ಹೊಸ ಯೋಜನೆಗಳಿಗಾಗಿ ಟಿವಿಎಸ್‌ನಿಂದ 500 ಕೋಟಿ ಬಂಡವಾಳ ಹೂಡಿಕೆ..!

Written By:

ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ಹೊಸ ವಾಹನಗಳ ಬಿಡುಗಡೆ ಮತ್ತು ಕಾರ್ಯವ್ಯಾಪ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆ ರೂಪಿಸಿರುವ ಟಿವಿಎಸ್ ಸಂಸ್ಥೆಯು ಭಾರತದಲ್ಲಿ ರೂ.500 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ.

ಹೊಸ ಯೋಜನೆಗಳಿಗಾಗಿ ಟಿವಿಎಸ್‌ನಿಂದ 500 ಕೋಟಿ ಬಂಡವಾಳ ಹೂಡಿಕೆ..!

ದೇಶಿಯವಾಗಿ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಸಂಸ್ಥೆಯು ಮುಂಬರುವ ಆರ್ಥಿಕ ವರ್ಷದ ಒಳಗಾಗಿ ರೂ.500 ಕೋಟಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಹೊಸ ಹೊಸ ವಾಹನಗಳ ಉತ್ಪಾದನೆ ಮತ್ತು ಕಾರ್ಯವ್ಯಾಪ್ತಿಯನ್ನು ಹೆಚ್ಚಿಸುವ ಯೋಜನೆ ರೂಪಿಸಿದೆ.

ಹೊಸ ಯೋಜನೆಗಳಿಗಾಗಿ ಟಿವಿಎಸ್‌ನಿಂದ 500 ಕೋಟಿ ಬಂಡವಾಳ ಹೂಡಿಕೆ..!

ಸ್ಕೂಟರ್ ಹಾಗೂ ಬೈಕ್ ಉತ್ಪಾದನೆ ಮತ್ತು ಮಾರಾಟ ವಿಭಾಗದಲ್ಲಿ ತನ್ನದೇ ಜನಪ್ರಿಯತೆಯನ್ನು ಹೊಂದಿರುವ ಟಿವಿಎಸ್, ದಕ್ಷಿಣ ಭಾರತದ ಮಾದರಿಯಲ್ಲೇ ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ಮತ್ತಷ್ಟು ಕಾರ್ಯಕ್ಷೇತ್ರಗಳನ್ನು ಹೆಚ್ಚಿಸುತ್ತಿದೆ.

ಹೊಸ ಯೋಜನೆಗಳಿಗಾಗಿ ಟಿವಿಎಸ್‌ನಿಂದ 500 ಕೋಟಿ ಬಂಡವಾಳ ಹೂಡಿಕೆ..!

ವರದಿಗಳ ಪ್ರಕಾರ ಟಿವಿಎಸ್‌ನಿಂದ ಹೊಸದಾಗಿ ಮೂರು ವಾಹನ ಉತ್ಪಾದನಾ ಘಟಕಗಳು ತೆರೆಯುವು ಸಾಧ್ಯತೆಗಳಿದ್ದು, ದೇಶಿಯವಾಗಿ ಸ್ಕೂಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸಲಿದೆ.

ಹೊಸ ಯೋಜನೆಗಳಿಗಾಗಿ ಟಿವಿಎಸ್‌ನಿಂದ 500 ಕೋಟಿ ಬಂಡವಾಳ ಹೂಡಿಕೆ..!

ಇತ್ತೀಚೆಗೆ ಬಿಎಂಡಬ್ಲ್ಯು ಮೋಟಾರ್ಡ್ ಜೊತೆ ಕೈ ಜೋಡಿಸಿರುವ ಟಿವಿಎಸ್ ಸಂಸ್ಥೆಯು, ಬಿಎಂಡಬ್ಲ್ಯು ಜಿ310 ಜಿಎಸ್ ಸೂಪರ್ ಬೈಕ್ ಅನ್ನು ದೇಶಿಯವಾಗಿ ಉತ್ಪಾದನೆ ಮಾಡುವ ಹೊಣೆ ಹೊತ್ತಿದೆ.

ಹೊಸ ಯೋಜನೆಗಳಿಗಾಗಿ ಟಿವಿಎಸ್‌ನಿಂದ 500 ಕೋಟಿ ಬಂಡವಾಳ ಹೂಡಿಕೆ..!

ಕೇವಲ ದೇಶಿಯವಾಗಿ ಅಷ್ಟೇ ಅಲ್ಲದೇ ಭಾರತದಿಂದಯೇ ಬಿಎಂಡಬ್ಲ್ಯು ಮೋಟಾರ್ಡ್‌ನ ಜಿ310 ಜಿಎಸ್ ಸೂಪರ್ ಬೈಕ್ ರಫ್ತು ಕೂಡಾ ಆಗಲಿದ್ದು, ಈ ಹಿನ್ನೆಲೆ ಹೊಸ ವಾಹನಗಳ ಉತ್ಪಾದನೆಗಾಗಿ ಬೃಹತ್ ಉತ್ಪಾದನಾ ಘಟಕಗಳನ್ನು ತೆರೆಯಲಿದೆ.

ಹೊಸ ಯೋಜನೆಗಳಿಗಾಗಿ ಟಿವಿಎಸ್‌ನಿಂದ 500 ಕೋಟಿ ಬಂಡವಾಳ ಹೂಡಿಕೆ..!

ಹೀಗಾಗಿ ಟಿವಿಎಸ್ ಕೈಗೊಳ್ಳುತ್ತಿರುವ ಬೃಹತ್ ಯೋಜನೆಯು ಮತ್ತಷ್ಟು ಹೊಸ ಹೊಸ ಬೈಕ್ ಮಾದರಿಗಳು ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಉದ್ಯೋಗ ಪ್ರಮಾಣವನ್ನು ಕೂಡಾ ಹೆಚ್ಚಿಸಲಿದೆ.

Read more on ಟಿವಿಎಸ್ tvs
English summary
Read in Kannada about TVS To Invest Rs 500 Crore On Operations And New Launches.
Story first published: Tuesday, July 18, 2017, 15:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark