TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಡುಕಾಟಿ ಪ್ಯಾನಿಗಾಲೆ ವಿ4 ಆರ್ ಬೈಕ್ ಬಿಡುಗಡೆ- ಬೆಲೆ 51.87 ಲಕ್ಷ ಮಾತ್ರ..!
ಸೂಪರ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಡುಕಾಟಿ ಸಂಸ್ಥೆಯು ಭಾರತದಲ್ಲಿ ತನ್ನ ಟ್ರ್ಯಾಕ್ ರೇಸರ್ ಮಾದರಿಯಾದ ಪ್ಯಾನಿಗಾಲೆ ವಿ4 ಆರ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ವಿನೂತನ ತಂತ್ರಜ್ಞಾನ ಹೊಂದಿರುವ ಹೊಸ ಬೈಕಿನ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ 51.87 ಲಕ್ಷಕ್ಕೆ ನಿಗದಿ ಮಾಡಲಾಗಿದೆ.
ಭಾರತದಲ್ಲಿ ಸದ್ಯ ಟ್ರ್ಯಾಕ್ ಪರ್ಫಾಮೆನ್ಸ್ ಉದ್ದೇಶಗಳಿಗಾಗಿ ಸೂಪರ್ ಬೈಕ್‌ಗಳಿಗೆ ಹೆಚ್ಚಿನ ಮಟ್ಟದ ಬೇಡಿಕೆ ದಾಖಲಾಗುತ್ತಿದ್ದು, ಈ ಹಿನ್ನೆಲೆ ಡುಕಾಟಿ ಸಂಸ್ಥೆಯು ತನ್ನ ಜನಪ್ರಿಯ ಮೊಟೊ ಜಿಪಿ ಟೆಕ್ನಾಲಜಿ ಆಧಾರಿತ ಪ್ಯಾನಿಗಾಲೆ ವಿ4 ಆರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲೂ ಪರಿಚಯಿಸಿದೆ.
ಬೈಕ್‌ಗಳ ಶೈಲಿ, ಉತ್ಕೃಷ್ಟತೆ ಮತ್ತು ಎಂಜಿನ್ ಕಾರ್ಯಕ್ಷಮತೆ ಆಧಾರ ಮೇಲೆ ಡುಕಾಟಿ ಬೈಕ್‌ಗಳ ಬೆಲೆ ನಿಗದಿಯಾಗಿದ್ದು, ಜಾಗತಿಕವಾಗಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಡುಕಾಟಿ ಹಲವು ದುಬಾರಿ ಬೈಕ್ ಮಾದರಿಗಳನ್ನು ಸಿದ್ದಗೊಳಿಸಿ ಮಾರಾಟ ಮಾಡುತ್ತಿದೆ.
ಇದರಲ್ಲಿ ಪ್ಯಾನಿಗಾಲೆ ವಿ4 ಆರ್ ಬೈಕ್ ಮಾದರಿಯು ಯುರೋಪಿನ್ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಸಾಧಿಸಿದ್ದು, ಇದೇ ಕಾರಣಕ್ಕೆ ಭಾರತದಲ್ಲಿ ಹೆಚ್ಚುತ್ತಿರುವ ಟ್ರ್ಯಾಕ್ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲು ಇದೇ ಮೊದಲ ಬಾರಿಗೆ ಏಷ್ಯಾ ಮಾರುಕಟ್ಟೆಯಲ್ಲಿ ಪ್ಯಾನಿಗಾಲೆ ವಿ4 ಆರ್ ಬೈಕ್ ಬಿಡುಗಡೆ ಮಾಡಲಾಗಿದೆ.
ಎಂಜಿನ್ ಸಾಮರ್ಥ್ಯ
ಪ್ಯಾನಿಗಾಲೆ ವಿ4 ಆರ್ ಬೈಕ್ ಮಾದರಿಯು 998 ಸಿಸಿ ವಿ4 ಡೆಸ್ಮೊಸ್ಸಿಡಿ ಸ್ಟ್ರಾಡಲೆ ಆರ್ ಎಂಜಿನ್ ಪಡೆದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಗರಿಷ್ಠ ಮಟ್ಟದ 222-ಬಿಎಚ್‌ಪಿ ಮತ್ತು 111-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.
