ಟಿವಿಎಸ್ ಕಂಪನಿಯ ಉದ್ಯೋಗಿಯಿಂದ ಅಪಾಚೆ ಆರ್‌ಆರ್ 310 ಬೈಕಿನ ರಹಸ್ಯ ಚಿತ್ರ ಬಿಡುಗಡೆ

Written By:

ಡಿಸೆಂಬರ್ 6ರಂದು ಭಾರತದಲ್ಲಿ ಅಪಾಚೆ ಆರ್‌ಆರ್ 310 ಬೈಕ್ ಬಿಡುಗಡೆ ಭಾಗ್ಯ ಕಾಣಲಿದ್ದು, ಆಶ್ಚರ್ಯವೆಂಬಂತೆ ಟಿವಿಎಸ್ ಮೋಟಾರ್ ಕಂಪನಿಯ ಉದ್ಯೋಗಿಯೊಬ್ಬರು ಈ ರಹಸ್ಯ ಚಿತ್ರಗಳನ್ನು ಫೇಸ್ ಬುಕ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಟಿವಿಎಸ್ ಕಂಪನಿಯ ಉದ್ಯೋಗಿಯಿಂದ ಅಪಾಚೆ ಆರ್‌ಆರ್ 310 ಬೈಕಿನ ರಹಸ್ಯ ಚಿತ್ರ ಬಿಡುಗಡೆ

ಸದ್ಯ ಈ ಚಿತ್ರಗಳು ಹೆಚ್ಚು ಗಮನ ಸೆಳೆದಿವೆ ಎನ್ನಬಹುದು. ಹೌದು, ಸೋರಿಕೆಯಾದ ಚಿತ್ರಗಳನ್ನು ಗಮನಿಸಿದಂತೆ, ಹೊಸ ಟಿವಿಎಸ್ ಅಪಾಚೆ ಆರ್‌ಆರ್ 310 ಮೋಟಾರ್ ಸೈಕಲ್ ರಿವರ್ಸ್ ಇನ್‌ಕ್ಲಿನ್ಡ್ ಎಂಜಿನ್ ಹೊಂದಿರುವ ಮೊದಲ ಭಾರತೀಯ ಮೋಟಾರ್ ಸೈಕಲ್ ಎನ್ನಿಸಿಕೊಳ್ಳಲಿದೆ.

ಟಿವಿಎಸ್ ಕಂಪನಿಯ ಉದ್ಯೋಗಿಯಿಂದ ಅಪಾಚೆ ಆರ್‌ಆರ್ 310 ಬೈಕಿನ ರಹಸ್ಯ ಚಿತ್ರ ಬಿಡುಗಡೆ

ಇದಕ್ಕೆ ಧನ್ಯವಾದ ಹೇಳಲೇಬೇಕು. ಈ ಮೋಟರ್‌ಸೈಕಲ್ ಬಿಎಂಡಬ್ಲ್ಯೂ ಸಂಸ್ಥೆಯ ಎಂಜಿನ್ ಪಡೆದು ಇತರ ಭಾರತೀಯ ಮೋಟಾರು ಸೈಕಲ್‌ಗಳಿಗಿಂತ ಉತ್ತಮ ಕಾರ್ಯನಿರ್ವಹಣೆಯನ್ನು ನೀಡುತ್ತದೆ.

ಟಿವಿಎಸ್ ಕಂಪನಿಯ ಉದ್ಯೋಗಿಯಿಂದ ಅಪಾಚೆ ಆರ್‌ಆರ್ 310 ಬೈಕಿನ ರಹಸ್ಯ ಚಿತ್ರ ಬಿಡುಗಡೆ

ಟಿವಿಎಸ್ ಅಪಾಚೆ ಆರ್‌ಆರ್ 310 ಪರಿಕಲ್ಪನೆಯ ಉತ್ಪಾದನೆಯ ಆವೃತ್ತಿಯು, ಕೆಟಿಎಂ ಆರ್‌ಸಿ 200 ಬೈಕಿನೊಂದಿಗೆ ಸ್ಪರ್ಧೆ ನೆಡೆಸಲಿದ್ದು ಈ ಬೈಕ್ ಅಂದಾಜು ರೂ.1.7 ಲಕ್ಷ ಎಕ್ಸ್ ಶೋರೂಂ ಬೆಲೆ ಪಡೆಯುವ ಸಾಧ್ಯತೆ ಇದೆ.

ಟಿವಿಎಸ್ ಕಂಪನಿಯ ಉದ್ಯೋಗಿಯಿಂದ ಅಪಾಚೆ ಆರ್‌ಆರ್ 310 ಬೈಕಿನ ರಹಸ್ಯ ಚಿತ್ರ ಬಿಡುಗಡೆ

ಅಪಾಚೆ ಆರ್‌ಆರ್ 310 ಬೈಕಿನ ಎಂಜಿನ್ ಮೇಲಿರುವ ಏರ್ ಫಿಲ್ಟರ್ ನಿಯೋಜನೆಗೆ ಧನ್ಯವಾದಗಳು. ಇದು, ನೇರವಾಗಿ ಎಂಜಿನ್‌ಗೆ ಪ್ರವೇಶಿಸುತ್ತದೆ ಮತ್ತು ಇದರಿಂದಾಗಿ ಉತ್ತಮ ಕಾರ್ಯನಿರ್ವಹಣೆಯನ್ನು ತಲುಪಿಸುತ್ತದೆ. ರಿವರ್ಸ್ ಇನ್‌ಕ್ಲಿನ್ಡ್ ಎಂಜಿನ್ ಮತ್ತೊಂದು ಪ್ರಯೋಜನವೆಂದರೆ ಅದು ಹೆಚ್ಚು ವೇಗವಾಗಿ ತಂಪಾಗುತ್ತದೆ.

ಟಿವಿಎಸ್ ಕಂಪನಿಯ ಉದ್ಯೋಗಿಯಿಂದ ಅಪಾಚೆ ಆರ್‌ಆರ್ 310 ಬೈಕಿನ ರಹಸ್ಯ ಚಿತ್ರ ಬಿಡುಗಡೆ

ನಮಗೆಲ್ಲರಿಗೂ ತಿಳಿದಿರುವಂತೆ, ಟಿವಿಎಸ್ ಮತ್ತು ಬಿಎಂಡಬ್ಲ್ಯೂ ಕಂಪನಿಗಳ ಒಪ್ಪಂದದ ಫಲವಾಗಿ ಈ ಬೈಕ್ ಬಿಡುಗಡೆಯಾಗಿದೆ. ಇದರ ಪ್ರಕಾರ ಮೋಟಾರ್ ಸೈಕಲ್ ಅಭಿವೃದ್ಧಿಯನ್ನು ಟಿವಿಎಸ್ ಮಾಡಿದ್ದು, ಅದರ ಎಂಜಿನ್‌ನನ್ನು ಬಿಎಂಡಬ್ಲ್ಯು ಮೊಟ್ರಾಡ್ ವಿನ್ಯಾಸಗೊಳಿಸಿಸುತ್ತದೆ.

ಟಿವಿಎಸ್ ಕಂಪನಿಯ ಉದ್ಯೋಗಿಯಿಂದ ಅಪಾಚೆ ಆರ್‌ಆರ್ 310 ಬೈಕಿನ ರಹಸ್ಯ ಚಿತ್ರ ಬಿಡುಗಡೆ

ಈ ಬೈಕ್ 34.2 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ ಮತ್ತು ಲಿಟರಿಗೆ 25 ರಿಂದ 30 ಕಿ.ಮೀ ಮೈಲೇಜ್ ನೀಡಲಿದೆ. ಡುಯಲ್ ಚಾನೆಲ್ ಟೋಟಲ್ ಕಂಟ್ರೋಲ್ ಎಬಿಎಸ್ ಆಯ್ಕೆಯ ಈ ಬೈಕ್ ಹೆಚ್ಚು ಸುರಕ್ಷತೆಯನ್ನು ನೀಡಲಿದೆ.

ಟಿವಿಎಸ್ ಕಂಪನಿಯ ಉದ್ಯೋಗಿಯಿಂದ ಅಪಾಚೆ ಆರ್‌ಆರ್ 310 ಬೈಕಿನ ರಹಸ್ಯ ಚಿತ್ರ ಬಿಡುಗಡೆ

ಸದ್ಯ, ಜಿ 310ಆರ್ ಮತ್ತು ಅಪಾಚೆ ಆರ್‌ಟಿಆರ್ 300 ಬೈಕುಗಳು ಟಿವಿಎಸ್ ಕಂಪನಿಯ ಹೊಸೂರು ಸ್ಥಾವರದಲ್ಲಿ ನಿರ್ಮಾಣ ಮಾಡಲಾಗಿದೆ ಹಾಗು ಈ ವಾಹನದ ಬಿಡುಗಡೆಯು ಡಿಸೆಂಬರ್ 6 ರಂದು ನಡೆಯಲಿದ್ದು, ಬೈಕ್ ಪ್ರಿಯರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Read more on tvs ಟಿವಿಎಸ್
English summary
TVS Apache RR 310 specs have been revealed on Facebook by none other than a TVS Motor employee.
Story first published: Monday, December 4, 2017, 14:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark