ಬಿಡುಗಡೆ ಸಜ್ಜುಗೊಳ್ಳುತ್ತಿದೆ ಬಜಾಜ್ ಪಲ್ಸರ್ ಎನ್ಎಸ್200 ಅಡ್ವೆಂಚರ್

ಬಜಾಜ್ ಆಟೋ ತನ್ನ ಜನಪ್ರಿಯ ಪಲ್ಸರ್ ಎನ್ಎಸ್ 200 ಬೈಕ್ ಮಾದರಿ ಅಡ್ವೆಂಚರ್ ಆವೃತ್ತಿಯನ್ನು ಹೊರತರುತ್ತಿದ್ದು, ಇದಕ್ಕೂ ಮುನ್ನ ಟರ್ಕಿಯಲ್ಲಿ ಆರಂಭವಾಗಿರುವ ಇಸ್ತಾಂಬುಲ್ ಆಟೋ ಮೇಳದಲ್ಲಿ ಹೊಸ ಬೈಕ್‌ ಅನ್ನು ಅನಾವರಣಗೊಳಿಸಿದೆ.

By Praveen Sannamani

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾದ ಬಜಾಜ್ ಆಟೋ ತನ್ನ ಜನಪ್ರಿಯ ಪಲ್ಸರ್ ಎನ್ಎಸ್ 200 ಬೈಕ್ ಮಾದರಿ ಅಡ್ವೆಂಚರ್ ಆವೃತ್ತಿಯನ್ನು ಹೊರತರುತ್ತಿದ್ದು, ಇದಕ್ಕೂ ಮುನ್ನ ಟರ್ಕಿಯಲ್ಲಿ ಆರಂಭವಾಗಿರುವ ಇಸ್ತಾಂಬುಲ್ ಆಟೋ ಮೇಳದಲ್ಲಿ ಹೊಸ ಬೈಕ್‌ ಅನ್ನು ಅನಾವರಣಗೊಳಿಸಿದೆ.

ಬಿಡುಗಡೆ ಸಜ್ಜುಗೊಳ್ಳುತ್ತಿದೆ ಬಜಾಜ್ ಪಲ್ಸರ್ ಎನ್ಎಸ್200 ಅಡ್ವೆಂಚರ್

ಕಳೆದ 2 ತಿಂಗಳು ಹಿಂದಷ್ಟೇ ಎಬಿಎಸ್ ತಂತ್ರಜ್ಞಾನ ಹೊಂದಿರುವ ಪಲ್ಸರ್ ಎನ್ಎಸ್200 ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದ ಬಜಾಜ್, ಇದೀಗ ಅಡ್ವೆಂಚರ್ ಮಾದರಿಯನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿರುವುದು ಮಧ್ಯಮ ಗಾತ್ರದ ಸೂಪರ್ ಬೈಕ್ ಪ್ರಿಯರಿಗೆ ಡಬಲ್ ಧಮಾಕಾ ನೀಡುತ್ತಿದೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಬಿಡುಗಡೆ ಸಜ್ಜುಗೊಳ್ಳುತ್ತಿದೆ ಬಜಾಜ್ ಪಲ್ಸರ್ ಎನ್ಎಸ್200 ಅಡ್ವೆಂಚರ್

ಸಾಮಾನ್ಯ ಮಾದರಿಯ ಪಲ್ಸರ್ ಎನ್ಎಸ್200 ವೈಶಿಷ್ಟ್ಯತೆಗಳನ್ನೇ ಪಡೆದಿದ್ದರು ಅಡ್ವೆಂಚರ್ ಆವೃತ್ತಿಯಲ್ಲಿ ವಿಶೇಷ ವಿನ್ಯಾಸಗಳನ್ನು ಅಳವಡಿಸಲಾಗಿದ್ದು, ಆಪ್ ರೋಡ್ ಕಿಟ್, ಆಪ್ ರೋಡ್ ಟೈರ್ ಮತ್ತು ಆಪ್ ರೋಡ್ ಶೈಲಿಯ ಬಾಡಿ ಡಿಸೈನ್ ಪಡೆದುಕೊಂಡಿದೆ.

ಬಿಡುಗಡೆ ಸಜ್ಜುಗೊಳ್ಳುತ್ತಿದೆ ಬಜಾಜ್ ಪಲ್ಸರ್ ಎನ್ಎಸ್200 ಅಡ್ವೆಂಚರ್

ಹೊಸ ಬೈಕಿನಲ್ಲಿ ಆಪ್ ರೋಡ್ ಪ್ರಯಾಣಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳಿದ್ದು, ಹ್ಯಾಂಡಲ್‌ಬಾರ್‌ನಲ್ಲಿ ನೆವಿಗೆಷನ್ ಡಿವೈಸ್, ಸ್ಪ್ಲಿಟ್ ಸೀಟುಗಳು, ಲಗೇಜ್ ರಾಕ್ ಮತ್ತು ಪ್ಯಾನಿಯರ್ ಫ್ರೇಮ್ ಸೌಲಭ್ಯ ಹೊಂದಿರಲಿದೆ.

