ಖರೀದಿಗೆ ಸಿದ್ಧ 2017ರ ವಿನೂತನ ಟಿವಿಎಸ್ ವಿಗೋ- ಬಿಡುಗಡೆಗೊಂಡ ಸ್ಕೂಟರ್ ವಿಶೇಷತೆಗಳು ಕೂಡಾ ಹಲವು..!!

Written By:

BS-IV ಎಂಜಿನ್‌ನೊಂದಿಗೆ ಬಿಡುಗಡೆಯಾಗಿರುವ ವಿನೂತನ ಟಿವಿಎಸ್ ವಿಗೋ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ನೀರಿಕ್ಷೆಯಲ್ಲಿದೆ. ಪ್ರಮುಖ ಎರಡು ಬಣ್ಣಗಳಲ್ಲಿ ಲಭ್ಯವಿರುವ ವಿಗೋ ಮೆಟಾಲಿಕ್ ಆರೇಂಜ್ ಮತ್ತು ಟಿ-ಗ್ರೆ ಬಣ್ಣಗಳಲ್ಲಿ ಲಭ್ಯವಿದೆ. ದೆಹಲಿ ಎಕ್ಸ್‌ಶೋಂ ಪ್ರಕಾರ ನೂತನ ಸ್ಕೂಟರ್ ಬೆಲೆ ರೂ.50,434ಗಳಿಗೆ ಲಭ್ಯವಿದೆ.

ಖರೀದಿಗೆ ಸಿದ್ಧ 2017ರ ವಿನೂತನ ಟಿವಿಎಸ್ ವಿಗೋ- ಬಿಡುಗಡೆಗೊಂಡ ಸ್ಕೂಟಕ್ ವಿಶೇಷತೆಗಳು ಕೂಡಾ ಹಲವು..!!

ವಿನೂತನ ಮಾದರಿಯಲ್ಲಿ ಸಿದ್ಧಗೊಂಡಿರುವ 2017ರ ಟಿವಿಎಸ್ ವಿಗೋ 110 ಸಿಸಿ ಸಾಮರ್ಥ್ಯದ CVTi ಎಂಜಿನ್ ಹೊಂದಿದ್ದು, ಡ್ಯುಯಲ್ ಟೋನ್ ಸೀಟ್ ಕವರ್ ಮತ್ತು ಸಿಲ್ವರ್ ಓಕ್ ಫಲಕಗಳು ಗಮನಸೆಳೆಯುತ್ತವೆ. ಜೊತೆಗೆ ಯುಎಸ್‌ಬಿ ಪೋರ್ಟ್ ಚಾರ್ಜಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.

ಖರೀದಿಗೆ ಸಿದ್ಧ 2017ರ ವಿನೂತನ ಟಿವಿಎಸ್ ವಿಗೋ- ಬಿಡುಗಡೆಗೊಂಡ ಸ್ಕೂಟಕ್ ವಿಶೇಷತೆಗಳು ಕೂಡಾ ಹಲವು..!!

ಇದೇ ಸಂದರ್ಭದಲ್ಲಿ ಮಾತನಾಡಿದ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್ "ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಟಿವಿಎಸ್ ವಿಗೋ ಎರಡನೇ ಬಾರಿಗೆ ಅಂತರ್‌ರಾಷ್ಟ್ರೀಯ ಪಶಸ್ತಿ ಪಡೆದಿದ್ದು, ಗುಣಮಟ್ಟ ಸಮೀಕ್ಷೆ ನಂ 1 ಆಗಿ ಹೊರಹೊಮ್ಮಿದೆ" ಎಂದಿದ್ದಾರೆ. ಹೀಗಾಗಿ ಟಿವಿಎಸ್ ಕಾರ್ಯಕ್ಷಮತೆ ಗ್ರಾಹಕರಿಗೆ ತೃಪ್ತಿ ತರಲಿದೆ ಎಂಬ ನೀರಿಕ್ಷೆಯಿದೆ.

ಖರೀದಿಗೆ ಸಿದ್ಧ 2017ರ ವಿನೂತನ ಟಿವಿಎಸ್ ವಿಗೋ- ಬಿಡುಗಡೆಗೊಂಡ ಸ್ಕೂಟಕ್ ವಿಶೇಷತೆಗಳು ಕೂಡಾ ಹಲವು..!!

