ಅಗಸ್ಟ್ ತಿಂಗಳಿನಲ್ಲಿ ಶೇ.16ರಷ್ಟು ಪ್ರಗತಿ ಸಾಧಿಸಿದ ಟಿವಿಎಸ್ ಮೋಟಾರ್ಸ್
ಇತ್ತೀಚೆಗೆ ಟಿವಿಎಸ್ ನಿರ್ಮಾಣದ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಏರಿಕೆ ಕಂಡಿದ್ದು, ಪರಿಣಾಮ ಅಗಸ್ಟ್ ಅವಧಿಯಲ್ಲಿ ಮಾರಾಟಗೊಂಡ ದ್ವಿಚಕ್ರ ವಾಹನಗಳ ಸಂಖ್ಯೆ ಕಳೆದ ಅವಧಿಗಿಂತ ಶೇ.16ರಷ್ಟು ಪ್ರಗತಿ ಸಾಧಿಸಿದೆ.
ಇತ್ತೀಚೆಗೆ ಟಿವಿಎಸ್ ನಿರ್ಮಾಣದ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಏರಿಕೆ ಕಂಡಿದ್ದು, ಪರಿಣಾಮ ಅಗಸ್ಟ್ ಅವಧಿಯಲ್ಲಿ ಮಾರಾಟಗೊಂಡ ದ್ವಿಚಕ್ರ ವಾಹನಗಳ ಸಂಖ್ಯೆ ಕಳೆದ ಅವಧಿಗಿಂತ ಶೇ.16ರಷ್ಟು ಪ್ರಗತಿ ಸಾಧಿಸಿದೆ.

ಈ ವರ್ಷದ ಅಗಸ್ಟ್ ತಿಂಗಳಲ್ಲಿ ಟಿವಿಎಸ್ ಮೋಟಾರ್ ಸಂಸ್ಥೆಯು ಸುಮಾರು 3,17,563 ವಾಹನಗಳನ್ನು ಮಾರಾಟ ಮಾಡಿದ್ದು, 2016ರ ಅಗಸ್ಟ್ ತಿಂಗಳ 2,74,303 ಯುನಿಟ್‌ಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 16ರಷ್ಟು ಏರಿಕೆ ಕಂಡಿದೆ.

ಇದಲ್ಲದೇ ದ್ವಿಚಕ್ರ ವಾಹನ ವಿಭಾಗವು 2017ರ ಆಗಸ್ಟ್‌ನಲ್ಲಿ 3,09,146 ಯುನಿಟ್‌ಗಳ ಮಾರಾಟದೊಂದಿಗೆ ಶೇ.15.5ರಷ್ಟು ಬೆಳವಣಿಗೆ ದಾಖಲಿಸಿದ್ದು, ದೇಶೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಕಳೆದ ಆಗಸ್ಟ್ 2016ರಲ್ಲಿ ಶೇ.13ರಷ್ಟು ಬೆಳವಣಿಗೆಯೊಂದಿಗೆ 2,38,984 ಯೂನಿಟ್‌ಗಳು ಮಾರಾಟ ಮಾಡಿತ್ತು.
Recommended Video


ಟಿವಿಎಸ್ ಕಂಪನಿಯ ಬೆಳವಣಿಗೆಗೆ ಸ್ಕೂಟರ್ ಮಾರಾಟವು ಕೂಡಾ ಗಮನಾರ್ಹ ಕೊಡುಗೆ ನೀಡಿದೆ. ಕಳೆದ ಅಗಸ್ಟ್‌ನಲ್ಲಿ ಮಾರಾಟಗೊಂಡ 76,572 ಯೂನಿಟ್‌ಗಳಿದೆ ಹೋಲಿಸಿದರೆ ಈ ವರ್ಷ 1,14,354 ಯುನಿಟ್‌ಗಳು ಮಾರಾಟಗೊಂಡು ಶೇ.49.3 ರಷ್ಟು ಬೆಳವಣಿಗೆ ದಾಖಲಿಸಿದೆ.

ಇನ್ನು ಮೋಟಾರ್ ಸೈಕಲ್ ಮಾರಾಟವು ಆಗಸ್ಟ್ 2017ರಲ್ಲಿ 1,11,927 ಘಟಕಗಳು ಮಾರಾಟಗೊಂಡಿದ್ದು, ಆಗಸ್ಟ್ 2016ರಲ್ಲಿ 1,14,195 ಘಟಕಗಳನ್ನು ಮಾರಾಟಗೊಂಡಿವೆ. ಜೊತೆಗೆ ಟಿವಿಎಸ್ ಬೆಳವಣಿಗೆಗೆ ರಫ್ತು ವಹಿವಾಟು ಗಮನಾರ್ಹ ಕೊಡುಗೆ ನೀಡಿದ್ದು, ಈ ಮೂಲಕ ಶೇ.34ರಷ್ಟು ಪ್ರಗತಿ ಕಂಡಿದೆ.

ಕೊನೆಯದಾಗಿ ಮೂರು ಚಕ್ರದ ವಾಹನಗಳ ವಿಭಾಗದಲ್ಲೂ 26.9 ರಷ್ಟು ಏರಿಕೆಯಾಗಿದ್ದು, 2016 ರ ಆಗಸ್ಟ್‌ನಲ್ಲಿ ಟಿವಿಎಸ್ ಕಂಪನಿಯು ಮಾರಾಟ ಮಾಡಿದ್ದ 6,633 ಯುನಿಟ್‌ಗಳಿಗೆ ಹೋಲಿಸಿದರೆ ಆಗಸ್ಟ್ 2017 ರಲ್ಲಿ 8,417 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಟಿವಿಎಸ್ ಸ್ಕೂಟರ್ ವಿಭಾಗವು ಆಗಸ್ಟ್ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಮುಂಬರುವ ಹಬ್ಬದ ಋತುವಿನಲ್ಲಿ ಇದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.


Click it and Unblock the Notifications








