ಮತ್ತೆ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ ಬಜಾಜ್ ಪಲ್ಸರ್ 220

Written By:

ಭಾರತೀಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಬಜಾಜ್ ಆಟೊ ತನ್ನ ಸಂಪೂರ್ಣ ಪಲ್ಸರ್ ಸರಣಿಯ ಬೈಕುಗಳನ್ನು ಹೊಸ ಬಿಎಸ್-IV ಎಂಜಿನ್ ಮತ್ತು ಸ್ವಯಂಚಾಲಿತ ಹೆಡ್ ಲ್ಯಾಂಪ್ ಆನ್(ಎಎಚ್ಒ) ವೈಶಿಷ್ಟ್ಯಗಳೊಂದಿಗೆ ನವೀಕರಿಸಿದೆ.

2017 ಪಲ್ಸರ್ ಸರಣಿಯು ಹೊಸ ಬಣ್ಣದ ಯೋಜನೆಗಳನ್ನು ಸಹ ಪಡೆದುಕೊಂಡಿದ್ದು, ಈಗ ಕಂಪೆನಿಯು ಮತ್ತೊಂದು ಅಪ್ಡೇಟ್‌ನೊಂದಿಗೆ ಪಲ್ಸರ್ 220 ಬೈಕ್ ಹೊರತರಲಿದೆ.

ಪಲ್ಸರ್ 220 ಕೆಂಪು ಮತ್ತು ಕಪ್ಪು ಬಣ್ಣದ ಬೈಕ್ ಮೇಲೆ ಹೊಸ ಬಿಳಿ ಬಣ್ಣದ ಗ್ರಾಫಿಕ್ಸ್ ಒಳಗೊಂಡಿರಲಿದೆ ಮತ್ತು ಬೈಕಿನ ಶಕ್ತಿಯನ್ನು ಸ್ವಲ್ಪ ಕಡಿಮೆ ಮಾಡಲಾಗಿದೆ.

ಬಜಾಜ್ ಪಲ್ಸರ್ 220 ದೀರ್ಘಕಾಲದಿಂದ ಭಾರತೀಯ ಮಾರುಕಟ್ಟೆಯಲ್ಲಿದ್ದು, ಈಗಲೂ ಸಹ ಉತ್ತಮ ಮಾರಾಟವನ್ನು ಈ ಬೈಕ್ ಹೊಂದಿದ್ದು, ಭಾರತೀಯ ಯುವಕರ ನೆಚ್ಚಿನ ಬೈಕ್ ಎನ್ನಿಸಿಕೊಂಡಿದೆ.

ಹಳೆಯ ಸ್ಟೈಲಿಂಗ್ ಹೊರತಾಗಿಯೂ, ಪಲ್ಸರ್ 220 ತನ್ನ ಮಾರುಕಟ್ಟೆಯ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಇತ್ತೀಚಿನ ಮಾದರಿಯಲ್ಲಿ ಬಜಾಜ್ ಆಟೊ ಪಲ್ಸರ್ 200 ಬೈಕಿನ ಶಕ್ತಿಯನ್ನು ಕೊಂಚ ಮಟ್ಟಿಗೆ ಕಡಿಮೆಗೊಳಿಸಿದ್ದು, ಸದ್ಯ 20.93 ಅಶ್ವಶಕ್ತಿ ಹೊಂದಿದೆ. ಶಕ್ತಿಯ ಮಾರ್ಪಡುಗಳ ಹೊರತಾಗಿ ಪಲ್ಸರ್ 220 ಬೈಕಿನಲ್ಲಿ ತಾಂತ್ರಿಕ ವಿವರಣೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

2017 ಬಜಾಜ್ ಪಲ್ಸರ್ 220 ಬಿಎಸ್-IV ಆಯಿಲ್ ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ಈ ಹಿಂದೆ, ಹೋಂಡಾ ಸಹ ಬಿಎಸ್-4 ಎಂಜಿನ್ ಹೊಂದಿರುವ ಯೂನಿಕಾರ್ನ್ 150 ಮತ್ತು ಸಿಬಿ ಹಾರ್ನೆಟ್ 160ಆರ್ ಶಕ್ತಿಯನ್ನು ಕಡಿಮೆಗೊಳಿಸಿತ್ತು.

Read more on ಪಲ್ಸರ್ pulsar
English summary
Read in Kannada about Bajaj Auto updated its Pulsar 220 with the new BS-IV engine and Automatic Headlamp On (AHO) feature.
Story first published: Friday, May 26, 2017, 16:21 [IST]
Please Wait while comments are loading...

Latest Photos

X