ಗುಣಮಟ್ಟದ ಮೇಲೆ ಹೆಚ್ಚಿನ ಒತ್ತು ನೀಡಿರುವ ಟಿವಿಎಸ್, ವಿಗೋ ಗ್ರಾಹಕರ ಬೇಡಿಕೆ ತಕ್ಕಂತೆ ಹೊಸ ಮಾದರಿಯನ್ನು ಸಿದ್ಧಗೊಳಿಸಲಾಗಿದೆ. ಹೀಗಾಗಿಯೇ ಸತತ 2ನೇ ಬಾರಿಗೆ ಜೆಡಿ ಪವರ್ ಗುಣಮಟ್ಟ ಸಮೀಕ್ಷೆಯಲ್ಲಿ ಪ್ರಶಸ್ತಿ ಗಳಿಸಿರುವ ಟಿವಿಎಸ್, ಮತ್ತೊಮ್ಮೆ ಬೃಹತ್ ಮಾರಾಟದ ನೀರಿಕ್ಷೆ ಹೊಂದಿದೆ.

ಖರೀದಿಗೆ ಸಿದ್ಧ 2017ರ ವಿನೂತನ ಟಿವಿಎಸ್ ವಿಗೋ- ಬಿಡುಗಡೆಗೊಂಡ ಸ್ಕೂಟಕ್ ವಿಶೇಷತೆಗಳು ಕೂಡಾ ಹಲವು..!!

ಅನಿರುದ್ಧ ಹಲ್ದಾರ್ ಮತ್ತಷ್ಟು ಹೇಳಿಕೆ ಪ್ರಕಾರ "ಟಿವಿಎಸ್ ಉತ್ಪನ್ನಗಳು, ಸೂಕ್ಷ್ಮದರ್ಶಿ ಗ್ರಾಹಕರ ಮನಸೆಳೆಯುವಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ವಿನೂತನ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಮಧ್ಯಮ ವರ್ಗಗಳಿಗೆ ವರದಾನವಾಗಲಿದೆ"ಎಂದಿದ್ದಾರೆ.

ಖರೀದಿಗೆ ಸಿದ್ಧ 2017ರ ವಿನೂತನ ಟಿವಿಎಸ್ ವಿಗೋ- ಬಿಡುಗಡೆಗೊಂಡ ಸ್ಕೂಟಕ್ ವಿಶೇಷತೆಗಳು ಕೂಡಾ ಹಲವು..!!

BS-IV ಎಂಜಿನ್‌ ಮತ್ತು ಸಿಂಕ್ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ ಟಿವಿಎಸ್ ವಿಗೋ, ಡ್ಯೂಯಲ್ ಟೋನ್ ಸೀಟ್ ಕವರ್ ಮತ್ತು ಸಿಲ್ವರ್ ಓಕ್ ಫಲಕಗಳನ್ನು ಹೊಂದಿದೆ. ಇದಲ್ಲದೇ ಸಂಪೂರ್ಣವಾಗಿ ಡಿಜಿಟಲ್ ಸ್ಪೀಡೋ ಮತ್ತು ಯುಎಸ್‌ಬಿ ಪೋರ್ಟ್ ಚಾರ್ಜಿಂಗ್ ವ್ಯವಸ್ಥೆಯಿದೆ.

ಖರೀದಿಗೆ ಸಿದ್ಧ 2017ರ ವಿನೂತನ ಟಿವಿಎಸ್ ವಿಗೋ- ಬಿಡುಗಡೆಗೊಂಡ ಸ್ಕೂಟಕ್ ವಿಶೇಷತೆಗಳು ಕೂಡಾ ಹಲವು..!!

ಸಂಪೂರ್ಣ ಹೊಸ ವೈಶಿಷ್ಠ್ಯತೆಗಳೊಂದಿಗೆ ಕೂಡಿರುವ ಟಿವಿಎಸ್ ವಿಗೋ, ಯುವ ಸಮುದಾಯವನ್ನು ಸೆಳೆಯುವ ತಂತ್ರ ಹೊಂದಿದೆ. ಜೊತೆಗೆ ನಗರ ಪ್ರದೇಶದ ಮಧ್ಯಮ ವರ್ಗದವರನ್ನು ಹೆಚ್ಚು ಸೆಳೆಯುವ ನೀರಿಕ್ಷೆಯಿದೆ.

ಖರೀದಿಗೆ ಸಿದ್ಧ 2017ರ ವಿನೂತನ ಟಿವಿಎಸ್ ವಿಗೋ- ಬಿಡುಗಡೆಗೊಂಡ ಸ್ಕೂಟಕ್ ವಿಶೇಷತೆಗಳು ಕೂಡಾ ಹಲವು..!!

150 ಎಸ್ಆರ್ ಸ್ಕೂಟರ್ ಖರೀದಿ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಟಿವಿಎಸ್ tvs
English summary
TVS Motor Company has launched the 2017 Wego with BS-IV engine with a price tag of Rs 50,434 ex-showroom (Delhi). Now available in two new colours - Metallic Orange and T-Grey.
Please Wait while comments are loading...

Latest Photos