ಬಿಡುಗಡೆ ಸಜ್ಜುಗೊಳ್ಳುತ್ತಿದೆ ಬಜಾಜ್ ಪಲ್ಸರ್ ಎನ್ಎಸ್200 ಅಡ್ವೆಂಚರ್

ಎಂಜಿನ್ ಸಾಮರ್ಥ್ಯ

200 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಲ್ ಇಂಜೆಕ್ಷೆಡ್ ಅಥವಾ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಲಿರುವ ಪಲ್ಸರ್ ಎನ್ಎಸ್ 200 ಅಡ್ವೆಂಚರ್ , ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಜೊತೆ 24 ಬಿಎಚ್‌ಪಿ ಹಾಗೂ 18.6 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಬಿಡುಗಡೆ ಸಜ್ಜುಗೊಳ್ಳುತ್ತಿದೆ ಬಜಾಜ್ ಪಲ್ಸರ್ ಎನ್ಎಸ್200 ಅಡ್ವೆಂಚರ್

ಹೊಸ ಬೈಕ್ ಆವೃತ್ತಿಯಲ್ಲಿ ಆಪ್ ರೋಡ್ ಕಿಟ್ ಮತ್ತು ಎಬಿಎಸ್ ಹೊರತಾಗಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ. ಅಲ್ಲದೇ ಹೊಸ ವಿನ್ಯಾಸಗಳಾದ ಬ್ಲ್ಯಾಕ್, ವೈಟ್ ಮತ್ತು ಸ್ಪೋರ್ಟಿ ಡಿಕಾಲ್ಸ್‌ನೊಂದಿಗೆ ರೆಡ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಬಿಡುಗಡೆ ಸಜ್ಜುಗೊಳ್ಳುತ್ತಿದೆ ಬಜಾಜ್ ಪಲ್ಸರ್ ಎನ್ಎಸ್200 ಅಡ್ವೆಂಚರ್

ಜೊತೆಗೆ ಎಂಟ್ರಿ ಲೆವೆಲ್ ನಿರ್ವಹಣಾ ಬ್ರೇಕ್, ರಿಯರ್ ಮೊನೊಶಾಕ್, ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್, ಅಗಲವಾದ ಟ್ಯೂಬೆಲೆಸ್ ಚಕ್ರಗಳನ್ನು ಹೊಂದಿರಲಿದ್ದು, ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ, ಯಮಹಾ ಎಫ್‌ಝಡ್25 ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

ಬಿಡುಗಡೆ ಸಜ್ಜುಗೊಳ್ಳುತ್ತಿದೆ ಬಜಾಜ್ ಪಲ್ಸರ್ ಎನ್ಎಸ್200 ಅಡ್ವೆಂಚರ್

ಆದ್ರೆ ಕೆಲವು ವರದಿಗಳ ಪ್ರಕಾರ ಪಲ್ಸರ್ ಎನ್ಎಸ್200 ಅಡ್ವೆಂಚರ್ ಮಾದರಿಯನ್ನು ವಿದೇಶಿ ಮಾರುಕಟ್ಟೆಗಳಿಗೆ ಮಾತ್ರ ಸಿದ್ದಪಡಿಸಲಾಗಿದ್ದು, ಭಾರತದಲ್ಲಿ ಎಬಿಎಸ್ ಪಲ್ಸರ್ ಎನ್ಎಸ್200 ಆವೃತ್ತಿಯನ್ನು ಮಾತ್ರ ಮುಂದುವರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಈ ಹಿಂದಿನ ಬಜಾಜ್ ಅಡ್ವೆಂಚರ್ ಮಾದರಿಗಳಾದ ಎಎಸ್200 ಮತ್ತು ಎಎಸ್150 ಅಷ್ಟಾಗಿ ಜನಪ್ರಿಯತೆ ಗಳಿಸಿಲ್ಲ ಎನ್ನುವುದು ಕೂಡಾ ಪ್ರಮುಖ ಕಾರಣವಾಗಿದೆ.

Most Read Articles

Kannada
Read more on ಬಜಾಜ್
English summary
Bajaj Pulsar NS200 Adventure Edition Unveiled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X