

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಇಂಡಿಯನ್ ಮೋಟಾರ್‌ ಸೈಕಲ್‌ನಿಂದ ಅಭಿಯಾನ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶದಲ್ಲಿಂದು ಲಕ್ಷಾಂತರ ಮಕ್ಕಳು ಬಡತನ ಹಿನ್ನೆಲೆ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಇದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ಆದರೂ ಬಡಹೆಣ್ಣು ಮಕ್ಕಳು ಸಂಕಷ್ಟದಲ್ಲಿದ್ದು, ಇಂಡಿಯನ್ ಮೋಟಾರ್ ಸೈಕಲ್ ಮಾಲೀಕರು ಕೈಗೊಂಡಿರುವ ಅಭಿಯಾನ ಸಾರ್ಥಕತೆಯಿಂದ ಕೂಡಿದೆ ಎನ್ನಬಹುದು.

English summary
Read in Kannada about Indian Motorcycle Flags Off Kashmir To Kanyakumari Fundraiser Ride.
Story first published: Saturday, September 9, 2017, 17:21 [IST]
Please Wait while comments are loading...

Latest Photos