ಎಂಜಿನ್ ದಕ್ಷತೆ ಹೆಚ್ಚಿಸುವ ಉದ್ದೇಶದಿಂದ ಹೊಸ ಪ್ಯಾನಿಗಾಲೆ ವಿ4 ಆರ್ ಬೈಕ್ ತೂಕದಲ್ಲಿ ಈ ಹಿಂದಿನ ಮಾದರಿಗಿಂತ 2 ಕೆಜಿ ತೂಕ ಕಡಿತ ಮಾಡಲಾಗಿದ್ದು, ಸದ್ಯ 172ಕೆಜಿ ತೂಕ ಹೊಂದಿರುವ ಈ ಬೈಕ್ ಮಾದರಿಯು ಮಾರುಕಟ್ಟೆಯಲ್ಲಿರುವ ವಿ4 ಮತ್ತು ವಿ4 ಎಸ್ ಆವೃತ್ತಿಗಳಿಂತ ಹೆಚ್ಚಿನ ಇಂಧನ ದಕ್ಷತೆ ಪಡೆದಿದೆ.
ಇನ್ನು ಡುಕಾಟಿ ಸಂಸ್ಥೆಯು ವಿ4 ಆರ್ ಬೈಕ್ ಬಿಡುಗಡೆಗೊಂದಿಗೆ ಹೊಸ ಬೈಕ್ ಖರೀದಿಗಾಗಿ ಈಗಾಗಲೇ ದೇಶಾದ್ಯಂತ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದೇ ತಿಂಗಳು 30ಕ್ಕೆ ಹೊಸ ಬೈಕ್ ಖರೀದಿಗಾಗಿ ಮುಂಗಡ ಪ್ರಕ್ರಿಯೆಯು ಕೊನೆಗೊಳ್ಳಲಿದೆ.
ಹೀಗಾಗಿ ಈ ತಿಂಗಳು ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ 2019ರ ಮೊದಲ ತ್ರೈಮಾಸಿಕ ಅವಧಿಗೆ ಹೊಸ ಬೈಕ್ ವಿತರಣೆ ನಡೆಯಲಿದ್ದು, ನ.30ರ ನಂತರ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಜೂನ್ ಆರಂಭದಲ್ಲಿ ಹೊಸ ಬೈಕ್ ಸಿಗಲಿವೆ.
MOST READ: ಜಾವಾ ನಂತರ ಯಜ್ಡಿ ಬೈಕ್‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!
ಕೇವಲ 5 ಬೈಕ್ ಮಾತ್ರ ಲಭ್ಯ..!
ಹೌದು, ಡುಕಾಟಿ ಸಂಸ್ಥೆಯು ಬಿಡುಗಡೆ ಮಾಡಿರುವ ದುಬಾರಿ ಬೆಲೆಯ ಪ್ಯಾನಿಗಾಲೆ ವಿ4 ಆರ್ ಬೈಕ್ ಆವೃತ್ತಿಯಲ್ಲಿ 5 ಯುನಿಟ್‌ಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದ್ದು, 2ನೇ ತ್ರೈಮಾಸಿಕ ಅವಧಿಗೆ ಗ್ರಾಹಕರ ಬೇಡಿಕೆಯ ಆಧಾರದ ಇದು ಹೆಚ್ಚಾಗುವ ಸಾಧ್ಯತೆಗಳಿವೆ.
ಈ ಬಗ್ಗೆ ಮಾತನಾಡಿರುವ ಡುಕಾಟಿ ಸಂಸ್ಥೆಯ ನಿರ್ದೇಶಕ ಸೆರ್ಗಿ ಕೆನೋವಾಸ್ ಅವರು ಭಾರತದಲ್ಲಿ ಟ್ರ್ಯಾಕ್ ಪರ್ಫಾಮೆನ್ಸ್ ಉದ್ದೇಶಗಳಿಗಾಗಿ ಅತ್ಯುತ್ತಮ ಸೂಪರ್ ಬೈಕ್‌ಗಳಿಗೆ ಬೇಡಿಕೆಯಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಮೊದಲ ಹಂತವಾಗಿ ಕಡಿಮೆ ಪ್ರಮಾಣದಲ್ಲಿ ಪ್ಯಾನಿಗಾಲೆ ವಿ4 ಆರ್ ಪರಿಚಯಿಸಲಾಗಿದೆ. ಇದು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಹೆಚ್ಚಳ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.