ಟ್ವೆಂಟಿ ಟು ಸಂಸ್ಥೆಯ ಫ್ಲೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ಧ
ಸ್ಟಾರ್ಟ್ ಅಪ್ ಯೋಜನೆ ಅಡಿ ಈಗಾಗಲೇ ದೇಶಾದ್ಯಂತ ಸಾವಿರಾರು ಹೊಸ ಸಂಸ್ಥೆಗಳು ಕಾರ್ಯೋನ್ಮುಖವಾಗಿದ್ದು, ಈ ನಡುವೆ ಟ್ವೆಂಟಿ ಟು ಎನ್ನುವ ಸಂಸ್ಥೆಯೊಂದು ವಿನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಅಭಿವೃದ್ಧಿಗೊಳಿಸಿ ಬಿಡುಗಡೆಗೆ ಸಜ್ಜುಗೊಂಡಿ
ಸ್ಟಾರ್ಟ್ ಅಪ್ ಯೋಜನೆ ಅಡಿ ಈಗಾಗಲೇ ದೇಶಾದ್ಯಂತ ಸಾವಿರಾರು ಹೊಸ ಸಂಸ್ಥೆಗಳು ಕಾರ್ಯೋನ್ಮುಖವಾಗಿದ್ದು, ಈ ನಡುವೆ ಟ್ವೆಂಟಿ ಟು ಎನ್ನುವ ಸಂಸ್ಥೆಯೊಂದು ವಿನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಅಭಿವೃದ್ಧಿಗೊಳಿಸಿ ಬಿಡುಗಡೆಗೆ ಸಜ್ಜುಗೊಂಡಿದೆ.

2030ರ ವೇಳೆಗೆ ರಸ್ತೆಗಿಳಿಯುವ ಪ್ರತಿ ವಾಹನವು ಎಲೆಕ್ಟ್ರಿಕ್ ವಾಹನವಾಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆಟೋ ವಲಯದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಟ್ವೆಂಟಿ ಟು ಸಂಸ್ಥೆಯು ಕೂಡಾ ಉತ್ತಮ ಮೈಲೇಜ್ ಒದಗಿಸಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಿರ್ಮಾಣ ಮಾಡಿದೆ.

ಪ್ರತಿಷ್ಠಿತ ಬಾಷ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಟ್ವೆಂಟಿ ಟು ಸಂಸ್ಥೆಯು 'ಫ್ಲೋ' ಎನ್ನುವ ಹೆಸರಿನಲ್ಲಿ ಸ್ಕೂಟರ್ ನಿರ್ಮಾಣ ಮಾಡಿದ್ದು, ಒಂದು ಬಾರಿ ಚಾರ್ಜಿಂಗ್ ಮಾಡಿದಲ್ಲಿ ಗರಿಷ್ಠ ಪ್ರಮಾಣದ 80 ಕಿ.ಮಿ ಮೈಲೇಜ್ ನೀಡಲಿದೆ.
Recommended Video


ಹೀಗಾಗಿ ಟ್ವೆಂಟಿ ಟು ಸಂಸ್ಥೆಯು ನಿರ್ಮಾಣ ಮಾಡಿರುವ ಫ್ಲೋ ಸ್ಕೂಟರ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಇದು ಮೈಲೇಜ್ ಮೇಲೆ ಹೆಚ್ಚು ನೀರಿಕ್ಷೆ ಇಟ್ಟುಕೊಳ್ಳುವ ಭಾರತೀಯ ಗ್ರಾಹಕರನ್ನು ಸೆಳೆಯುವುದಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಇನ್ನು ಫ್ಲೋ ಸ್ಕೂಟರ್ ಕೂಡಾ ಇತರೆ ಸ್ಕೂಟರ್ ಮಾದರಿಗಳಂತೆ ಸುಧಾರಿತ ಅಂಶಗಳನ್ನು ಹೊಂದಿದ್ದು, ಎಲ್ಇಡಿ ಹೆಡ್‍ಲ್ಯಾಂಪ್, ಶಾರ್ಪ್ ಎಡ್ಜ್, ಬಲಿಷ್ಠ ಮುನ್ನೋಟ, ಸ್ಟೈಲಿಷ್ ಸಸ್ಪೆಷನ್ ಮತ್ತು ಡಿಸ್ಕ್ ಬ್ರೇಕ್ ಹೊಂದಿದೆ.

ಜೊತೆಗೆ ಫ್ಲೋ ಸ್ಕೂಟರ್ 150 ಕೆಜಿ ಭಾರವಿದ್ದು, ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜ್ ಪಡೆಯಲು 2 ಗಂಟೆ ತೆಗದುಕೊಳ್ಳಲಿದೆ. ಈ ಮೂಲಕ 80 ಕಿಮಿ ಮೈಲೇಜ್ ನೀಡುವುದಲ್ಲದೇ 9 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.
ತಪ್ಪದೇ ಓದಿ-ಅವೆಂಜರ್ 150 ಹಿಂದಿಕ್ಕುತ್ತಾ ಸುಜುಕಿ ಹೊಸ ಬೈಕ್ ಇನ್‍ಟ್ರುಡರ್ 150?

ಬಿಡುಗಡೆ ದಿನಾಂಕ
ಮೂಲಗಳ ಪ್ರಕಾರ 2018ರ ಮಾರ್ಚ್‌ನಲ್ಲಿ ನಡೆಯಲಿರುವ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಬೆಲೆ (ಅಂದಾಜು)
ಫ್ಲೋ ಸ್ಕೂಟರ್ ಬೆಲೆ ವಿಚಾರ ನಿಖರವಾಗಿಲ್ಲವಾದರೂ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಬಳಕೆ ಹಿನ್ನೆಲೆ ಹೊಸ ಸ್ಕೂಟರ್ ಬೆಲೆಯು ರೂ. 65 ಸಾವಿರದಿಂದ ರೂ.70 ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಟ್ವೆಂಟಿ ಟು ಸಂಸ್ಥೆಯು ಅಭಿವೃದ್ಧಿ ಮಾಡಿರುವ ಫ್ಲೋ ಸ್ಕೂಟರ್ ಹಲವು ವಿಶೇಷತೆಗಳಿಂದ ಕೂಡಿದ್ದು, ಮೈಲೇಜ್ ವಿಚಾರವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೇಡಿಕೆ ಹೊಂದುವ ನೀರಿಕ್ಷೆ ಇದೆ ಎನ್ನಬಹುದು.
Trending On DriveSpark Kannada:
100 ಸಿಸಿ ಬೈಕ್ ವಿಚಾರದಲ್ಲಿ ಕೊನೆಗೂ ಸಾರ್ವಜನಿಕರ ವಿರೋಧಕ್ಕೆ ಮಣಿದ ರಾಜ್ಯಸರ್ಕಾರ..!!


Click it and Unblock the Notifications








